ದೇಶದಲ್ಲಿ ಪ್ರವಾಸೋದ್ಯಮದ ಹೊಸ ಯುಗ ಆರಂಭ: ಪ್ರಧಾನಿ ಮೋದಿ

ವಾರಾಣಸಿಯಲ್ಲಿ ಗಂಗಾ ವಿಲಾಸ್‌ ಕ್ರೂಸ್‌ ನೌಕೆಗೆ ಚಾಲನೆ

Team Udayavani, Jan 14, 2023, 7:00 AM IST

ದೇಶದಲ್ಲಿ ಪ್ರವಾಸೋದ್ಯಮದ ಹೊಸ ಯುಗ ಆರಂಭ: ಪ್ರಧಾನಿ ಮೋದಿ

ವಾರಾಣಸಿ: ವಿಶ್ವದಲ್ಲೇ ಅತಿ ದೀರ್ಘ‌ ಪ್ರಯಾಣದ ಅನುಭವವನ್ನು ನೀಡುವ “ಗಂಗಾ ವಿಲಾಸ್‌’ ಕ್ರೂಸ್‌ ನೌಕೆಗೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಚಾಲನೆ ನೀಡಿದರು.

ಜತೆಗೆ, “ಅಭಿವೃದ್ಧಿಹೊಂದಿದ ಭಾರತವನ್ನು ನಿರ್ಮಿಸಬೇಕೆಂದರೆ ಬಲಿಷ್ಠವಾದ ಸಂಪರ್ಕವೂ ಅತ್ಯಗತ್ಯ’ ಎಂದು ಅಭಿಪ್ರಾಯಪಟ್ಟರು.

ವಿಡಿಯೋ ಕಾನ್ಫರೆನ್ಸ್‌ ಮೂಲಕ ವಾರಾಣಸಿಯಲ್ಲಿ ಗಂಗಾ ವಿಲಾಸ ನೌಕೆ, ಟೆಂಟ್‌ ಸಿಟಿಯನ್ನು ಲೋಕಾರ್ಪಣೆ ಮಾಡಿದ ಅವರು, ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಹಲವು ಒಳನಾಡು ಜಲಸಾರಿಗೆ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ನಂತರ ಮಾತನಾಡಿದ ಅವರು, “ಕಾಶಿಯಿಂದ ದಿಬ್ರುಗಡಕ್ಕೆ ಸಂಚರಿಸುವ ವಿಶ್ವದ ಅತಿ ದೀರ್ಘ‌ ನದಿ ಕ್ರೂಸ್‌ ನೌಕೆಯು ಉತ್ತರ ಭಾರತದ ಪ್ರವಾಸಿ ತಾಣಗಳನ್ನು ಜಗತ್ತಿನ ಪ್ರವಾಸೋದ್ಯಮದ ನಕ್ಷೆಯಲ್ಲಿ ಮಿಂಚುವಂತೆ ಮಾಡಲಿದೆ.

ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಗಂಗಾ ನದಿಯ ತೀರದಲ್ಲಿ ಯಾವ ಅಭಿವೃದ್ಧಿ ಕಾರ್ಯವೂ ಆಗದ ಕಾರಣ, ಇಲ್ಲಿದ್ದ ಜನರೆಲ್ಲ ವಲಸೆ ಹೋಗುವಂತಾಯಿತು. ನಾವು ಒಂದು ಕಡೆ ಗಂಗಾ ನದಿ ಸ್ವತ್ಛಗೊಳಿಸುವ “ನಮಾಮಿ ಗಂಗೆ’ ಅಭಿಯಾನಕ್ಕೆ ಕೈ ಹಾಕಿದರೆ, ಮತ್ತೊಂದು ಕಡೆ ಆರ್ಥಿಕತೆಯನ್ನು ಬೆಳೆಸುವಂಥ “ಅರ್ಥ ಗಂಗೆ’ ಯೋಜನೆ ಆರಂಭಿಸಿದೆವು’ ಎಂದರು.

ಗಂಗಾ ವಿಲಾಸ ಕ್ರೂಸ್‌ ನೌಕೆಯ ಮೊದಲ ಪ್ರಯಾಣದಲ್ಲಿ ಭಾಗಿಯಾಗುತ್ತಿರುವ 32 ಮಂದಿ ಸ್ವಿಜರ್ಲೆಂಡ್‌ನ‌ ಪ್ರವಾಸಿಗರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಂದು ಭಾರತದಲ್ಲಿ ಎಲ್ಲವೂ ಇದೆ ಮತ್ತು ನಿಮ್ಮ ಕಲ್ಪನೆಗೂ ಮೀರಿದ್ದನ್ನು ನೀವು ನೋಡಬಹುದಾಗಿದೆ ಎಂದರು. ದೇಶದಲ್ಲೀಗ ಪ್ರವಾಸೋದ್ಯಮದ ಹೊಸ ಯುಗ ಆರಂಭವಾಗಿದೆ ಎಂದೂ ತಿಳಿಸಿದರು.

ಪ್ರವಾಸಿಗರನ್ನು ಸೆಳೆಯಲಿದೆ ಟೆಂಟ್‌ ಸಿಟಿ
ವಾರಾಣಸಿಯಲ್ಲಿ ಶುಕ್ರವಾರ ಲೋಕಾರ್ಪಣೆಗೊಂಡ ಟೆಂಟ್‌ ಸಿಟಿ ಗಂಗಾ ನದಿ ತೀರದಲ್ಲಿ ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸಲಿದೆ. ವಾರಾಣಸಿಯ ಬೇರೆ ಬೇರೆ ಘಾಟ್‌ಗಳಿಂದ ಬೋಟ್‌ಗಳ ಮೂಲಕ ಪ್ರವಾಸಿಗರು ಟೆಂಟ್‌ ಸಿಟಿಯನ್ನು ತಲುಪಬಹುದು. ಅಕ್ಟೋಬರ್‌ನಿಂದ ಜೂನ್‌ವರೆಗೆ ಮಾತ್ರ ಇದು ತೆರೆದಿರಲಿದ್ದು, ಉಳಿದ 3 ತಿಂಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗುವ ಕಾರಣ, ಈ ಅವಧಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇಲ್ಲಿ ಒಟ್ಟು 200 ಟೆಂಟ್‌ಗಳಿವೆ. ಇಲ್ಲಿಗೆ ಬರುವವರು ಗಂಗಾನದಿಯ ಮತ್ತೂಂದು ತೀರದಲ್ಲಿನ ಎಲ್ಲ ಮನಮೋಹಕ ಘಾಟ್‌ಗಳನ್ನು ಕಣ್ತುಂಬಿಕೊಳ್ಳಬಹುದು. ಶಾಸ್ತ್ರೀಯ ಸಂಗೀತ, ಸಂಜೆ ಆರತಿ, ಯೋಗ ಸೆಷನ್‌ಗಳೂ ಇರಲಿವೆ.

ಗಂಗಾ ವಿಲಾಸದ ವೈಶಿಷ್ಟ್ಯ
ಒಟ್ಟು ಎಷ್ಟು ದೂರ ಪ್ರಯಾಣ? – 3,200 ಕಿ.ಮೀ.
ಒಟ್ಟು ದಿನಗಳು- 51
ಮೊದಲ ಪ್ರಯಾಣದಲ್ಲಿನ ಪ್ರಯಾಣಿಕರು- 32
ಪ್ರತಿ ದಿನಕ್ಕೆ ಟಿಕೆಟ್‌ ದರ- 25,000-50,000 ರೂ.
51 ದಿನಗಳ ಪ್ರಯಾಣಕ್ಕೆ ಟಿಕೆಟ್‌ ದರ – 20 ಲಕ್ಷ ರೂ.
ನೌಕೆಯ ಉದ್ದ- 62 ಮೀಟರ್‌
ಅಗಲ- 12 ಮೀಟರ್‌
ಎಷ್ಟು ಪ್ರವಾಸಿ ತಾಣಗಳಿಗೆ ಭೇಟಿ?- 50

ಏನೇನಿದೆ?
ಪಂಚತಾರಾ ತೇಲುವ ಹೋಟೆಲ್‌ನಲ್ಲಿ 18 ಸ್ಯೂಟ್‌ಗಳಿದ್ದು, 36 ಮಂದಿ ಪ್ರಯಾಣಿಸಬಹುದಾಗಿದೆ. ಇದಲ್ಲದೇ, 40 ಮಂದಿ ಸಿಬ್ಬಂದಿಗೂ ವಸತಿ ವ್ಯವಸ್ಥೆಯಿದೆ. ಕ್ರೂಸ್‌ ನೌಕೆಯು ವಿಶ್ವ ಪಾರಂಪರಿಕ ತಾಣಗಳು, ರಾಷ್ಟ್ರೀಯ ಉದ್ಯಾನಗಳು, ಘಾಟ್‌ಗಳು, ಪ್ರಮುಖ ನಗರಗಳು ಸೇರಿದಂತೆ ಒಟ್ಟು 50 ಪ್ರವಾಸಿ ತಾಣಗಳಲ್ಲಿ ಸಂಚರಿಸಲಿದೆ. ನೌಕೆಯಲ್ಲಿ ಸ್ಪಾ, ಸಲೂನ್‌, ಜಿಮ್‌ ಮತ್ತಿತರ ಸೌಲಭ್ಯಗಳಿವೆ. ಮಾಲಿನ್ಯರಹಿತ ವ್ಯವಸ್ಥೆ ಹಾಗೂ ಶಬ್ದ ನಿಯಂತ್ರಣ ತಂತ್ರಜ್ಞಾನವನ್ನೂ ನೌಕೆ ಹೊಂದಿದೆ.

ಟಾಪ್ ನ್ಯೂಸ್

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.