ಶೇ.90 ಮೊಬೈಲ್ ಸ್ಥಳೀಯ
Team Udayavani, Nov 2, 2018, 8:45 AM IST
ಹೊಸದಿಲ್ಲಿ: ದೇಶೀಯ ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಸ್ಮಾರ್ಟ್ಫೋನ್ಗಳಲ್ಲಿ ಶೇ. 90ರಷ್ಟು ಫೋನುಗಳು ಸ್ಥಳೀಯವಾಗಿಯೇ ಉತ್ಪಾದನೆಯಾಗುತ್ತದೆ ಎಂದು ‘ಟೆಕ್ 2’ ಹೇಳಿದೆ. ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ಎಂಬ ಸಂಶೋಧನಾ ವರದಿಯನ್ನಾಧರಿಸಿ ಮಾಡಲಾಗಿರುವ ಈ ವರದಿಯಲ್ಲಿ, ಸ್ಮಾರ್ಟ್ ಫೋನ್ಗಳ ಬೇಡಿಕೆ ಗಗನಮುಖೀಯಾಗಿ ಏರುತ್ತಿರುವ ಹಿನ್ನೆಲೆಯಲ್ಲಿ, ಅತಿ ಕಡಿಮೆ ಬೆಲೆಗೆ ಗರಿಷ್ಠ ಫೀಚರ್ಸ್ ಇರುವ ಮೊಬೈಲ್ಗಳನ್ನು ತಯಾರಿಸುವ ಉದ್ದೇಶದಿಂದ ಅನೇಕ ಅಂತಾರಾಷ್ಟ್ರೀಯ ಕಂಪೆನಿಗಳು ಭಾರತದಲ್ಲೇ ತಮ್ಮ ತಯಾರಿಕಾ ಘಟಕಗಳನ್ನು ಸ್ಥಾಪಿಸಿ, ಆಮದು ವೆಚ್ಚವನ್ನು ಕಡಿಮೆ ಮಾಡಿಕೊಂಡಿವೆ ಎಂದು ಹೇಳಲಾಗಿದೆ.