83 ರ ಹರೆಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದ ಮೇಧಾವಿ..
Team Udayavani, Sep 23, 2019, 6:10 PM IST
ಕಲಿಯುವ ಮನಸ್ಸು ಮತ್ತು ಸಾಧಿಸುವ ಛಲ ಇದ್ದರೆ ಬದುಕಿನ ಕೊನೆಯವರೆಗೂ ಅವಕಾಶಗಳಿರುತ್ತವೆ ಅಂತೆ ! ಈ ಮಾತಿಗೆ ಉದಾಹರಣೆಯಾಗಿ ನಿಂತಿದ್ದಾರೆ ಪಂಜಾಬಿನ 83 ವರ್ಷದ ವೃದ್ಧ ಸೋಹನ್ ಸಿಂಗ್ ಗಿಲ್.
ಹೌದು ತನ್ನ 83 ನೇ ವಯಸ್ಸಿನಲ್ಲಿ ಪಂಜಾಬ್‌ನ ಜಲಂಧರ್‌ನಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ತಿಗೊಳಿಸಿದ್ದಾರೆ ಸೋಹನ್ ಸಿಂಗ್ ಗಿಲ್. ಪಂಜಾಬ್‌ನ ಹೋಶಿಯಾರ್‌ಪುರದ ದತ್ತಾ ಗ್ರಾಮದಲ್ಲಿ ವಾಸಿಸುವ ಗಿಲ್ ಅವರು ಮಹಿಪಾಲ್‌ಪುರದ ಖಲ್ಸಾ ಕಾಲೇಜಿನಿಂದ ಪದವಿ ಮುಗಿಸಿದ ನಂತರ 1957 ರಲ್ಲಿ ವಿದ್ಯಾಭ್ಯಾಸವನ್ನು ತೊರೆದಿದ್ದರು.
ನಂತರ ಅಧ್ಯಯನ ತರಬೇತಿಯಲ್ಲಿ ತೊಡಗಿಕೊಂಡ ಸೋಹನ್ ಸಿಂಗ್ ಎರಡು ವರ್ಷಗಳ ಹಿಂದೆ, ಅಂದರೆ ತನ್ನ 81 ನೇ ವಯಸ್ಸಿನಲ್ಲಿ, ಗಿಲ್ ದೂರ ಶಿಕ್ಷಣ ಅಧ್ಯಯನ ಮಾಡಲು ಸೇರಿದರು. ಇದರ ಪರಿಣಾಮವಾಗಿ ಸೋಹನ್ ಸಿಂಗ್ ಇಂಗ್ಲಿಷ್ ಭಾಷೆಯಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಪೂರ್ತಿಗೊಳಿಸಿದರು.
ದೇವರ ಅನುಗ್ರಹ ಹಾಗೂ ಇಚ್ಛಾ ಶಕ್ತಿಯಿಂದ ನಾನು ಬಾಲ್ಯದಲ್ಲಿ ಅಂದುಕೊಂಡದ್ದನ್ನು ಈಗ ಸಾಧಿಸಿದ್ದೇನೆ. ಇಂಗ್ಲಿಷ್ ನನ್ನ ಮೆಚ್ಚಿನ ಭಾಷೆ,ನಾನು ಕೀನ್ಯಾದಲ್ಲಿದ್ದ ಸಮಯದಲ್ಲಿ ಅದನ್ನು ಕರಗತ ಮಾಡಿಕೊಂಡೆ ಎಂದು ಹೇಳುತ್ತಾರೆ ಸೋಹನ್ ಸಿಂಗ್ ಗಿಲ್. ಸಧ್ಯ ನಾನು ಐಇಎಲ್ಟಿಎಸ್ ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದೇನೆ ಎಲ್ಲರೂ ಉತ್ತಮ ಅಂಕ ಗಳಿಸಿದ್ದಾರೆ ಅನ್ನುವ ಖುಷಿಯನ್ನು ಹಂಚಿಕೊಂಡರು.
ಬಾಲ್ಯದಲ್ಲಿ ಗ್ರಾಮೀಣ ಭಾಗದ ಶಾಲೆಯಲ್ಲಿ ಕಲಿತ ಸೋಹನ್ ಸಿಂಗ್ , ಆಂಗ್ಲ ಭಾಷೆಯ ಮೇಲಿನ ಹಿಡಿತವನ್ನು ಹೊರದೇಶದಲ್ಲಿ ಕರಗತ ಮಾಡಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್ ರೆಕಗ್ನಿಷನ್ ಇನ್ನು ಅಧಿಕೃತ ಪುರಾವೆ
ಶಾಲೆಗೆ ಬಣ್ಣ ಬಳಿಯುವ ವಿಚಾರದಲ್ಲಿ ಜೆಎಂಎಂ-ಬಿಜೆಪಿ ವರ್ಣ ಕದನ
ವಸುಂಧರಾ ಇಲ್ಲದೆ ನಡೆಯಲಿದೆ ಚುನಾವಣೆ? ರಾಜ್ಯ ಬಿಜೆಪಿ ಅಧ್ಯಕ್ಷರು ಹೇಳಿದೆನು?
ಮಳೆಗೆ ಬಳಲಿದ ಅಸ್ಸಾಂ; ನಿಲ್ಲದ ಪ್ರವಾಹ ಪ್ರಕೋಪ; ರಕ್ಷಣಾ ಕಾರ್ಯ
ಇ-ವಾಹನ ಬಳಕೆಗೆ ಮುಂದಾದ ಮೆಘಾಲಯ ಸಿಎಂ ಕಾನ್ರಾಡ್ ಸಂಗ್ಮಾ