
ಮಥುರಾದಿಂದ ಕಂಗನಾ ಸ್ಪರ್ಧೆ?; ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯೆ ಹೀಗಿದೆ
ಕ್ಷೇತ್ರವನ್ನು ಸಿನಿ ತಾರೆಯರು ಮಾತ್ರ ಪ್ರತಿನಿಧಿಸಬೇಕೆಂದಿದೆಯೇ ?
Team Udayavani, Sep 24, 2022, 2:36 PM IST

ಮಥುರಾ : ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದಿಂದ ಬಾಲಿವುಡ್ ನಟಿ ಕಂಗನಾ ರಣಾವತ್ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳ ಕುರಿತು ಹಾಲಿ ಬಿಜೆಪಿ ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯಿಸಿದ್ದು, ಕ್ಷೇತ್ರವನ್ನು ಸಿನಿ ತಾರೆಯರು ಮಾತ್ರ ಪ್ರತಿನಿಧಿಸಬೇಕೆಂದಿದೆಯೇ ಎಂದು ಪ್ರಶ್ನಿಸಿದ್ದಾರೆ.
ಕಂಗನಾ ರಣಾವತ್ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದೆ ಹೇಮಾ ಮಾಲಿನಿ, ”ಒಳ್ಳೆಯದು, ಬಹಳ ಒಳ್ಳೆಯ ವಿಚಾರ, ನನ್ನ ವಿಚಾರವೇನು ಭಗವಾನ್ ಕೃಷ್ಣ ನೋಡಿಕೊಳ್ಳುತ್ತಾನೆ” ಎಂದರು.
ಕ್ಷೇತ್ರವನ್ನು ಸಿನಿ ತಾರೆಯರು ಮಾತ್ರ ಪ್ರತಿನಿಧಿಸಬೇಕೆಂದಿದೆಯೇ ಎಂದು ಪ್ರಶ್ನಿಸಿ, ನಾಳೆ ರಾಖಿ ಸಾವಂತ್ ಅವರನ್ನು ಕಳುಹಿಸುತ್ತಾರೆ ಅವರೂ ಅಭ್ಯರ್ಥಿಯಾಗಬಹುದು ಎಂದು ಖಾರವಾಗಿ ಪ್ರತಿಕ್ರಿಯಿಸಿ ಕಾರನ್ನು ಏರಿ ಮುಂದುವರಿದರು.
73 ರ ಹರೆಯದ ಡ್ರೀಮ್ ಗರ್ಲ್ ಖ್ಯಾತಿಯ ನಟಿ ಹೇಮಾ ಮಾಲಿನಿ ಅವರು ಸತತ ಎರಡನೇ ಬಾರಿಗೆ ಮಥುರಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
#WATCH | Mathura, Uttar Pradesh: When asked about speculation that actor Kangana Ranaut could contest elections from Mathura, BJP MP Hema Malini says, “Good, it is good…You want only film stars in Mathura. Tomorrow, even Rakhi Sawant will become.” pic.twitter.com/wgQsDzbn5Z
— ANI (@ANI) September 24, 2022
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
