ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಅತ್ತೆ, ಸೊಸೆ ಶವ ಪತ್ತೆ : ದರೋಡೆಕೋರರ ಕೈವಾಡ ಶಂಕೆ ?
ವಾಯುವ್ಯ ದೆಹಲಿಯ ಸುಭಾಷ್ ಪಾರ್ಕ್ನಲ್ಲಿ ಘಟನೆ
Team Udayavani, Aug 16, 2022, 11:47 AM IST
ನವದೆಹಲಿ : ವಾಯುವ್ಯ ದೆಹಲಿಯ ಸುಭಾಷ್ ಪಾರ್ಕ್ನಲ್ಲಿರುವ ನಿವಾಸವೊಂದರಲ್ಲಿ 70 ವರ್ಷದ ಮಹಿಳೆ ಮತ್ತು ಅವರ ಸೊಸೆಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಮಂಗಳವಾರ ಮುಂಜಾನೆ ಪತ್ತೆಯಾಗಿದೆ.
ಮೊಮ್ಮಕ್ಕಳು ಉತ್ತರಾಖಂಡದ ಋಷಿಕೇಶ ಮತ್ತು ಮಸ್ಸೂರಿಗೆ ಪ್ರವಾಸದಿಂದ ಹಿಂದಿರುಗಿದ ವೇಳೆ ಅವರ ಮನೆಯ ನೆಲ ಮತ್ತು ಮೊದಲ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಈ ಕುರಿತು ಮೊಮ್ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿದ ಪೊಲೀಸರು ಮನೆಗೆ ಯಾರೂ ಬಲವಂತದಿಂದ ಪ್ರವೇಶ ಮಾಡಿದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಆದ ಕಾರಣ ಕೊಲೆಗೆ ಯಾವುದೇ ವೈಯಕ್ತಿಕ ದ್ವೇಷದ ಪರಿಣಾಮವೇ ಅಥವಾ ದರೋಡೆಗಾಗಿ ಹತ್ಯೆ ಮಾಡಲಾಯಿತೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್ನ ಮಂತ್ರ: ಮೋದಿ