
ತಾಯಂದಿರಿಗೆ ಭಾರತೀಯ ರೈಲ್ವೆಯಿಂದ ಹೊಸ ಸೌಲಭ್ಯ: ಕಂದಮ್ಮಗಳಿಗೆ ವಿಶೇಷ ಹಾಸಿಗೆ
Team Udayavani, May 11, 2022, 12:16 AM IST

ಹೊಸದಿಲ್ಲಿ: ಪುಟ್ಟ ಮಕ್ಕಳನ್ನು ತಾಯಂದಿರು ಅರಾಮವಾಗಿ ತಮ್ಮೊಟ್ಟಿಗೇ ಮಲಗಿಸಿಕೊಂಡು ಕರೆದೊಯ್ಯಲು ಅನುಕೂಲವಾಗುವಂತೆ ಉತ್ತರ ರೈಲ್ವೆಯು ಹೊಸ ಸೀಟುಗಳನ್ನು ಪರಿಚಯಿಸಿದೆ.
ಉತ್ತರ ರೈಲ್ವೆಯ ದಿಲ್ಲಿ ಮತ್ತು ಲಕ್ನೋ ವಿಭಾಗಗಳು ಜಂಟಿಯಾಗಿ “ಬೇಬಿ ಬರ್ತ್’ನ್ನು ತಾಯಂದಿರ ದಿನವಾದ ಮೇ 8ರಂದು ಪ್ರಾಯೋಗಿಕವಾಗಿ ಆರಂಭಿಸಿದೆ.
ಲಕ್ನೋ ಮೇಲ್ (12230) ಗಾಡಿಯ ಎಸಿ ಕೋಚ್‌ನ ಸೀಟಿನ ನಂಬರ್ 12 ಮತ್ತು 16ರಲ್ಲಿ ಈ ಹೊಸ ಸೀಟುಗಳನ್ನು ಅಳವಡಿಸಲಾಗಿದೆ.
ಇದರಲ್ಲಿ ಮಾಮೂಲಿ ಸೀಟಿನ ಜತೆ ಮತ್ತೊಂದು ಪುಟಾಣಿ ಸೀಟನ್ನು ಅಳವಡಿಸಲಾಗಿದ್ದು, ತಾಯಂದಿರು ಆ ಸೀಟನ್ನು ಅಗಲಿಸಿ, ಅಲ್ಲಿ ತಮ್ಮ ಮಕ್ಕಳನ್ನು ಮಲಗಿಸಿಕೊಳ್ಳಬಹುದು. ಮಗು ಕೆಳಗೆ ಬೀಳಬಾರದು ಎಂದು ಅಡ್ಡವಾಗಿ ಸರಳನ್ನೂ ಹಾಕಲಾಗಿದೆ.
ಆ ಸೀಟು ಬೇಡವೆನಿಸಿದಾಗ ಅದನ್ನು ಮಡಚಲೂಬಹುದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TMC ಮಹುವಾ ಮೊಯಿತ್ರಾಗೆ ಬೆಂಬಲ: ಬಿಎಸ್ ಪಿಯಿಂದ ಡ್ಯಾನಿಷ್ ಅಲಿ ಅಮಾನತು

2025ರ ಅಂತ್ಯದ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್: ಅಮಿತ್ ಶಾ

Elections ಗೆಲ್ಲುವುದಕ್ಕಿಂತ ಮೊದಲು ಜನರ ಹೃದಯ ಗೆಲ್ಲುವುದು ಅಗತ್ಯ: ಪ್ರಧಾನಿ ಮೋದಿ

Fake visa; ಭಾರತಕ್ಕೆ ಪ್ರವೇಶಿಸಲು ಯತ್ನಿಸಿದ ಅಮೆರಿಕ ಪ್ರಜೆಗೆ 2 ವರ್ಷ ಜೈಲು ಶಿಕ್ಷೆ

Madhya Pradesh: ಬಿಜೆಪಿಗೆ ಮತ ಹಾಕಿದ್ದಕ್ಕೆ ಮುಸ್ಲಿಂ ಮಹಿಳೆಯನ್ನು ಥಳಿಸಿದ ಸೋದರ ಮಾವ