ಅಯೋಧ್ಯೆ ತೀರ್ಪಿಗೆ ಆಧಾರವಾಗಿದ್ದೇ ಭಾರತೀಯ ಪುರಾತತ್ವ ಇಲಾಖೆಯ ಈ ವರದಿ

ನಾಗೇಂದ್ರ ತ್ರಾಸಿ, Nov 9, 2019, 6:31 PM IST

ನವದೆಹಲಿ: ಬಹುನಿರೀಕ್ಷಿತ ರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿಯ 2.77 ಎಕರೆ ಭೂ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಲು ಸಹಕಾರಿಯಾಗಿದ್ದು ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ವರದಿ ಎಂಬುದು ಬಹುಮುಖ್ಯವಾದ ಅಂಶವಾಗಿದೆ.

ಅಯೋಧ್ಯೆ ತೀರ್ಪು ಮತ್ತು ಭಾರತೀಯ ಪುರಾತತ್ವ ಇಲಾಖೆ ನೀಡಿದ ವರದಿಯಲ್ಲೇನಿದೆ?

ಇಂದು ಸುಪ್ರೀಂಕೋರ್ಟ್ ಅಯೋಧ್ಯೆ ಭೂ ವಿವಾದದ ಕುರಿತು ನೀಡಿದ ತೀರ್ಪಿನಲ್ಲಿ, ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ನೀಡಿದ ವರದಿಯಲ್ಲಿ ವಿವಾದಿತ ಖಾಲಿ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಿಲ್ಲ ಎಂದು ತಿಳಿಸಿದೆ. ಅಲ್ಲದೇ ಅದೇ ಸ್ಥಳದಲ್ಲಿ ದೇವಾಲಯವನ್ನು ಒಡೆದು ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಬಲವಾದ ಪುರಾವೆ ಇಲ್ಲ ಎಂದು ವರದಿ ಉಲ್ಲೇಖಿಸಿದೆ.

ವಿವಾದಿತ ಅಯೋಧ್ಯೆಯ ಜಾಗ ಹಿಂದೂಗಳಿಗೆ ಸೇರಿದ್ದಾಗಿದೆ. ಅಲ್ಲದೇ ಮಸೀದಿಯನ್ನು ಧ್ವಂಸಗೊಳಿಸಿರುವುದು ಕಾನೂನು ಉಲ್ಲಂಘನೆಯಾಗಿದೆ. ಜಾಗದ ಹಕ್ಕನ್ನು ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆ ಕೊಡಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿದೆ.

ಭಾರತೀಯ ಪುರಾತತ್ವ ಇಲಾಖೆಯ ಉತ್ಖನನದಲ್ಲಿ ಜಾಗದಲ್ಲಿ ಹಿಂದೂ ವಿನ್ಯಾಸದ ದಾಖಲೆಯನ್ನು ಪತ್ತೆಹಚ್ಚಿದೆ. 1856ರಲ್ಲಿ ಈ ಆವರಣದಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸಲು ಜಾಗವನ್ನು ಉಪಯೋಗಿಸುತ್ತಿದ್ದರು. ಆದರೆ ಒಳಭಾಗದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡದಿದ್ದ ನಂತರ ಮುಖ್ಯ ವಿನ್ಯಾಸದ ಹೊರಭಾಗದಲ್ಲಿ ಪ್ರಾರ್ಥನೆ ಸಲ್ಲಿಸಲು ಆರಂಭಿಸಿದ್ದರು.

ಅಯೋಧ್ಯೆಯಲ್ಲಿ ಎಎಸ್ ಐ ಉತ್ಖನನ:

ಅಲಹಾಬಾದ್ ಹೈಕೋರ್ಟ್ ನಿರ್ದೇಶನದ ಮೇರೆಗೆ ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ವಿವಾದಿತ ಜಾಗದಲ್ಲಿ ಉತ್ಖನನ ಮತ್ತು ತನಿಖೆಯನ್ನು ಆರಂಭಿಸಿತ್ತು. ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಎರಡು ಬಾರಿ ಉತ್ಖನನ ನಡೆಸಲಾಗಿತ್ತು. 1976-77ರಲ್ಲಿ ಮತ್ತು 2003ರಲ್ಲಿ. 2003ರಲ್ಲಿ ಉತ್ಖನನ ನಡೆಸಿದಾಗ ದೊರೆತ ಸಾಕ್ಷ್ಯವನ್ನು ಎಎಸ್ ಐ ಕೋರ್ಟ್ ಗೆ ಸಲ್ಲಿಸಿತ್ತು. ಭಾರತೀಯ ಪುರಾತತ್ವ ಇಲಾಖೆ ಭೂಛೇದನ ರಾಡಾರ್(ಗ್ರೌಂಡ್ ಪೆನೆಟ್ರೆಟಿಂಗ್ ರಾಡಾರ್) ಬಳಸಿ ಸರ್ವೆ ನಡೆಸಿತ್ತು. 2003 ಮಾರ್ಚ್ 12ರಿಂದ ಆಗಸ್ಟ್ 7ರವರೆಗೆ ಉತ್ಖನನ ಕಾರ್ಯ ನಡೆದಿತ್ತು. ಟುಜೋ ಡೆವಲಪ್ ಮೆಂಟ್ ಇಂಟರ್ ನ್ಯಾಶನಲ್ ಕಂಪನಿ ನೆರವಿನೊಂದಿಗೆ ಈ ಉತ್ಖನನ ಪೂರ್ಣಗೊಳಿಸಲಾಗಿತ್ತು.

ಈ ಉತ್ಖನನದಲ್ಲಿ 13 ಶತಮಾನಕ್ಕೂ ಮೊದಲ ಕುರುಹುಗಳನ್ನು ಪತ್ತೆ ಹಚ್ಚಲಾಗಿತ್ತು. ಇದು ಕುಶಾನ್ ಮತ್ತು ಶುಂಗರ ಸಾಮ್ರಾಜ್ಯದ ಕಾಲದವರೆಗೆ ಹಾಗೂ ಗುಪ್ತರು ಮತ್ತು ಮಧ್ಯ ಯುಗದ ಕಾಲದವರೆಗಿನ ಪುರಾವೆ ಸಿಕ್ಕಿತ್ತು.

ಉತ್ಖನನದಲ್ಲಿ ಸಿಕ್ಕ ತಳಪಾಯದ ಮಧ್ಯಭಾಗದಲ್ಲಿ ಕೆಲವೊಂದು ಮುಖ್ಯವಾದ ವಸ್ತುವೊಂದನ್ನು ಒಟ್ಟುಗೂಡಿಸಿ ಇಟ್ಟಿರುವುದು ಪತ್ತೆಯಾಗಿತ್ತು. ದೇವಾಲಯದ ವೃತ್ತ ಸುಮಾರು 7ರಿಂದ 10ನೇ ಶತಮಾನಗಳಷ್ಟು ಹಿಂದಿನದ್ದು ಎಂದು ನಂಬಲಾಗಿದೆ. ಕಟ್ಟಡದ ವಿನ್ಯಾಸದ ಉತ್ತರ ಮತ್ತು ದಕ್ಷಿಣ 50 ಮೀಟರ್ ಗಳಷ್ಟು ರಚನೆ 11-12ನೇ ಶತಮಾನದ ಪೂರ್ವದಲ್ಲಿ ಕಟ್ಟಿರುವುದು ಪತ್ತೆಯಾಗಿತ್ತು. ಇದರಲ್ಲಿ ಇನ್ನೊಂದು ವಿನ್ಯಾಸ ಪತ್ತೆಯಾಗಿದ್ದು ಇದು ದೊಡ್ಡ ಕಟ್ಟಡದ ಆಯ ಹೊಂದಿದ್ದು ನೆಲದ ಹಾಸು ಪತ್ತೆಯಾಗಿತ್ತು ಎಂದು ಎಎಸ್ ಐ ವರದಿ ತಿಳಿಸಿತ್ತು.

ಎಎಸ್ ಐ ವರದಿ ಪ್ರಕಾರ, ವಿವಾದಿತ ಜಾಗದಲ್ಲಿನ ಮಸೀದಿ ನಿರ್ಮಾಣವಾಗಿದ್ದು 16ನೇ ಶತಮಾನದಲ್ಲಿ. ವಿವಾದಿತ ಮಸೀದಿಯ ಗುಂಬಜ್ ಜಾಗದಲ್ಲಿ ಬಲಭಾಗದಲ್ಲಿ ಉತ್ಖನನ ನಡೆಸಿದಾಗ ದೇಗುಲಗಳ 50 ಕಂಬಗಳು ಪತ್ತೆಯಾಗಿರುವುದಾಗಿ ವರದಿಯಲ್ಲಿ ತಿಳಿಸಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ