ಲಸಿಕೆಯ ಉತ್ಪಾದನಾ ಮಟ್ಟವನ್ನು ಹೆಚ್ಚಿಸಿ, ಹೀಗೆ ಆದರೇ ಎರಡು ವರ್ಷಗಳಾಗುತ್ತವೆ : ಕೇಜ್ರಿವಾಲ್

ಫೈಜರ್ ಮತ್ತು ಮೊಡೆರ್ನಾ ಕಂಪೆನಿಗಳ ಲಸಿಕೆಗನ್ನು ಆಮದು ಮಾಡಿಕೊಳ್ಳುವಂತೆ ಕೇಂದ್ರಕ್ಕೆ ಕೇಜ್ರಿವಾಲ್ ಮನವಿ

Team Udayavani, May 24, 2021, 2:49 PM IST

Arvind Kejriwal appeals to Centre to import COVID-19 vaccines after Pfizer, Moderna refuse to directly sell to Delhi govt

ನವ ದೆಹಲಿ : ಫೈಜರ್ ಮತ್ತು ಮೊಡೆರ್ನಾ ಕಂಪೆನಿಗಳು ನೇರವಾಗಿ ದೆಹಲಿ ಸರ್ಕಾರಕ್ಕೆ ಮಾರಾಟ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಇಂದು(ಸೋಮವಾರ , ಮೇ 24) ಫೈಜರ್ ಹಾಗೂ ಮಾಡೆರ್ನಾ ಕಂಪೆನಿಗಳ ಆ್ಯಂಟಿ ಕೋವಿಡ್ 19 ಲಸಿಕೆಗಳನ್ನು ಆಮದು ಮಾಡಿಕೊಳ್ಳುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ.

“ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್,  ನಾವು ಲಸಿಕೆಗಳಿಗಾಗಿ  ಫೈಜರ್, ಮಾಡರ್ನಾ ಕಂಪೆನಿಗಳೊಂದಿಗೆ ಮಾತನಾಡಿದ್ದೇವೆ ಮತ್ತು ಎರಡೂ ಕಂಪನಿಗಳು ಲಸಿಕೆಗಳನ್ನು ನೇರವಾಗಿ ನಮಗೆ ಮಾರಾಟ ಮಾಡಲು ನಿರಾಕರಿಸಿವೆ. ಉಭಯ ಕಂಪೆನಿಗಳು ಭಾರತ ಸರ್ಕಾರದೊಂದಿಗೆ ಮಾತ್ರ ವ್ಯವಹರಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಆದಷ್ಟು ಶೀಘ್ರದಲ್ಲಿ  ಲಸಿಕೆಗಳನ್ನು ಆಮದು ಮಾಡಿಕೊಂಡು ರಾಜ್ಯಗಳಿಗೆ ವಿತರಿಸುವಂತೆ ಕೇಂದ್ರಕ್ಕೆ ಅವರು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ : ಮೇ.25ರಿಂದ ಜೂ.7ರವರೆಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಮದುವೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ

ದೇಶದಾದ್ಯಂತ ಕೋವಿಡ್ ಸೋಂಕಿನ ಅಲೆಯ ಪರಿಣಾಮ ತುಂಬಾ ಕೆಟ್ಟದಾಗಿ ಬೀರಿರುವ ಕಾರಣ, ಸೋಂಕನ್ನು ತಡೆಗಟ್ಟಲು ಲಸಿಕೆ ನೀಡುವುದು ಕೂಡ ಹೆಚ್ಚಾಗಬೇಕು. ದೇಶದಲ್ಲಿ ಸದ್ಯಕ್ಕೆ ಲಸಿಕೆಗಳ ಕೊರತೆ ಇದೆ. ಲಸಿಕೆಗಳ ಅಭಾವವನ್ನು ನೀಗಿಸಲು ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸಬೇಕು.

ಇನ್ನು, ದೇಶದಲ್ಲಿ ಕೇಲವ ಎರಡು ಕಂಪೆನಿಗಳು ಮಾತ್ರ ಸದ್ಯಕ್ಕೆ ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಆ ಕಂಪೆನಿಗಳು ತಿಂಗಳಿಗೆ ಕೇವಲ ಆರರಿಂದ ಏಳು ಕೋಟಿ ಡೋಸ್ ಗಳಷ್ಟು ಮಾತ್ರ ಲಸಿಕೆಗಳನ್ನ ತಯಾರಿಸುತ್ತಿವೆ. ಭಾರತದ ಸಧ್ಯದ ಸ್ಥಿತಿಗೆ ಅದು ಸಾಕಾಗುವುದಿಲ್ಲ. ಮತ್ತು ತಿಂಗಳಿಗೆ ಇಷ್ಟೇ ಪ್ರಮಾಣದಲ್ಲಿ ಲಸಿಕೆಗಳನ್ನು ದೇಶದಲ್ಲಿ ಉತ್ಪಾದನೆಯಾದರೇ, ದೇಶದ ಎಲ್ಲಾ ನಾಗರಿಕರಿಗೆ ಲಸಿಕೆ ಹಾಕಿಸುವಾಗ ಬರೋಬ್ಬರಿ ಎರಡು ವರ್ಷಗಳು ಕಳೆಯಬಹದು. ಅಷ್ಟರೊಳಗಾಗಿ ಸೋಂಕಿನ ಮತ್ತಷ್ಟು ಅಲೆಗಳು ಬರಬಹುದು. ಕೋವಿಡ್ ನ್ನು ಮೆಟ್ಟಿ ನಿಲ್ಲಲು ಲಸಿಕೆಗಳ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಎಲ್ಲರಿಗೂ ಲಸಿಕೆ ಹಾಕಿಸುವ ಯೋಜನೆ ಕೇಂದ್ರ ಸರ್ಕಾರದ್ದಾಗಬೇಕು ಎಂದು ಅವರು ಹೇಳಿದ್ದಾರೆ.

ಈ ಹಿಂದೆ, ಕೇಂದ್ರ ಸರ್ಕಾರಕ್ಕೆ ದೇಶ ವಿದೇಶಗಳ ಲಸಿಕೆ ಉತ್ಪಾದಿಸುವ ಕಂಪೆನಿಗಳಿಗೆ ಭಾರತದಲ್ಲಿ ಲಸಿಕೆಯನ್ನು ತಯಾರಿಸಲು ಅನುಮತಿಸುವಂತೆ ಕೇಜ್ರಿವಾಲ್ ಕೇಳಿಕೊಂಡಿದ್ದರು.

ಇದನ್ನೂ ಓದಿ : ಎನ್ ಟಿ ಆರ್ ಜೊತೆಗಿನ ಚಿತ್ರಕ್ಕೆ ಪ್ರಶಾಂತ್ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ?

ಸದ್ಯಕ್ಕೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್, ಭಾರತ್ ಬಯೋಟೆಕ್ನ ಕೋವಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳನ್ನು ಭಾರತವು ನೀಡುತ್ತಿದೆ.

ಫೈಜರ್ / ಬಯೋಎನ್‌ ಟೆಕ್ ಮತ್ತು ಮಾಡರ್ನಾ  ಕೋವಿಡ್ ಲಸಿಕೆಗಳು ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೋವಿಡ್ -19 ರೂಪಾಂತರಗಳಾದ ಬಿ .1.617 ಮತ್ತು ಬಿ .1.618 ಗಳಿಂದ ರಕ್ಷಿಸುತ್ತವೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಏತನ್ಮಧ್ಯೆ, ದೇಶದಲ್ಲಿ ನೀಡಲಾಗುತ್ತಿರುವ ಲಸಿಕೆಗಳ ಪ್ರಮಾಣವು ಸೋಮವಾರ(ಮೇ. 24) ಬೆಳಿಗ್ಗೆಯ ಹೊತ್ತಿಗೆ 19.60 ಕೋಟಿ ಡೋಸ್ ಗಳು ದಾಟಿದ್ದು, ಅದರಲ್ಲಿ ಕೋವಿಡ್ 19 ಲಸಿಕೆ ಅಭಿಯಾನದ 3 ನೇ ಹಂತದ ಅಡಿಯಲ್ಲಿ 18-44 ವಯಸ್ಸಿನವರಿಗೆ 1 ಕೋಟಿ ಡೋಸ್ ಗಳು ಸೇರಿವೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ಕಠಿಣ ಲಾಕ್ ಡೌನ್ ನಿಂದ ಬ್ಯಾಂಕ್ -ವಿಮಾ ಕಚೇರಿ ಬಂದ್: ಗ್ರಾಹಕರು, ರೈತರ ಪರದಾಟ

ಟಾಪ್ ನ್ಯೂಸ್

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ವರ್ಷದ ಬಳಿಕ ಚೀನಕ್ಕೆ ಮರಳಿ ಖ್ಯಾತ ಉದ್ಯಮಿ ಜ್ಯಾಕ್‌ ಮಾ

ವರ್ಷದ ಬಳಿಕ ಚೀನಕ್ಕೆ ಮರಳಿ ಖ್ಯಾತ ಉದ್ಯಮಿ ಜ್ಯಾಕ್‌ ಮಾ

ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ

ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಬಾಳೆಬರೆ ಘಾಟಿ ಕಾಂಕ್ರಿಟೀಕರಣ ಬಹುತೇಕ ಪೂರ್ಣ: ಎ.10ರ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ

ಬಾಳೆಬರೆ ಘಾಟಿ ಕಾಂಕ್ರಿಟೀಕರಣ ಬಹುತೇಕ ಪೂರ್ಣ: ಎ.10ರ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ

ಬಿಸಿಲಾಘಾತದಿಂದ ಸಾವು: 115 ಕೋ.ರೂ. ಪರಿಹಾರ !

ಬಿಸಿಲಾಘಾತದಿಂದ ಸಾವು: 115 ಕೋ.ರೂ. ಪರಿಹಾರ !

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ಸುಳ್ಯದ ಪಿಎಫ್ಐ ಕಚೇರಿ ಜಪ್ತಿ

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ಸುಳ್ಯದ ಪಿಎಫ್ಐ ಕಚೇರಿ ಜಪ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಕೋವಿಡ್ ಪ್ರಕರಣ ಹೆಚ್ಚಳ: ವರ್ಷದ ಬಳಿಕ ಮತ್ತೆ ತೆರೆದ ಕೋವಿಡ್ ವಾರ್ಡ್‌!

ಕೋವಿಡ್ ಪ್ರಕರಣ ಹೆಚ್ಚಳ: ವರ್ಷದ ಬಳಿಕ ಮತ್ತೆ ತೆರೆದ ಕೋವಿಡ್ ವಾರ್ಡ್‌!

ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಗೌಪ್ಯ ಸಭೆಗೆ ಚೀನ ಗೈರು

ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಗೌಪ್ಯ ಸಭೆಗೆ ಚೀನ ಗೈರು

ಕಾಂಗ್ರೆಸ್‌ನಿಂದ “ಕಪ್ಪು’ ಸಮರ; ಗದ್ದಲದ ನಡುವೆಯೇ ಹಣಕಾಸು ಮಸೂದೆ ಅಂಗೀಕಾರ

ಕಾಂಗ್ರೆಸ್‌ನಿಂದ “ಕಪ್ಪು’ ಸಮರ; ಗದ್ದಲದ ನಡುವೆಯೇ ಹಣಕಾಸು ಮಸೂದೆ ಅಂಗೀಕಾರ

ಆಪ್‌-ರಾಜ್ಯಪಾಲರ ನಡುವೆ ವಿದ್ಯುತ್‌ ಜಗಳ: ಸಚಿವೆ ಅತಿಶಿ

ಆಪ್‌-ರಾಜ್ಯಪಾಲರ ನಡುವೆ ವಿದ್ಯುತ್‌ ಜಗಳ: ಸಚಿವೆ ಅತಿಶಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ವರ್ಷದ ಬಳಿಕ ಚೀನಕ್ಕೆ ಮರಳಿ ಖ್ಯಾತ ಉದ್ಯಮಿ ಜ್ಯಾಕ್‌ ಮಾ

ವರ್ಷದ ಬಳಿಕ ಚೀನಕ್ಕೆ ಮರಳಿ ಖ್ಯಾತ ಉದ್ಯಮಿ ಜ್ಯಾಕ್‌ ಮಾ

ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ

ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಬಾಳೆಬರೆ ಘಾಟಿ ಕಾಂಕ್ರಿಟೀಕರಣ ಬಹುತೇಕ ಪೂರ್ಣ: ಎ.10ರ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ

ಬಾಳೆಬರೆ ಘಾಟಿ ಕಾಂಕ್ರಿಟೀಕರಣ ಬಹುತೇಕ ಪೂರ್ಣ: ಎ.10ರ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.