ಅಸ್ಸಾಂ: ಮೆದುಳು ಜ್ವರ ಬಲಿ ಸಂಖ್ಯೆ 49, 190 ಕೇಸುಗಳು ದಾಖಲು: ಆರೋಗ್ಯ ಸಚಿವ

Team Udayavani, Jul 6, 2019, 5:15 PM IST

ಗುವಾಹಟಿ : ಅಸ್ಸಾಂ ನಲ್ಲಿ ಇದೇ ಜುಲೈ 5ರ ವರೆಗೆ ಜಪಾನೀಸ್‌ ಎನ್‌ಸೆಫಾಲಿಟೀಸ್‌ (ಮೆದುಳು ಜ್ವರ) ಕಾಯಿಲೆಯಿಂದ 49 ಮಂದಿ ಮೃತಪಟ್ಟಿದ್ದು 190 ಕೇಸುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಮೆದುಳು ಜ್ವರ ಕಾಯಿಲೆ ಸಾಂಕ್ರಾಮಿಕವಾಗುವ ಪರಾಕಾಷ್ಠೆಯ ಕಾಲ ಇದಾಗಿದೆ ಎಂದವರು ಹೇಳಿದ್ದಾರೆ.

ಕೊಕ್ರಝಾರ್‌ ಹೊರತಾಗಿ ಉಳಿದೆಲ್ಲ ಜಿಲ್ಲೆಗಳು ಪ್ರಕೃತ ಈ ಕಾಯಿಲೆಯ ಪ್ರಭಾವಕ್ಕೆ ಒಳಗಾಗಿವೆ. ಹಾಗಿದ್ದರೂ ವ್ಯಾಪಕ ವೈದ್ಯಕೀಯ ತಡೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದವರು ಹೇಳಿದರು.

ಮೆದುಳು ಜ್ವರ ಹರಡುವುದನ್ನು ತಡೆಯುವ ಉಪಕ್ರಮವಾಗಿ ಆರೋಗ್ಯ ಇಲಾಖೆಯ ವಿಚಕ್ಷಣ ಜಾಲದ ಬಹೂದ್ದೇವಿ ಕೆಲಸಗಾರರು, ಮಲೇರಿಯ ತಾಂತ್ರಿಕ ಉಸ್ತುವಾರಿ ಸಿಬಂದಿಗಳು ಮತ್ತು ಸಾಮಾಜಿಕ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದ್ದು ರಕ್ತದ ಮಾದರಿಗಳನ್ನು ಸಂಗ್ರಹಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಸಚಿವ ಶರ್ಮಾ ಹೇಳಿದರು.

 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ