
QR ಕೋಡ್ ನ ನಕಲಿ ಗುರುತಿನ ಚೀಟಿಯೊಂದಿಗೆ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಬಂಧನ
Team Udayavani, Aug 21, 2020, 4:30 PM IST

ಮುಂಬಯಿ: ಕ್ಯೂಆರ್ ಕೋಡ್ ಹೊಂದಿರುವ ನಕಲಿ ಗುರುತಿನ ಚೀಟಿ ಬಳಸಿಕೊಂಡು ಉಪನಗರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 21ರ ಹರೆಯದ ಯುವತಿಯನ್ನು ಬಂಧಿಸಲಾಗಿದೆ ಎಂದು ಸರಕಾರಿ ರೈಲ್ವೇ ಪೊಲೀಸ್ (ಜಿಆರ್‌ಪಿ) ಶುಕ್ರವಾರ ತಿಳಿಸಿದೆ.
ನೆರೆಯ ಪಾಲ್ಗಾರ್ ಜಿಲ್ಲೆಯ ನಲಸೋಪಾರ ನಿವಾಸಿಯಾಗಿರುವ ಯುವತಿಯನ್ನು ಗುರುವಾರ ಪಶ್ಚಿಮ ರೈಲ್ವೇಯ ಬೊರಿವಲಿ ನಿಲ್ದಾಣದಲ್ಲಿ ಬಂಧಿಸಲಾಗಿದೆ. ದಕ್ಷಿಣ ಮುಂಬಯಿಯ ಮರೀನ್ ಲೈನ್ ನಲ್ಲಿರುವ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಈ ಯುವತಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ತುರ್ತು ಮತ್ತು ಅಗತ್ಯ ಸೇವೆಗಳ ಸಿಬಂದಿಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕಿನ ನೌಕರರು ಮತ್ತು ಎಂಬಿಪಿಟಿಯಂತಹ ಕೆಲವು ಇತರ ಕೇಂದ್ರ ಸರಕಾರಿ ಸಂಸ್ಥೆಗಳಿಗೆ ಮಾತ್ರ ಉಪನಗರ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶವಿದೆ. ಇದನ್ನು ಖಚಿತಪಡಿಸಿಕೊಳ್ಳಲು ಉಪನಗರ ರೈಲುಗಳಲ್ಲಿ ಪ್ರಯಾಣಿಸಲು ಅರ್ಹರಿಗೆ ಮಹಾರಾಷ್ಟ್ರ ಸರಕಾರದ ಕಡೆಯಿಂದ ಕ್ಯೂಆರ್ ಕೋಡ್ ಹೊಂದಿರುವ ಹೊಸ ಗುರುತಿನ ಚೀಟಿಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ; ಬಡತನ, ಅವಮಾನಗಳ ಬೆಂಕಿಯ ನಡುವೆ ಅರಳಿದ ಚಿನ್ನದ ಹೂವು: ಪಿ.ಟಿ ಉಷಾ ಗೋಲ್ಡನ್ ಜರ್ನಿ
ಮೂಲಗಳ ಪ್ರಕಾರ, ಯುವತಿಯು ವಿರಾರ್ ಮತ್ತು ಚರ್ಚ್‌ಗೇಟ್ ನಡುವೆ ಜುಲೈ 19 ರಿಂದ ಆಗಸ್ಟ್ 18 ರವರೆಗಿನ ಎರಡನೇ ದರ್ಜೆಯ ಮಾಸಿಕ ಸೀಸನ್ ಟಿಕೆಟ್ ಹೊಂದಿದ್ದಳು. ಬೊರಿವಲಿ ನಿಲ್ದಾಣದಲ್ಲಿ ಟಿಕೆಟ್ ತಪಾಸಕ ಅದನ್ನು ಪರೀಕ್ಷಿಸಿದಾಗ ಆಕೆಯ ಗುರುತಿನ ಚೀಟಿ ನಕಲಿ ಎಂದು ತಿಳಿದುಬಂದಿದೆ. ಕ್ಯೂಆರ್ ಕೋಡ್ ಹೊಂದಿರುವ ನಕಲಿ ಗುರುತಿನ ಚೀಟಿಯನ್ನು ಬಿಎಂಸಿ ನೌಕರರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಟಿಕೆಟ್ ತಪಾಸಕ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಅದು ಅಧಿಕೃತ ಚೀಟಿ ಅಲ್ಲ ಎಂದು ತಿಳಿದು ಬಂದಿದೆ. ಆದ್ದರಿಂದ ರೈಲ್ವೇ ಸಿಬಂದಿ ಆಕೆಯನ್ನು ಜಿಆರ್‌ಪಿಗೆ ಹಸ್ತಾಂತರಿಸಿದರು. ಆಕೆ ನಕಲಿ ಗುರುತಿನ ಚೀಟಿಯನ್ನು ಹೇಗೆ ಪಡೆದಳು ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಕೆಯ ವಿರುದ್ಧ ಐಪಿಸಿಯ ಸೆಕ್ಷನ್ 420 (ಮೋಸ), 465 (ಖೋಟಾ), 468 (ಮೋಸ ಮಾಡುವ ಉದ್ದೇಶದಿಂದ ದಾಖಲೆಗಳ ನಕಲು ಮಾಡುವಿಕೆ) ಮತ್ತು 471ರ (ನಕಲಿ ದಾಖಲೆಯನ್ನು ಅಸಲಿ ದಾಖಲೆಯಾಗಿ ಬಳಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipur: ಬಂಡುಕೋರರ ಗುಂಡಿನ ದಾಳಿ: ಓರ್ವ ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

Balasore Train Tragedy ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ಹತ್ತು ಅಂಶಗಳ ನೆರವು

VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು

Gujarat: ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ, ಹಲ್ಲೆ

Indore: ಚಾಕ್ಲೇಟ್,ಆಟಿಕೆ ಕೇಳಿದ್ದಕ್ಕೆ 8 ವರ್ಷದ ಮಗಳನ್ನು ಭೀಕರವಾಗಿ ಹತ್ಯೆಗೈದ ಪಾಪಿ ತಂದೆ
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
