ರಾಂಬನ್: ಚೀನದ ಹ್ಯಾಂಡ್ ಗ್ರೆನೇಡ್ ಸಹಿತ ಅಲ್-ಖೈದಾ ಕಾರ್ಯಕರ್ತನ ಬಂಧನ
Team Udayavani, Nov 7, 2022, 5:17 PM IST
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿಅಲ್-ಖೈದಾ ಉಗ್ರ ಸಂಘಟನೆ ಕಾರ್ಯಕರ್ತನನ್ನು ಹ್ಯಾಂಡ್ ಗ್ರೆನೇಡ್‌ನೊಂದಿಗೆ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮಶಿತಾ ಹೌರಾ ನಿವಾಸಿ ಅಮೀರುದ್ದೀನ್ ಖಾನ್ ನನ್ನು ರಾಂಬನ್‌ನ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತನ ವಶದಿಂದ ಚೀನದ ಹ್ಯಾಂಡ್ ಗ್ರೆನೇಡ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ರಾಂಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸನಾತನ ಸಂಸ್ಥೆ ನಿಷೇಧಿತ …ಸಂಘಟನೆ ಅಲ್ಲ: ಬಾಂಬೆ ಹೈಕೋರ್ಟ್, ಏನಿದು ಪ್ರಕರಣ?
ಅಪಘಾತದಲ್ಲಿ ಪೇದೆ ಮೃತ್ಯು: 5 ವರ್ಷದ ಮಗನನ್ನು ಮಕ್ಕಳ ಕಾನ್ಸ್ ಟೇಬಲ್ ಆಗಿ ನೇಮಿಸಿದ ಇಲಾಖೆ
ರಾಹುಲ್ ಅನರ್ಹತೆಗೆ ಪ್ರತ್ಯುತ್ತರವಾಗಿ ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿ: ಪ್ರಿಯಾಂಕಾ
15 ದಿನಗಳೊಳಗೆ ಶರಣಾಗಿ: ಸುಪ್ರೀಂ ಕೋರ್ಟ್ ನಿರ್ದೇಶನ
ಬರೋಬ್ಬರಿ 1 ಕೋಟಿ ರೂ. ದಂಡ ಸಂಗ್ರಹಿಸಿದ ಮಹಿಳಾ ಟಿಕೆಟ್ ಚಕ್ಕರ್…