ಬಾಹ್ಯಾಕಾಶಕ್ಕೆ ನೆಗೆಯಲಿರುವ ಮೊದಲ ಸೌದಿ ಮಹಿಳೆ
Team Udayavani, Sep 22, 2022, 10:30 PM IST
ರಿಯಾದ್: ಕಾರು ಚಾಲನೆಗೆ ಮಹಿಳೆಯರಿಗೆ ಅನುಮತಿ ಕಲ್ಪಿಸಿದ ನಾಲ್ಕು ವರ್ಷಗಳ ನಂತರ ಬಾಹ್ಯಾಕಾಶಕ್ಕೆ ಮೊದಲ ಬಾರಿಗೆ ಮಹಿಳೆಯನ್ನು ಕಳುಹಿಸಲು ಸೌದಿ ಅರೇಬಿಯಾ ಮುಂದಾಗಿದೆ.
ದೀರ್ಘ ಮತ್ತು ಅಲ್ಪಾವಧಿ ಬಾಹ್ಯಾಕಾಶ ಪ್ರಯಾಣಕ್ಕೆ ಗಗನಯಾತ್ರಿಗಳಿಗೆ ತರಬೇತಿ ನೀಡುವ ತನ್ನ ಮೊದಲ ಬಾಹ್ಯಾಕಾಶ ಯೋಜನೆಗೆ ಸೌದಿ ಅರೇಬಿಯಾ ಗುರುವಾರ ಚಾಲನೆ ನೀಡಿತು. ಈ ಯೋಜನೆಯು ಸೌದಿಯ ಮಹಾತ್ವಾಕಾಂಕ್ಷೆಯ “ವಿಷನ್ 2030’ರ ಭಾಗವಾಗಿದೆ. ಯೋಜನೆಯ ಅನುಸಾರ ಪುರುಷ ಗಗನಯಾತ್ರಿಯೊಂದಿಗೆ ಒಬ್ಬ ಮಹಿಳಾ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.
“ಈ ಯೋಜನೆಯು ಆರೋಗ್ಯ, ಸುಸ್ಥಿರತೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಆದ್ಯತೆಯ ಕ್ಷೇತ್ರಗಳಲ್ಲಿ ವೈಜ್ಞಾನಿಕ ಸಂಶೋಧನೆಗಳು ಮತ್ತು ಪ್ರಯೋಗಗಳನ್ನು ನಡೆಸಲು ಸೌದಿ ಗಗನಯಾತ್ರಿಗಳಿಗೆ ಅನುವು ಮಾಡಿಕೊಡಲಿದೆ,’ ಎಂದು ಸೌದಿ ಬಾಹ್ಯಾಕಾಶ ಆಯೋಗ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ