
ಜಾತ್ರೆ ಸಂಭ್ರಮ-ದೇವರ ವಿಗ್ರಹ ಕ್ರೇನ್ ನಿಂದ ಕೆಳಗೆ ಬಿದ್ದು..ನಾಲ್ಕು ಭಕ್ತರ ಮೃತ್ಯು
ಎಂಟು ಜನರ ಭಾರದಿಂದ ಕ್ರೇನ್ ಒಂದು ಕಡೆ ವಾಲಿ ಏಕಾಏಕಿ ಬಿದ್ದಿದೆ.
Team Udayavani, Jan 23, 2023, 10:43 AM IST

ಚೆನ್ನೈ: ಊರ ಜಾತ್ರೆಯ ವೇಳೆ ದೇವರ ವಿಗ್ರಹವನ್ನು ಹೊತ್ತುಕೊಂಡು ಹೋದ ಕ್ರೇನ್ ಕೆಳಗೆ ಬಿದ್ದು ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಅರಕ್ಕೋಣಂ ಸಮೀಪದ ನೆಮಿಲಿಯ ಕಿಲ್ವೀಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ( ಜ.22 ರಂದು) ನಡೆದಿದೆ.
ಊರ ಜಾತ್ರೆಯ ಪ್ರಯುಕ್ತ ದೇವತೆಯ ವಿಗ್ರಹವನ್ನು ಕ್ರೇನ್ ಮೂಲಕ ಗ್ರಾಮದಲ್ಲಿ ಹೊತ್ತುಕೊಂಡು ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆ ನೋಡಲು ಸಾವಿರಾರು ಭಕ್ತರು ನೆರವೇರಿದ್ದಾರೆ. 25 ಅಡಿ ಎತ್ತರದಲ್ಲಿ ದೇವತೆಯನ್ನು ಕಂಡು ಜನರ ಪುಳಕಿತಗೊಂಡಿದ್ದಾರೆ.
ದೇವರನ್ನು ಅಲಂಕರಿಸಲು ಎಂಟು ಜನ ಕ್ರೇನ್ ಮೇಲೆಯೇ ವಿಗ್ರಹದ ಪಕ್ಕದಲ್ಲಿದ್ದರು. ಭಕ್ತರಿಂದ ಬರುವ ಹೂಮಾಲೆಯನ್ನು ದೇವರಿಗೆ ಸಮರ್ಪಿಸುತ್ತಿದ್ದರು. ಇದೇ ವೇಳೆ ಎಂಟು ಜನರ ಭಾರದಿಂದ ಕ್ರೇನ್ ಒಂದು ಕಡೆ ವಾಲಿ ಏಕಾಏಕಿ ಬಿದ್ದಿದೆ. ನೆರೆದಿದ್ದ ಜನರೆಲ್ಲಾ ಅತ್ತಿತ್ತ ಓಡಿ ಜೀವ ಉಳಿಸಿಕೊಂಡಿದ್ದಾರೆ.
ಘಟನೆಯಲ್ಲಿ ಕೆ.ಮುತ್ತುಕುಮಾರ್(39), ಎಸ್.ಭೂಪಾಲನ್ (40), ಮತ್ತು ಬಿ.ಜೋತಿಬಾಬು (17) ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಉಳಿದವರಿಗೆ ಗಾಯಗಳಾಗಿವೆ. ಮೆರವಣಿಗೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ವಿಡಿಯೋ ಮಾಡುತ್ತಿದ್ದ ಕಾರಣ, ಈ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
#TamilNadu | 4 people died & 9 others were injured after a #cranecollapsed during a temple festival event in #Keelveethi in #Arakkonam. #BREAKING #craneaccident #arakkonam #Accident #Temple #Death #India | #Crane | #Accident | #Dead | #Injury | #TN | #TempleFestival | pic.twitter.com/iKCjaw7OFV
— Harish Deshmukh (@DeshmukhHarish9) January 23, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video; 20 ಬಾರಿ ಚಾಕುವಿನಿಂದ ಚುಚ್ಚಿದ; ಜನರೆದುರು 16 ವರ್ಷದ ಬಾಲಕಿ ಮೇಲೆ ಪ್ರಿಯಕರನ ದಾಳಿ!

Andhra Pradesh: ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಜಾರಿಬಿದ್ದು ಮೂವರು ಮೃತ್ಯು

ಡಿವೈಡರ್’ಗೆ ಹೊಡದು ಗೂಡ್ಸ್ ಗಾಡಿಗೆ ಢಿಕ್ಕಿಯಾದ ಕಾರು: 7 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು!

ISRO: ಯಶಸ್ವಿಯಾಗಿ ಕಕ್ಷೆಗೆ ಸೇರಿದ ಇಸ್ರೋದ ದೇಶಿ ದಿಕ್ಸೂಚಿ ಉಪಗ್ರಹ “ನಾವಿಕ್”

ಹಿಂದೂಗಳು ಒಂದಾದರೆ ಪಾಕಿಸ್ತಾನವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬಹುದು: Bageshwar Baba