
ನಿರ್ಭಯಾ ದೋಷಿಗಳಿಗೆ ಶುಕ್ರವಾರ ನಸುಕಿನ ವೇಳೆ ಗಲ್ಲುಶಿಕ್ಷೆ;ಎಲ್ಲಾ ಅರ್ಜಿ ವಜಾಗೊಳಿಸಿದ Court
Team Udayavani, Mar 19, 2020, 4:02 PM IST

ನವದೆಹಲಿ:2012ರಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳನ್ನು ಶುಕ್ರವಾರ ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸುವಂತೆ ದಿಲ್ಲಿ ಕೋರ್ಟ್ ತಿಳಿಸಿದೆ. ಇದರೊಂದಿಗೆ ಮರಣದಂಡನೆ ಶಿಕ್ಷೆಗೆ ತಡೆಯೊಡ್ಡುವ ಎಲ್ಲಾ ಕಾನೂನು ಹೋರಾಟಗಳು ಅಂತ್ಯಗೊಂಡಂತಾಗಿದೆ.
ನಾಲ್ವರು ದೋಷಿಗಳಾದ ಅಕ್ಷಯ್ ಠಾಕೂರ್ (31ವರ್ಷ), ಪವನ್ ಗುಪ್ತಾ (25ವರ್ಷ), ವಿನಯ್ ಶರ್ಮಾ (26ವರ್ಷ) ಹಾಗೂ ಮುಖೇಶ್ ಸಿಂಗ್ (32) ನ ಎಲ್ಲಾ ಅರ್ಜಿಗಳನ್ನು ಪಟಿಯಾಲಾ ಹೌಸ್ ಕೋರ್ಟ್ ವಜಾಗೊಳಿಸಿ ನಿಗದಿತ ದಿನಾಂಕ (20-03-2020)ದಂತೆ ಗಲ್ಲಿಗೇರಿಸಲು ನಿರ್ದೇಶನ ನೀಡಿದೆ.
ಟಾಪ್ ನ್ಯೂಸ್
