
ನಿಲ್ಲಿಸಿದ್ದ ಬಸ್ ಗಳಿಗೆ ಟ್ರಕ್ ಢಿಕ್ಕಿ: 8 ಮಂದಿ ಮೃತ್ಯು; 50 ಮಂದಿಗೆ ಗಾಯ
Team Udayavani, Feb 25, 2023, 8:38 AM IST

ಭೋಪಾಲ್: ನಿಲ್ಲಿಸಿದ್ದ ಬಸ್ ಗಳಿಗೆ ಟ್ರಕ್ ಢಿಕ್ಕಿ ಹೊಡೆದು 8 ಮಂದಿ ಮೃತಪಟ್ಟು, 50 ಮಂದಿ ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ರೇವಾ-ಸತ್ನಾ ಗಡಿಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ( ಫೆ.25 ರಂದು) ನಡೆದಿದೆ.
ಸತ್ನಾ ನಗರದಲ್ಲಿ ‘ಕೋಲ್ ಮಹಾಕುಂಭ’ದಲ್ಲಿ ಭಾಗಿಯಾಗಿ ಬರುತ್ತಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರು ಆಹಾರಕ್ಕಾಗಿ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿದ್ದರು. ಈ ವೇಳೆ ರೇವಾ ಕಡೆಯಿಂದ ವೇಗವಾಗಿ ಬಂದ ಟ್ರಕ್ ರಸ್ತೆ ಬದಿ ನಿಲ್ಲಿಸಿದ್ದ ಮೂರು ಬಸ್ ಗಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಒಂದು ಬಸ್ ಕಂದಕಕ್ಕೆ ಉರುಳಿದ್ದು, 8 ಮಂದಿ ಮೃತಪಟ್ಟಿದ್ದಾರೆ ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಬಸ್ ಗಳಿಗೆ ಹಿಂದಿನಿಂದ ಬಂದು ಟ್ರಕ್ ಢಿಕ್ಕಿ ಹೊಡೆದಿದೆ. ಟ್ರಕ್ ನ ಚಕ್ರಗಳು ಸಿಡಿದು ಹೋಗಿದ್ದರಿಂದ ಚಾಲಕ ನಿಯಂತ್ರಣ ಕಳೆದುಕೊಂಡು ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರಿಗೆ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ಸೂಚಿಸಿ, ಮೃತ ಕುಟುಂಬಳಿಗೆ 10 ಲಕ್ಷ ಪರಿಹಾರ, ಗಂಭೀರ ಗಾಯಗೊಂಡವವರಿಗೆ 2 ಲಕ್ಷ ರೂ ಪರಿಹಾರವನ್ನು ಘೋಷಿಸಿದ್ದಾರೆ.
MP | At least 5 dead, 20 injured after a truck hit 3 buses that were stationed at roadside in Sidhi district. Buses were carrying people returning from Union HM Amit Shah’s rally.
Incident happened due to a tyre burst in truck. 5 dead, injured rushed to hospital: DM Sidhi pic.twitter.com/OUGc5W9gqa
— ANI MP/CG/Rajasthan (@ANI_MP_CG_RJ) February 24, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajasthan Election; ಬಿಜೆಪಿ ಸಂಸದ ರಮೇಶ್ ಬಿಧುರಿಗೆ ಚುನಾವಣಾ ಜವಾಬ್ದಾರಿ

Kashmir; ಈ ವರ್ಷ ಜಂಟಿ ಕಾರ್ಯಾಚರಣೆಯಲ್ಲಿ 31 ಭಯೋತ್ಪಾದಕರ ಅಂತ್ಯ

Thane ನಕಲಿ ಕರೆನ್ಸಿ ಪ್ರಕರಣ; ಉಗ್ರ’ಅಂಕಲ್’ಸೇರಿ ನಾಲ್ವರ ವಿರುದ್ಧ ಎನ್ಐಎ ಚಾರ್ಜ್ ಶೀಟ್

Miracle: ಈ ರೋಗಿಯ ಹೊಟ್ಟೆಯಲ್ಲಿತ್ತು ನಟ್, ಬೋಲ್ಟ್ ಸೇರಿ 15 ಕ್ಕೂ ಹೆಚ್ಚು ವಸ್ತುಗಳು…

Hyderabad: 1.25 ಕೋಟಿ ರೂ. ಗೆ ಹರಾಜಾಯಿತು ಗಣಪತಿಯ ಲಡ್ಡು ಪ್ರಸಾದ
MUST WATCH
ಹೊಸ ಸೇರ್ಪಡೆ

World Cup 2023 ಭಾರತ ತಂಡ; ಗಾಯಾಳು ಅಕ್ಷರ್ ಪಟೇಲ್ ಬದಲಿಗೆ ಅನುಭವಿ ಸ್ಪಿನ್ನರ್ ಆಯ್ಕೆ

Chikkaballapur: ನಾಳೆ ಶಾಲಾ, ಕಾಲೇಜುಗಳಿಗೆ ರಜೆ ಇಲ್ಲ

Karnataka Bandh; ದಕ್ಷಿಣ ಕನ್ನಡ, ಉಡುಪಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

World Cup Cricket ; ಯಾವುದೇ ತಂಡದ ಆಟಗಾರರಿಗೆ ಗೋಮಾಂಸ ಲಭ್ಯವಿಲ್ಲ

Gundlupet: ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ 44 ಲಕ್ಷ ರೂ. ದರೋಡೆ