ಎಳೆಯ ಹಾಡುಗಾತಿ ನಹೀದ್ ಆಫ್ರೀನ್ ವಿರುದ್ಧ 42 ಮುಲ್ಲಾಗಳ ಫತ್ವಾ
Team Udayavani, Mar 15, 2017, 11:46 AM IST
ಗುವಾಹಟಿ : ಹದಿನಾರರ ಹರೆಯದ ಉದಯೋನ್ಮುಖ ಹಾಡುಗಾತಿ ನಹೀದ್ ಆಫ್ರೀನ್ ವಿರುದ್ಧ ಅಸ್ಸಾಮಿನ 42 ಮುಲ್ಲಾಗಳು ಸಾರ್ವಜನಿಕ ಸಂಗೀತ ಕಾರ್ಯಕ್ರಮ ನೀಡದಂತೆ ಫತ್ವಾ ಹೊರಡಿಸಿದ್ದಾರೆ.
ನಫ್ರೀನ್, ಭಯೋತ್ಪಾದನೆ ವಿರುದ್ಧ, ವಿಶೇಷವಾಗಿ ಐಸಿಸ್ ಉಗ್ರ ಸಂಘಟನೆಯ ಭಯೋತ್ಪಾದಕ ಕೃತ್ಯಗಳ ವಿರುದ್ಧ ಜನಜಾಗೃತಿ ಹುಟ್ಟಿಸುವ ಹಾಡುಗಳನ್ನು ತನ್ನ ಕಾರ್ಯಕ್ರಮದಲ್ಲಿ ಹಾಡುತ್ತಿದ್ದಳು. ಅಂತೆಯೇ ಆಕೆ ಎಲ್ಲ ಸಮುದಾಯದ ಸಂಗೀತಾಭಿಮಾನಿಗಳಲ್ಲಿ ಜನಪ್ರಿಯಳಾಗಿದ್ದಳು.
ನಫ್ರೀನ್ ವಿರುದ್ಧ ಅಸ್ಸಾಮಿನ 42 ಮುಲ್ಲಾಗಳು ಹೊರಡಿಸಿರುವ ಫತ್ವಾವನ್ನು ಅಸ್ಸಾಮಿನಿ ಹೊಜಾಯಿ ಮತ್ತು ನಗಾಂವ್ ಜಿಲ್ಲೆಗಳಲ್ಲಿ ಹಂಚಲಾಗಿದೆ.
‘ಇದೇ ಮಾರ್ಚ್ 25ರಂದು ನಡೆಯಲಿರುವ ಉದಾಲಿ ಸೊನಾಯಿ ಬೀಬಿ ಕಾಲೇಜಿನ ಕಾರ್ಯಕ್ರಮದಲ್ಲಿ ನಫ್ರೀನ್ ಹಾಡಕೂಡದು; ವೇದಿಕೆಯ ಮೇಲೆ ಸಂಗೀತ ಕಾರ್ಯಕ್ರಮ ನೀಡುವುದು ಶರಿಯಕ್ಕೆ ವಿರುದ್ಧವಾಗಿದೆ’ ಎಂದು ಫತ್ವಾದಲ್ಲಿ ಎಚ್ಚರಿಕೆ ನೀಡಲಾಗಿದೆ. ಉದಾಲಿ ಕಾಲೇಜಿನ ಕಾರ್ಯಕ್ರಮ ನಡೆಯುವ ಸ್ಥಳದ ಪಕ್ಕದಲ್ಲೇ ಮಸೀದಿ ಮತ್ತು ಕಬರಿಸ್ಥಾನ್ ಇದೆ.
‘ಮಸೀದಿ, ಮದ್ರಸ ಮತ್ತು ಕಬರಿಸ್ಥಾನದ ಸಮೀಪದಲ್ಲಿ ಸಂಗೀತ ಕಾರ್ಯಕ್ರಮ ನಡಸಿದರೆ ನಮ್ಮ ಮುಂದಿನ ತಲೆಮಾರು ಅಲ್ಲಾಹುವಿನ ಸಿಟ್ಟಿಗೆ ಗುರಿಯಾಗುತ್ತದೆ’ ಎಂದು ಫತ್ವಾದಲ್ಲಿ ಎಚ್ಚರಿಸಲಾಗಿದೆ.
ಫತ್ವಾಗೆ ಪ್ರತಿಕ್ರಿಯಿಸಿರುವ ನಫ್ರೀನ್, “ನನಗಿದನ್ನು ಕೇಳಿ ಆಘಾತವಾಯಿತು; ನಾನು ನನ್ನೊಳಗಿನಿಂದಲೇ ಕುಸಿದು ಬೀಳುವಂತಾಯಿತು. ಆದರೆ ಅನೇಕ ಮುಸ್ಲಿಂ ಸಂಗೀತಗಾರರು ನಮಗೆ ಧೈರ್ಯ ತುಂಬಿದರು; ಎಂದೂ ಕೂಡ ಸಂಗೀತವನ್ನು ತೊರೆಯಬೇಡ ಎಂದವರು ಹೇಳಿದರು. ಅವರಿಂದ ನನಗೆ ಅಪಾರವಾದ ಸ್ಫೂರ್ತಿ ಸಿಕ್ಕಿದೆ. ಹಾಡುಗಾರಿಕೆ ನನಗೆ ದೇವರು ಕರುಣಿಸಿರುವ ಕೊಡುಗೆ; ಈ ಕೊಡುಗೆಯನ್ನು ನಾನು ಸರಿಯಾಗಿ ಬಳಸಿಕೊಳ್ಳಬೇಕು; ಇಲ್ಲದಿದ್ದರೆ ನಾನು ದೇವರನ್ನೇ ಅಲಕ್ಷಿಸಿದಂತಾಗುತ್ತದೆ’ ಎಂದು ಹೇಳಿದ್ದಾಳೆ.
ಈಚೆಗಷ್ಟೇ ಕರ್ನಾಟಕದಲ್ಲಿ ಟಿವಿ ವಾಹಿನಿಯೊಂದರಲ್ಲಿ ನಡೆದಿದ್ದ ಸಾರೆಗಮಪ ಕಾರ್ಯಕ್ರಮದಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ದೇವರ ಹಾಡುಗಳನ್ನು ಹಾಡಿ ತನ್ನ ಸಮುದಾಯವರ ಆಕ್ರೋಶಕ್ಕೆ ಗುರಿಯಾದ ಘಟನೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ
ಭಾರತದಲ್ಲಿ ತಯಾರಾಗುವ ವಿದೇಶಿ ಚಿತ್ರಗಳಿಗೆ ಪ್ರೋತ್ಸಾಹ
ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ಗೆ ಬಂದ ರತನ್ ಟಾಟಾ
ರಾಜೀವ್ಗಾಂಧಿ ಹಂತಕ ಪೆರಾರಿವೇಲನ್ ಬಿಡುಗಡೆ : ಕಾಂಗ್ರೆಸ್ ತೀವ್ರ ಆಕ್ಷೇಪ