
Jammu- Kashmir: ಮಾದಕವಸ್ತು ಕಳ್ಳಸಾಗಣೆ; 217 ಮಂದಿ ಸೆರೆ
Team Udayavani, Jun 2, 2023, 6:40 AM IST

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮಾದಕವಸ್ತು ಕಳ್ಳಸಾಗಣೆ ತಡೆಗಟ್ಟುವ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, 2023ರ ಈ ಮೊದಲಾರ್ಧ ವರ್ಷದಲ್ಲಿ ಕಣಿವೆಯಲ್ಲಿ 7 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜತೆಗೆ 217 ಮಂದಿ ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ. ಎನ್‌ಡಿಪಿಎಸ್ ಕಾಯ್ದೆ ಅನ್ವಯ ಬಾರಾಮುಲ್ಲಾ ಪೊಲೀಸರು 144 ಪ್ರಕರಣಗಳನ್ನು ಮೊದಲ 5 ತಿಂಗಳಲ್ಲಿ ದಾಖಲಿಸಿ, 217 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ 23 ಮಂದಿ ಸ್ವತಃ ಮಾದಕ ವ್ಯಸನಿಗಳಾಗಿದ್ದು, ಅವರ ವಿರುದ್ಧ ಪಿಎಸ್‌ಎ, ಪಿಐಟಿಎನ್‌ಡಿಪಿಎಸ್ ಕಾಯ್ದೆಗಳ ಅನ್ವಯ ಪ್ರಕರಣ ದಾಖ ಲಿಸಲಾಗಿದೆ.
ಅಲ್ಲದೇ ಕಾಳಸಂತೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಈ ಪೈಕಿ 3.41 ಕೋಟಿ ಮೌಲ್ಯದ 2.625 ಕೆಜಿ ಬ್ರೌನ್ ಶುಗರ್, 3.14 ಕೋಟಿ ಮೌಲ್ಯದ 2,419 ಕೆಜಿ ಹೆರಾಯಿನ್ ಹಾಗೂ ಕ್ಯಾನೆಬಿಸ್, ಪ್ಪಾಪಿ ಸ್ಟ್ರಾಗಳೂ ಸೇರಿವೆ. ಜತೆಗೆ 43.90 ಲಕ್ಷ ನಗದು ಹಾಗೂ 15 ವಾಹನಗಳನ್ನು ಜಪ್ತಿಗೊಳಿಸಲಾಗಿದೆ. ಈ ವರೆಗೆ ವಶಕ್ಕೆ ಪಡೆದ ಎಲ್ಲದರ ಒಟ್ಟು ಮೌಲ್ಯ 7,69,91,000 ಕೋಟಿ ರೂ.ಗಳೆಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hoshiarpur; ಕಿರಾಣಿ ಅಂಗಡಿಯೆದುರು ಶಿರೋಮಣಿ ಅಕಾಲಿ ದಳ ನಾಯಕನ ಗುಂಡಿಕ್ಕಿ ಹತ್ಯೆ

Teacher: ಹಿಂದೂ ವಿದ್ಯಾರ್ಥಿಗೆ ಮುಸ್ಲಿಂ ವಿದ್ಯಾರ್ಥಿಯಿಂದ ಕಪಾಳಮೋಕ್ಷ… ಶಿಕ್ಷಕಿ ಬಂಧನ

Pregnant;ವಿವಾಹಕ್ಕೂ ಮುನ್ನ ಗರ್ಭಿಣಿಯಾದ ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ ತಾಯಿ!

Uttar Pradesh: ಮಗಳ ಮದುವೆಗೆ ಕೂಡಿಟ್ಟ 18 ಲಕ್ಷ ರೂ. ಗೆದ್ದಲು ಪಾಲು!

Today ಆರ್ಟ್ ಆಫ್ ಲಿವಿಂಗ್ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ
MUST WATCH
ಹೊಸ ಸೇರ್ಪಡೆ

World Cup; ಲೆಗ್ ಸ್ಪಿನ್ನರ್ ಚಾಹಲ್ ಕಡೆಗಣಿಸಿರುವುದು ತಪ್ಪು : ಯುವರಾಜ್ ಸಿಂಗ್

Mangaluru ಪ್ರತಿ ಟನ್ ಗೆ 150 ರೂ. ಬಾಡಿಗೆ ಏರಿಕೆ ಭರವಸೆ: ಮುಷ್ಕರ ಹಿಂತೆಗೆದ ಲಾರಿ ಯೂನಿಯನ್

ICC World Cup 2023; ಎಲ್ಲಾ ಹತ್ತು ತಂಡಗಳ ಆಟಗಾರರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Theft: ಶೂ ಬಾಕ್‌ನಲ್ಲಿದ್ದ ಮನೆ ಕೀ ಕದ್ದು ಆಭರಣ ದೋಚಿದ್ದ ಮಹಿಳೆ ಸೆರೆ

Cop In Trouble: ರೀಲ್ಸ್ ಮಾಡಲು ಡ್ಯೂಟಿ ವಾಹನ ನೀಡಿ ತೊಂದರೆಗೆ ಸಿಲುಕಿದ ಪೊಲೀಸ್ ಅಧಿಕಾರಿ