
Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್
Team Udayavani, Jun 4, 2023, 7:00 PM IST

ಬಾಲಸೋರ್: ಒಡಿಶಾದ ಬಾಲಸೋರ್ ಅಪಘಾತ ಸ್ಥಳದಲ್ಲಿ ಎರಡೂ ರೈಲು ಹಳಿಗಳನ್ನು ದುರಸ್ತಿ ಮಾಡಲಾಗಿದೆ ಎಂದು ಸರ್ಕಾರ ಭಾನುವಾರ ತಿಳಿಸಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಟ್ವೀಟ್ ಮಾಡಿ, ಅಪ್-ಲೈನ್ ನ ಟ್ರ್ಯಾಕ್ ಲಿಂಕನ್ನು 16.45 ಗಂಟೆಗೆ ಮಾಡಲಾಗಿದೆ. ಓವರ್‌ಹೆಡ್ ವಿದ್ಯುದ್ದೀಕರಣ ಕೆಲಸ ಪ್ರಾರಂಭವಾಯಿತು” ಎಂದು ಹೇಳಿದ್ದಾರೆ.
ಹೌರಾವನ್ನು ಸಂಪರ್ಕಿಸುವ ಡೌನ್ ಲೈನನ್ನು ಮರುಸ್ಥಾಪಿಸಲಾಗಿದೆ ಎಂದು ಅವರು ಈ ಹಿಂದೆ ಟ್ವೀಟ್ ಮಾಡಿದ್ದರು.
ಕನಿಷ್ಠ ಒಂದು ಸೆಟ್ ರೈಲ್ವೇ ಹಳಿಗಳು ಈಗ ರೈಲುಗಳಿಗೆ ಸರಿಹೊಂದುತ್ತವೆ ಎಂದು ಇದು ಸೂಚಿಸುತ್ತದೆ, ಆದರೆ ಬಾಲಸೋರ್ ಅಪಘಾತದ ಸ್ಥಳದಲ್ಲಿ ಲೂಪ್ ಲೈನ್ ಗಳನ್ನು ಒಳಗೊಂಡಿರುವ ಎಲ್ಲಾ ಟ್ರ್ಯಾಕ್ ಗಳನ್ನು ಸರಿಪಡಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಓವರ್ ಹೆಡ್ ಎಲೆಕ್ಟ್ರಿಕ್ ಕೇಬಲ್ ರಿಪೇರಿಯಾಗುವವರೆಗೆ, ದುರಸ್ತಿಗೊಂಡಿರುವ ಎರಡು ಲೈನ್ ನಲ್ಲಿ ಡೀಸೆಲ್ ಇಂಜಿನ್ ಗಳನ್ನು ಮಾತ್ರ ಓಡಿಸಬಹುದು.
ಟಾಪ್ ನ್ಯೂಸ್
