ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣ: ಕಾರ್ತಿ ಚಿದಂಬರಂಗೆ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ
ಕಾರ್ತಿ ಚಿದಂಬರಂ ವಿದೇಶಕ್ಕೆ ತೆರಳಲು ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ
Team Udayavani, Feb 18, 2020, 6:58 PM IST
ನವದೆಹಲಿ: ಏರ್ ಸೆಲ್, ಮ್ಯಾಕ್ಸಿಸ್ ಪ್ರಕರಣದ ಆರೋಪಿಯಾಗಿರುವ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿರುವ ಸ್ಪೆಶಲ್ ಕೋರ್ಟ್ ಮಂಗಳವಾರ ತನಿಖಾ ಸಂಸ್ಥೆಗೆ ಪ್ರಯಾಣದ ವಿವರವನ್ನು ನೀಡುವಂತೆ ನಿರ್ದೇಶನ ನೀಡಿದೆ.
ಲಂಡನ್ ಮತ್ತು ಫ್ರಾನ್ಸ್ ಗೆ ತೆರಳಲು ಎರಡು ವಾರಗಳ ಕಾಲಾವಧಿಗೆ ಸ್ಪೆಶಲ್ ಕೋರ್ಟ್ ಕಾರ್ತಿ ಚಿದಂಬರಂಗೆ ಅನುಮತಿ ನೀಡಿದೆ.
ಕಾರ್ತಿ ಚಿದಂಬರಂ ವಿದೇಶಕ್ಕೆ ತೆರಳಲು ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸೋಮವಾರ ದೆಹಲಿ ಕೋರ್ಟ್ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿತ್ತು.
ಏರ್ ಸೆಲ್, ಮ್ಯಾಕ್ಸಿಸ್ ಪ್ರಕರಣದಲ್ಲಿ ಕಾರ್ತಿ ಹಾಗೂ ತಂದೆ, ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ನಿರೀಕ್ಷಣಾ ಜಾಮೀನಿನ ಮೇಲೆ ಹೊರ ಬಂದಿದ್ದರು. ವಿದೇಶ ಪ್ರಯಾಣಕ್ಕೆ ಕೋರ್ಟ್ ನಿರ್ಬಂಧ ಹೇರಿತ್ತು, ಪೂರ್ವ ಅನುಮತಿ ಇಲ್ಲದೇ ದೇಶ ಬಿಡುವಂತೆ ಇಲ್ಲ ಎಂದು ನಿರ್ದೇಶನ ನೀಡಿತ್ತು.