ಕೋವಿಡ್ 19-ಲಾಕ್ ಡೌನ್: ಮನೆ ತಲುಪಲು ಕಾಲ್ನಡಿಗೆಯಲ್ಲೇ 100 ಕಿ.ಮೀ ಕ್ರಮಿಸಿದ 80ವರ್ಷದ ಅಜ್ಜ!
ಈ ಅಜ್ಜ ಗುವಾಹಟಿಯಿಂದ ರೈಲಿನಲ್ಲಿ ನಾಗಾಂವ್ ಜಿಲ್ಲೆಯ ಕಾಲಿಯಾ ಬೋರ್ ಪ್ರದೇಶಕ್ಕೆ ಬಂದು ತಲುಪಿದ್ದರು.
Team Udayavani, Mar 27, 2020, 5:07 PM IST
ನವದೆಹಲಿ: ಕೋವಿಡ್ 19 ಮಾರಣಾಂತಿಕ ವೈರಸ್ ಹರಡದಿರುವಂತೆ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿರುವ ನಡುವೆಯೇ ಒಂದೊಂದು ಪ್ರದೇಶ, ಒಂದೊಂದು ದೇಶದ ವಿಭಿನ್ನ ಕಥೆಗಳು ಹೊರಬೀಳತೊಡಗಿದ್ದು, 80 ವರ್ಷದ ವಯೋವೃದ್ಧರೊಬ್ಬರು ಬರಿಗಾಲಿನಲ್ಲಿ ಬರೋಬ್ಬರಿ ನೂರು ಕಿಲೋ ಮೀಟರ್ ದೂರದವರೆಗೆ ನಡೆದುಕೊಂಡು ಹೋಗಿ ಮನೆ ತಲುಪುವ ಯತ್ನ ನಡೆಸಿರುವ ಘಟನೆ ಅಸ್ಸಾಂನ ಲಾಖಿಂಪುರ್ ಜಿಲ್ಲೆಯಲ್ಲಿ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಯನ್ನು ಉದ್ದೇಶಿಸಿ ದೇಶಾದ್ಯಂತ ಲಾಕ್ ಡೌನ್ ಘೋಷಿಸುವ ದಿನ ಲಾಖಿಂಪುರದ ಖಾಗೇನ್ ಬರುವಾ (80ವರ್ಷ) ಅವರು ಗುವಾಹಟಿಯಲ್ಲಿದ್ದರು.
ನಂತರ ಈ ಅಜ್ಜ ಗುವಾಹಟಿಯಿಂದ ರೈಲಿನಲ್ಲಿ ನಾಗಾಂವ್ ಜಿಲ್ಲೆಯ ಕಾಲಿಯಾ ಬೋರ್ ಪ್ರದೇಶಕ್ಕೆ ಬಂದು ತಲುಪಿದ್ದರು. ಆದರೆ ಅಲ್ಲಿಂದ ಯಾವುದೇ ಸಾರ್ವಜನಿಕ ಸಾರಿಗೆ ಸಂಸ್ಥೆ ಇಲ್ಲವಾಗಿತ್ತು. ಕೊನೆಗೆ ಅಲ್ಲಿಂದಲೇ ಕಾಲ್ನಡಿಗೆ ಆರಂಭಿಸಿದ್ದರು. ಕಾಲಿಯಾಬೋರ್ ನಿಂದ ಮನೆ ತಲುಪಲು 215 ಕಿಲೋ ಮೀಟರ್ ನಡೆಯಬೇಕಾಗಿತ್ತು!
ಗುರುವಾರ ನೂರು ಕಿಲೋ ಮೀಟರ್ ವರೆಗೆ ನಡೆದು ಬಿಸ್ವನಾಥ್ ಚಾರಿಯಾಲಿ ತಲುಪಿದ್ದರು. ಈ ಸಂದರ್ಭದಲ್ಲಿ ಕೆಲವು ಸ್ಥಳೀಯರು ನೋಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ವರದಿ ತಿಳಿಸಿದೆ. ಮಗನನ್ನು ಭೇಟಿಯಾಗಲು ತಾನು ಗುವಾಹಟಿಗೆ ತೆರಳಿದ್ದು, ಲಾಕ್ ಡೌನ್ ನಿಂದಾಗಿ ಅದೂ ಕೂಡಾ ಸಾಧ್ಯವಾಗಿಲ್ಲ ಎಂದು ಖಾಗೇನ್ ಬರುವಾ ತಿಳಿಸಿದ್ದಾರೆ.
ರೈಲಿನಲ್ಲಿ ಗುವಾಹಟಿಯಿಂದ ಕಾಲಿಯಾಬೋರ್ ಗೆ ವಾಪಸ್ ಬಂದಿದ್ದೆ. ಆದರೆ ಲಾಕ್ ಡೌನ್ ನಿಂದಾಗಿ ಯಾವ ವಾಹನವೂ ಸಿಕ್ಕಿಲ್ಲವಾಗಿತ್ತು. ನಂತರ ಮನೆ ತಲುಪಲು ನಡೆದುಕೊಂಡು ಹೋಗಲು ನಿರ್ಧರಿಸಿದ್ದೆ. ನಂತರ ಅಜ್ಜನನ್ನು ಬಿಸ್ವನಾಥ್ ಜಿಲ್ಲೆಯ ಪೊಲೀಸರು ನಗದು ಹಣ ಕೊಟ್ಟು ಪೊಲೀಸರು ವಾಹನದಲ್ಲಿ ಮನೆಗೆ ತಲುಪಿಸಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪ್ರಧಾನಿಯನ್ನು ಒತ್ತಾಯಿಸಿದ ರಾಜ್ ಠಾಕ್ರೆ
ಲೂಧಿಯಾನ ಬಾಂಬ್ ಸ್ಫೋಟ ಪ್ರಕರಣ ಭೇದಿಸಿದ ಎನ್ಐಎ; ಪ್ರಮುಖ ಆರೋಪಿಯ ಬಂಧನ
ಮರಕ್ಕೆ ಢಿಕ್ಕಿ ಹೊಡೆದ ಕಾರು: ಗೋವಾದಲ್ಲಿ ಬೆಳಗಾವಿ ಮೂಲದ ಮೂವರು ಸಾವು
ನಿಂತಿದ್ದ ಟ್ರಕ್ ಗೆ ಢಿಕ್ಕಿ ಹೊಡೆದ ಎಸ್ ಯುವಿ: ಮದುವೆ ಮನೆಯಿಂದ ಬರುತ್ತಿದ್ದ 8 ಮಂದಿ ಸಾವು!
ಒಂದೇ ಕುಟುಂಬದ ಮೂವರ ಆತ್ಮಹತ್ಯೆ; ಶವವಾಗಿ ಪತ್ತೆಯಾದ ತಾಯಿ ಮಕ್ಕಳು