ದೋಚಲು ಬಂದ ಶಸ್ತ್ರಧಾರಿ ಕಳ್ಳರನ್ನು ಹೊಡೆದೋಡಿಸಿದ ವೃದ್ಧ ದಂಪತಿ!

Team Udayavani, Aug 13, 2019, 6:34 PM IST

ಚೆನ್ನೈ: ವೃದ್ಧ ದಂಪತಿಗಳಿದ್ದ ಮನೆಯಲ್ಲಿ ಕಳ್ಳತನಕ್ಕೆಂದು ಬಂದ ಇಬ್ಬರು ಶಸ್ತ್ರಧಾರಿ ಕಳ್ಳರನ್ನು ಧೈರ್ಯದಿಂದ ಎದುರಿಸಿ ಅವರೊಂದಿಗೆ ಹೋರಾಡಿ ಅವರು ಓಡುವಂತೆ ಮಾಡುವಲ್ಲಿ ಯಶಸ್ವಿಯಾದ ದೃಶ್ಯ ಇದೀಗ ಅವರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ.

ವೃದ್ಧ ದಂಪತಿ ತೋರಿಸಿರುವ ಈ ಧೈರ್ಯ ಇದೀಗ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

ವೃದ್ಧ ದಂಪತಿ ತೋರಿಸಿರುವ ಈ ಧೈರ್ಯ ಇದೀಗ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಎಪ್ಪತ್ತು ವರ್ಷದ ಷಣ್ಮುಗವೇಲು ಮತ್ತು ಅರವತ್ತೈದು ವರ್ಷದ ಸೆಂಥಮರೈ ಎಂಬವರೇ ಈ ಸಾಹಸ ತೋರಿರುವ ದಂಪತಿಗಳಾಗಿದ್ದಾರೆ.

ತಮಿಳುನಾಡಿನ ತಿರುವನೆಳ್ಳಿ ಎಂಬಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಸಿಸಿಸಿಟಿವಿಯಲ್ಲಿ ದಾಖಲಾಗಿರುವಂತೆ ಈ ಘಟನೆಯು ಆಗಸ್ಟ್ 11ರ ರಾತ್ರಿ ಹೊತ್ತಿನಲ್ಲಿ ನಡೆದಿದೆ. ಕಾಡಿಗೆ ಸಮೀಪವಿರುವ ತೋಟದ ಮನೆಯಲ್ಲಿ ಈ ಘಟನೆ ನಡೆದಿರುವ ಮಾಹಿತಿ ಲಭ್ಯವಾಗಿದ್ದು, ಈ ದಂಪತಿ ಕಳೆದ 40 ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿಯೂ ಲಭಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ