Udayavni Special

ಅಯೋಧ್ಯೆ ಸಹಸ್ರ ಪುಣ್ಯಗಳ ಧಾಮ


Team Udayavani, Nov 10, 2019, 4:08 AM IST

ayodhya

ಅಯೋಧ್ಯೆ! ಭಾರತದ ಪ್ರಾಚೀನ ನಗರ; ಹಿಂದೂಗಳ ಶ್ರದ್ಧಾಕೇಂದ್ರ. ಈ ಶ್ರದ್ಧೆಗೆ ಕಾರಣ ಅಯೋಧ್ಯೆ ಎಂಬ ನಗರವಲ್ಲ. ಅಲ್ಲಿ ಜನಿಸಿದ ಶ್ರೀರಾಮ. ಏಕೆಂದರೆ, ಈ ರಾಮ ಕೇವಲ ಎರಡಕ್ಷರವಲ್ಲ; ಮಹಿಮೆ. ರಾಮನೆಂದರೆ, ಆದರ್ಶ. ರಾಮನೆಂದರೆ, ಶೌರ್ಯದ ಪ್ರತೀಕ. ರಾವಣನಂಥ ರಾವಣನೇ ಎತ್ತಲಾಗದ ಶಿವಧನುಸ್ಸನ್ನು ಮುರಿದು ಬಿಸುಟ ಮಹಾಶೂರ. ಶಿಷ್ಟಸಮಾಜದ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ಮಹಾರಾಜ. ದುಷ್ಟರ ಪಾಲಿಗೆ ಯಮ. ಬೆಳಕು (ಸಜ್ಜನಿಕೆ) ಮತ್ತು ಕತ್ತಲೆ (ದುಷ್ಟಶಕ್ತಿ) ಒಂದೇ ಕಡೆ ಒಂದೇ ಕಾಲಕ್ಕೆ ಇರಲು ಸಾಧ್ಯವಿಲ್ಲ ಎಂದು ತೋರಿಸಿಕೊಟ್ಟ ಮಹಾನುಭಾವ.

ಕರೆದರೆ ಸಾವಿರ ರಾಜಕುಮಾರಿಯರು ಬರುವಂಥ ಚಕ್ರವರ್ತಿ ಪೀಠದಲ್ಲಿದ್ದರೂ ಏಕಪತ್ನಿವ್ರತಸ್ಥ. ವಿಷ್ಣುವಿನ ಏಳನೆಯ ಅವತಾರ. ರಾಮನ ಆಡಳಿತದಲ್ಲಿ ಅಯೋಧ್ಯೆಯ ಮನೆಗಳಿಗೆ ಬಾಗಿಲುಗಳೇ ಇರಲಿಲ್ಲವಂತೆ. ಇದ್ದರೂ ತೆರೆದೇ ಇರುತ್ತಿದ್ದವಂತೆ. ಏಕೆಂದರೆ, ಅವನ ರಾಜ್ಯದಲ್ಲಿ ಕಳ್ಳರಿರಲಿಲ್ಲ. ವಂಚನೆಯ ಚಿಂತೆ ಇರಲಿಲ್ಲ. ಅದು ರಾಮ ಇಟ್ಟುಹೋದ ಸುಖೀರಾಜ್ಯದ ಮಾದರಿ. ಸಜ್ಜನ ದುರ್ಜನ ಸಂಗ್ರಾಮ ರಾಮನಿಗೆ ಯಾವುದೇ ವ್ಯಕ್ತಿಯೊಡನೆ ವೈರತ್ವವಿರಲಿಲ್ಲ. ಅಧರ್ಮ, ಅತ್ಯಾಚಾರ, ಪಾಪ ಇವುಗಳ ವಿರುದ್ಧ ಅವನು ಶಸ್ತ್ರ ಎತ್ತುತ್ತಿದ್ದ. ರಾಕ್ಷಸರ ಮೇಲೆ ದಾಳಿ ಮಾಡುವಾಗಲೂ ಅವನಿಗೆ ಬೇರೆ ಉದ್ದೇಶವಿರ ಲಿಲ್ಲ.

ಗೆದ್ದ ರಾಜ್ಯಗಳನ್ನು ಅವನು ಸ್ವಾ ಧೀನಪಡಿ ಸಿಕೊಂಡವನಲ್ಲ. ತಾನು ವಾಲಿಯಿಂದ ಗೆದ್ದ ಕಿಷ್ಕಿಂಧೆಯನ್ನು ಸುಗ್ರೀವನಿಗೆ ಕೊಟ್ಟ. ಹಾಗಿದ್ದೂ ಅಂಗದನಿಗೆ ಯುವರಾಜಪಟ್ಟ ಕಟ್ಟಿ ವಾಲಿಯ ವಂಶಕ್ಕೇ ರಾಜ್ಯವನ್ನು ಉಳಿಸಿದ. ಲಂಕೆಯನ್ನು ವಿಭೀಷಣನಿಗೆ ಬಿಟ್ಟುಕೊಟ್ಟ. ಹಾಗೆ ನೋಡಿದರೆ, ರಾಮಾಯಣದಲ್ಲಿ ನಡೆದಿದ್ದೆಲ್ಲ ಸಜ್ಜನ ದುರ್ಜನ ಸಂಗ್ರಾಮಗಳೇ. ರಾಮ ಮರ್ಯಾದಾ ಪುರುಷೋತ್ತಮ. ಸಜ್ಜನ ನಾಯಕತ್ವ ಹೇಗಿರಬೇಕೆಂಬುದಕ್ಕೆ ಉದಾಹರಣೆ. ಅವನಲ್ಲಿ ಶ್ರೀಕೃಷ್ಣನ ರಾಜಕಾರಣವಿರಲಿಲ್ಲ. ಶ್ರೀಕೃಷ್ಣ ಮಹಾಭಾರತದ ಪ್ರಮುಖ ಶಕ್ತಿ ಅಷ್ಟೇ. ಯಾರೂ ಕೃಷ್ಣ ರಾಜ್ಯದ ಮಾತನಾಡುವುದಿಲ್ಲ. ಆದರೆ, ರಾಮನೊಬ್ಬನೇ ರಾಮಾಯಣ. ಅಲ್ಲಿ ರಾಮನೇ ಎಲ್ಲ. ಸೀತಾ ಪರಿತ್ಯಾಗದಂಥ ಒಂದೆರಡು ಸಂದರ್ಭ ಬಿಟ್ಟರೆ ರಾಮನ ನಿರ್ಣಯಗಳು ಎಲ್ಲೂ ಪ್ರಶ್ನಾರ್ಥಕವೆನಿಸುವುದೇ ಇಲ್ಲ. ಹೀಗಾಗಿ, ಇಡೀ ರಾಮನ ಬದುಕನ್ನು ಅವಲೋಕಿಸಿದರೆ ಅವನೇ ಒಂದು ರಾಷ್ಟ್ರವಾಗಿ ನಿಲ್ಲುತ್ತಾನೆ.

ಅವನು ಆದರ್ಶ ಪುತ್ರ, ಆದರ್ಶ ಬಂಧು, ಆದರ್ಶ ಮಿತ್ರ, ಆದರ್ಶ ಪತಿ, ಆದರ್ಶ ರಾಜ. ಇಷ್ಟೇ ಅಲ್ಲ ಆದರ್ಶ ಶತ್ರು ಕೂಡ. ಅವನ ಬದುಕೆಂದರೆ ಭಾವನೆ ಹಾಗೂ ಕರ್ತವ್ಯಗಳ ಅಪೂರ್ವ ಸಂಘರ್ಷ. ಭಾವನೆಯ ಮೇಲೆ ಕರ್ತವ್ಯದ ವಿಜಯ. ರಾಮ ರಾಜ್ಯ ಜನರ ಅಂತಃಕರಣದಿಂದ ಸ್ವಾರ್ಥ ಮತ್ತು ವ್ಯಕ್ತಿವಾದವನ್ನು ನಿರ್ಮೂಲ ಮಾಡಿತು. ಅದೇ ಕಾರಣಕ್ಕೆ ಆ ರಾಜ್ಯಸಂಸ್ಥೆ ಇಂದಿಗೂ ಆದರ್ಶವಾಗಿದೆ. ಆ ಜೀವನ ದೃಷ್ಟಿ ಉದಯಿಸಲು “ಕೃಣ್ವಂತೋ ವಿಶ್ವಮಾರ್ಯಂ’ ಎನ್ನುವ ಮನಸ್ಸುಗಳು ಬೇಕು. ಕೋದಂಡದ ಸುಧಾರಣೆ ಮತ್ತು ವಿಶ್ವ ಬಂಧುತ್ವದ ಸುಸಂಸ್ಕೃತಿ- ಇವೆರಡರ ಸಮನ್ವಯ ರಾಮ. ಇಂಥ ಮಹಾಮಹಿಮ ಹುಟ್ಟಿದ ಸ್ಥಳ ಅಯೋಧ್ಯೆ. ಸೂರ್ಯವಂಶದ ಮಹಾಪುರುಷರು ಆಳಿದ ಸಾಮ್ರಾಜ್ಯದ ರಾಜಧಾನಿ
ಅಯೋಧ್ಯೆ.

ಅಯೋಧ್ಯೆ ರಾಮಾಯಣ: ರಾಜಧಾನಿ ದಿಲ್ಲಿಯಿಂದ 555 ಕಿಲೋಮೀಟರ್‌, ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 133 ಕಿ.ಮೀ. ದೂರದಲ್ಲಿರುವ ಅಯೋಧ್ಯೆ ಹಿಂದೂಗಳ ಪವಿತ್ರ ಸ್ಥಳ. ಇದು ಕಾಶಿಯಿಂದ 200 ಕಿ.ಮೀ. ದೂರದಲ್ಲಿದೆ. ಒಂದೊಂದು ಪುರಾಣಗಳಲ್ಲಿ ಅಯೋಧ್ಯೆಯ ಕುರಿತು ವಿಭಿನ್ನ ರೀತಿಯ ವರ್ಣನೆ ಕಾಣಬಹುದಾಗಿದೆ.

ಎಲ್ಲಿದೆ? ಅಲ್ಲೇನಿದೆ?: ಅಯೋಧ್ಯೆಯು ಜಗತ್ತಿನ ಆದಿ ಕಾವ್ಯವಾದ ರಾಮಾಯಣದಲ್ಲಿ ವಾಲ್ಮೀಕಿ ಋಷಿಗಳು ವರ್ಣಿಸಿದ ಪವಿತ್ರ ನಗರ. ಈಗ ಅದು ಉತ್ತರ ಪ್ರದೇಶದ ಫೈಜಾಬಾದ್‌ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ರಾಮಾಯಣದಲ್ಲಿ ಅದು ರಾಮನ ಜನ್ಮಸ್ಥಳ ಎಂದು ಹೇಳಿರುವುದರಿಂದ ಬಹಳ ಕಾಲದಿಂದಲೂ ಅದು ಪವಿತ್ರ ಯಾತ್ರಾ ಸ್ಥಳವಾಗಿದೆ. ಕಾಲನೇ ಸ್ವತಃ ಬಂದು ಸೂಚನೆ ನೀಡಿದ ನಂತರ ರಾಮ ಈ ಭೂಮಿಯಿಂದ ನಿರ್ಗಮಿಸಿದ್ದು ಸರಯೂ ನದಿಯ ಮೂಲಕ. ನೀರಿನಲ್ಲಿ ಇಳಿಯುತ್ತ ಸರಯೂ ನದಿಯೊಂದಿಗೆ ಲೀನವಾಗಿ ರಾಮ ನಿರ್ಯಾಣ ಹೊಂದುತ್ತಾನೆ ಎಂಬ ಕಥೆಯಿದೆ. ಅದೇ ಸರಯೂ ನದಿಯ ತೀರದಲ್ಲಿದೆ ಈ ಅಯೋಧ್ಯೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಫೇಸ್‌ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನೆಲೆ : ಶಾಸಕರ ಮನೆಗೆ ಬೆಂಕಿ

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನೆಲೆ : ಶಾಸಕರ ಮನೆಗೆ ಬೆಂಕಿ

udupi

ಉಡುಪಿ: 219 ಜನರಿಗೆ ಕೋವಿಡ್ ಪಾಸಿಟಿವ್, 1,203 ಮಂದಿಯ ವರದಿ ನೆಗೆಟಿವ್

AKRAMA

ಅಂತರ್ ರಾಜ್ಯ ಗಾಂಜಾ ಸಾಗಾಟಗಾರರ ಬೃಹತ್ ಜಾಲ ಪತ್ತೆಹಚ್ಚಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್

ಕೋವಿಡ್ ಕಳವಳ-ಆಗಸ್ಟ್ 11:  6257 ಹೊಸ ಪ್ರಕರಣಗಳು ; 6473 ಡಿಸ್ಚಾರ್ಜ್ ; 86 ಸಾವು

ಕೋವಿಡ್ ಕಳವಳ-ಆಗಸ್ಟ್ 11: 6257 ಹೊಸ ಪ್ರಕರಣಗಳು ; 6473 ಡಿಸ್ಚಾರ್ಜ್ ; 86 ಸಾವು

ಚಾಮರಾಜನಗರ: 99 ಪ್ರಕರಣಗಳು ಪತ್ತೆ: ಇಬ್ಬರು ಸಾವು

ಚಾಮರಾಜನಗರ: 99 ಕೋವಿಡ್ ಪ್ರಕರಣಗಳು ಪತ್ತೆ: ಇಬ್ಬರು ಸಾವು

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆ

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆ

ಅಂಗವೈಕಲ್ಯ ಮೆಟ್ಟಿ UPSCಯಲ್ಲಿ 465ನೇ ರ‍್ಯಾಂಕ್‍ ಪಡೆದ ಮೇಘನಾಳನ್ನು ಅಭಿನಂದಿಸಿದ ಡಿಸಿಎಂ

ಅಂಗವೈಕಲ್ಯ ಮೆಟ್ಟಿ UPSCಯಲ್ಲಿ 465ನೇ ರ‍್ಯಾಂಕ್‍ ಪಡೆದ ಮೇಘನಾಳನ್ನು ಅಭಿನಂದಿಸಿದ ಡಿಸಿಎಂ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೆಂಟಿಲೇಟರ್ ನಲ್ಲಿ ಪ್ರಣಬ್ ಮುಖರ್ಜಿ; ಮಾಜಿ ರಾಷ್ಟ್ರಪತಿ ಆರೋಗ್ಯ ಸ್ಥಿತಿ ಗಂಭೀರ

ವೆಂಟಿಲೇಟರ್ ನಲ್ಲಿ ಪ್ರಣಬ್ ಮುಖರ್ಜಿ; ಮಾಜಿ ರಾಷ್ಟ್ರಪತಿ ಆರೋಗ್ಯ ಸ್ಥಿತಿ ಗಂಭೀರ

ಕಾಶ್ಮೀರ; ಕೈದಿಗಳಿಂದ ತುಂಬಿರುವ ಜೈಲುಗಳು ಈಗ ಕೋವಿಡ್ 19ರ ಕೇಂದ್ರ ಸ್ಥಾನ!

ಕಾಶ್ಮೀರ; ಕೈದಿಗಳಿಂದ ತುಂಬಿರುವ ಜೈಲುಗಳು ಈಗ ಕೋವಿಡ್ 19ರ ಕೇಂದ್ರ ಸ್ಥಾನ!

ಜಮ್ಮು-ಕಾಶ್ಮೀರದ 2 ಜಿಲ್ಲೆಗಳಲ್ಲಿ 4ಜಿ ನಿಷೇಧ ತೆರವುಗೊಳಿಸುತ್ತೇವೆ: ಸುಪ್ರೀಂಗೆ ಕೇಂದ್ರ

ಜಮ್ಮು-ಕಾಶ್ಮೀರದ 2 ಜಿಲ್ಲೆಗಳಲ್ಲಿ 4ಜಿ ನಿಷೇಧ ತೆರವುಗೊಳಿಸುತ್ತೇವೆ: ಸುಪ್ರೀಂಗೆ ಕೇಂದ್ರ

ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗೆ ಪಾಕಿಸ್ತಾನದ ನಂಬರ್ ನಿಂದ ಕೊಲೆ ಬೆದರಿಕೆ ಕರೆ

ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗೆ ಪಾಕಿಸ್ತಾನದ ನಂಬರ್ ನಿಂದ ಕೊಲೆ ಬೆದರಿಕೆ ಕರೆ

24 ಗಂಟೆಯಲ್ಲಿ 53,601 ಹೊಸ ಕೋವಿಡ್ ಪ್ರಕರಣಗಳು: 871 ಮಂದಿ ಸೋಂಕಿತರು ಸಾವು

24 ಗಂಟೆಯಲ್ಲಿ 53,601 ಹೊಸ ಕೋವಿಡ್ ಪ್ರಕರಣಗಳು: 871 ಮಂದಿ ಸೋಂಕಿತರು ಸಾವು

MUST WATCH

udayavani youtube

ಕೋವಿಡ್ ತಡೆಗೆ ಸಿದ್ಧವಾಯ್ತ ವಿಶ್ವದ‌ ಮೊದಲ ಲಸಿಕೆ? ಪುಟಿನ್ ಪುತ್ರಿಗೂ ವ್ಯಾಕ್ಸಿನ್?

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’ಹೊಸ ಸೇರ್ಪಡೆ

ಫೇಸ್‌ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನೆಲೆ : ಶಾಸಕರ ಮನೆಗೆ ಬೆಂಕಿ

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನೆಲೆ : ಶಾಸಕರ ಮನೆಗೆ ಬೆಂಕಿ

ದ.ಕ. ಜಿಲ್ಲೆ: 9 ಮಂದಿ ಸಾವು, 243 ಪಾಸಿಟಿವ್‌

ದ.ಕ. ಜಿಲ್ಲೆ: 9 ಮಂದಿ ಸಾವು, 243 ಪಾಸಿಟಿವ್‌

“ಪೊಲೀಸರೇ ನಿಜವಾದ ಕೊರೊನಾ ವಾರಿಯರ್ಸ್‌’

“ಪೊಲೀಸರೇ ನಿಜವಾದ ಕೋವಿಡ್ ವಾರಿಯರ್ಸ್‌’

ಸ್ವಂತ ಸೂರಿಲ್ಲದ ವೃದ್ಧೆಗೆ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳು

ಸ್ವಂತ ಸೂರಿಲ್ಲದ ವೃದ್ಧೆಗೆ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳು

udupi

ಉಡುಪಿ: 219 ಜನರಿಗೆ ಕೋವಿಡ್ ಪಾಸಿಟಿವ್, 1,203 ಮಂದಿಯ ವರದಿ ನೆಗೆಟಿವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.