
Western Ghats;ನೀರೇ ಇಲ್ಲದಿದ್ದರೂ ಬದುಕುವ 62 ಸಸ್ಯಗಳು!
ಪುಣೆಯ ವಿಜ್ಞಾನಿಗಳಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಅತ್ಯಪೂರ್ವ ಶೋಧ
Team Udayavani, Jun 2, 2023, 8:10 AM IST

ಹೊಸದಿಲ್ಲಿ: ಕರ್ನಾಟಕವೂ ಸೇರಿದಂತೆ ಭಾರತದ ಪಶ್ಚಿಮಘಟ್ಟಗಳಲ್ಲಿ ಪುಣೆಯ ವಿಜ್ಞಾನಿಗಳು 62 ವಿಶೇಷ ಸಸ್ಯಗಳನ್ನು ಪತ್ತೆ ಮಾಡಿದ್ದಾರೆ. ಅವುಗಳ ವಿಶೇಷವೇನು ಗೊತ್ತಾ? ನೀರೇ ಇಲ್ಲದಿದ್ದರೂ, ಎಂತಹ ಬರಗಾಲದಲ್ಲಿಯೂ ಬದುಕಿರಬಲ್ಲವು! ಪುಣೆಯ ಅಘರ್ಕರ್ ಸಂಶೋಧನ ಸಂಸ್ಥೆಯ (ಎಆರ್‌ಐ) ವಿಜ್ಞಾನಿಗಳು ಈ ಅಪೂರ್ವ ಶೋಧವನ್ನು ಮಾಡಿದ್ದಾರೆ. ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದ ನಾರ್ಡಿಕ್ ನಿಯತಕಾಲಿಕೆಯಲ್ಲಿ ಈ ಮಾಹಿತಿ ಪ್ರಕಟವಾಗಿದೆ.
ಹೊಸತಾಗಿ ಪತ್ತೆಯಾಗಿರುವ 62 ಸಸ್ಯಗಳ ಪೈಕಿ 16 ಸಸ್ಯಗಳು ಭಾರತದ ಅಲ್ಲಲ್ಲಿ ಕಂಡುಬರುತ್ತವೆ. ಇನ್ನು 12 ಪಕ್ಕಾ ಪಶ್ಚಿಮಘಟ್ಟದಲ್ಲಿ ಮಾತ್ರ ಕಂಡುಬಂದಿವೆ. ಪಶ್ಚಿಮಘಟ್ಟ ಪ್ರದೇಶ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಗುಜರಾತ್‌ನಲ್ಲಿ ಬರುತ್ತದೆ.
ಏನಿದರ ಮಹತ್ವ?: ಈ ಸಸ್ಯಗಳು ಎಂತಹ ಬರಗಾಲದಲ್ಲಿಯೂ ಬದುಕಬಲ್ಲವು. ನೀರೇ ಇಲ್ಲದಾಗ ಇವು ಸಂಪೂರ್ಣ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸುತ್ತವೆ. ನೀರು ಸಿಕ್ಕಾಗ ಮತ್ತೆ ಬೆಳೆಯಲು ಆರಂಭಿಸುತ್ತವೆ. ಆದ್ದರಿಂದ ಇವನ್ನು ನೀರು ಕಡಿಮೆಯಿರುವ, ಬರಪೀಡಿತ ಪ್ರದೇಶಗಳಲ್ಲಿ ಕೃಷಿಗೆ ಪೂರಕವಾಗಿ ಬೆಳೆಸಬಹುದು. ಒಂದು ಕಡೆ ಸಸ್ಯಗಳೂ ಬೆಳೆಯುತ್ತವೆ, ಕೃಷಿಗೂ ಸಹಾಯವಾಗುತ್ತದೆ.
ಇಂತಹ ಸಸ್ಯಗಳ ಕುರಿತ ಅಧ್ಯಯನ ಇದುವರೆಗೆ ಬಹಳ ಕಡಿಮೆ ನಡೆದಿತ್ತು. ಬಂಡೆಗಳ ನಡುವೆ ಸಸ್ಯಗಳು ಬೆಳೆಯುವುದು ಪಶ್ಚಿಮಘಟ್ಟಗಳಲ್ಲಿ ಸಾಮಾನ್ಯ, ಆದರೆ ಹೀಗೆ ನೀರಿಲ್ಲದೇ ಬದುಕುವ ಸಸ್ಯಗಳ ಬಗ್ಗೆ ಸಂಶೋಧನೆ ಆಗಿರಲಿಲ್ಲ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿದೆ. ಈ ಶೋಧ ಜೀವವೈವಿಧ್ಯ ಮತ್ತು ಪರಿಸರಕ್ಕೆ ಬಹಳ ಮಹತ್ವ ಕೊಡುಗೆ ನೀಡಿದೆ ಎಂದೂ ಸಚಿವಾಲಯ ಹೇಳಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hoshiarpur; ಕಿರಾಣಿ ಅಂಗಡಿಯೆದುರು ಶಿರೋಮಣಿ ಅಕಾಲಿ ದಳ ನಾಯಕನ ಗುಂಡಿಕ್ಕಿ ಹತ್ಯೆ

Teacher: ಹಿಂದೂ ವಿದ್ಯಾರ್ಥಿಗೆ ಮುಸ್ಲಿಂ ವಿದ್ಯಾರ್ಥಿಯಿಂದ ಕಪಾಳಮೋಕ್ಷ… ಶಿಕ್ಷಕಿ ಬಂಧನ

Pregnant;ವಿವಾಹಕ್ಕೂ ಮುನ್ನ ಗರ್ಭಿಣಿಯಾದ ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ ತಾಯಿ!

Uttar Pradesh: ಮಗಳ ಮದುವೆಗೆ ಕೂಡಿಟ್ಟ 18 ಲಕ್ಷ ರೂ. ಗೆದ್ದಲು ಪಾಲು!

Today ಆರ್ಟ್ ಆಫ್ ಲಿವಿಂಗ್ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ
MUST WATCH
ಹೊಸ ಸೇರ್ಪಡೆ

Cauvery issue; ಕೆಆರ್ ಎಸ್ ಮುತ್ತಿಗೆಗೆ ವಾಟಾಳ್ ನಾಗರಾಜ್ ಕರೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ ಜಿಲ್ಲೆಗೆ ಯೆಲ್ಲೊ ಅಲರ್ಟ್; ಭಾರಿ ಮಳೆ ಸಾಧ್ಯತೆ

Chaturmasya: ನಿತ್ಯ ಜೀವನದಲ್ಲಿ ರಾಮನಾಮ ಸ್ಮರಣೆ ಮಾಡಿದರೆ ಜೀವನ ಪಾವನ: ಪೇಜಾವರ ಶ್ರೀ

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

Yash 19; ರಾಜ್ಯೋತ್ಸವಕ್ಕೆ ಯಶ್ ಹೊಸ ಚಿತ್ರ ಘೋಷಣೆ?