ಗೋವಾ ಸರ್ಕಾರಿ ಅಕೌಂಟೆಂಟ್ ಪರೀಕ್ಷೆ ಬರೆದ ಎಲ್ಲಾ 8,000 ಮಂದಿ ಫೇಲ್!
Team Udayavani, Aug 22, 2018, 12:31 PM IST
ಪಣಜಿ : ಗೋವಾ ಸರ್ಕಾರ 80 ಅಕೌಂಟೆಂಟ್ ಹುದ್ದೆಗಳ ನೇಮಕಾತಿ ಗಾಗಿ ಪರೀಕ್ಷೆ ನಡೆಸಿತ್ತು, ದುರಂತವೆಂದರೆ ಪರೀಕ್ಷೆ ಬರೆದ 8 ಸಾವಿರ ಮಂದಿಯೂ ಅನುತ್ತೀರ್ಣರಾಗಿದ್ದಾರೆ.
100 ಅಂಕದ ಪ್ರಶ್ನೆ ಪತ್ರಿಕೆಯಲ್ಲಿ 50 ಅಂಕ ಪಡೆದವರನ್ನು ಹುದ್ದೆಗೆ ಪರಿಗಣಿಸಲಾಗುತ್ತಿತ್ತು. ಸಾಮಾನ್ಯ ಜ್ಞಾನ, ಇಂಗ್ಲೀಷ್ ಮತ್ತು ಲೆಕ್ಕಶಾಸ್ತ್ರದ ಕುರಿತು ಪ್ರಶ್ನೆಗಳಿದ್ದವು. ಪದವೀಧರರಿಗಾಗಿ ಪರೀಕ್ಷೆ ನಡೆಸಲಾಗಿತ್ತು.
ಜನವರಿ ತಿಂಗಳಿನಲ್ಲಿ ನಡೆದ ಪರೀಕ್ಷೆಯಲ್ಲಿ ಒಬ್ಬ ಅಭ್ಯರ್ಥಿಯೂ ಪಾಸ್ ಆಗಿಲ್ಲವೆಂದು ಗೋವಾದ ಆಕೌಂಟ್ಸ್ ಡೈರೆಕ್ಟರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಆಮ್ ಆದ್ಮಿ ಪಕ್ಷದ ಗೋವಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪಡ್ಗಾಂವ್ಕರ್ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದು, 8 ಸಾವಿರ ಅಭ್ಯರ್ಥಿಗಳು ಅನುತ್ತೀರ್ಣರಾಗಿರುವುದು ರಾಜ್ಯದ ಶಿಕ್ಷಣ ವ್ಯವಸ್ಥೆಯ “ಕುಸಿತ” ಬಗ್ಗೆ ಮಾಡಬಹುದಾದ ದುಃಖದ ವ್ಯಾಖ್ಯಾನ.ಗೋವಾದ ವಾಣಿಜ್ಯ ಕಾಲೇಜುಗಳಿಗೆ ಇದು ಅವಮಾನಕರ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ