ಎರಡು ಬಾರಿ ಕ್ಯಾನ್ಸರ್‌.., ಬ್ರೈನ್ ಸ್ಟ್ರೋಕ್ 24 ರ ಹರೆಯದಲ್ಲೇ ಉಸಿರು ಚೆಲ್ಲಿದ ಖ್ಯಾತ ನಟಿ


Team Udayavani, Nov 20, 2022, 2:44 PM IST

ಎರಡು ಬಾರಿ ಕ್ಯಾನ್ಸರ್‌.., ಬ್ರೈನ್ ಸ್ಟ್ರೋಕ್ 24 ರ ಹರೆಯದಲ್ಲೇ ಉಸಿರು ಚೆಲ್ಲಿದ ಖ್ಯಾತ ನಟಿ

ಕೋಲ್ಕತ್ತಾ: ಎರಡು ಬಾರಿ ಕ್ಯಾನ್ಸರ್‌ ಗೆದ್ದು ಚೇತರಿಕೆಯಾಗಿದ್ದ ಬೆಂಗಾಲಿ ಸಿನಿಮಾರಂಗದ ಖ್ಯಾತ ನಟಿ ಆ್ಯಂಡ್ರಿಲಾ ಶರ್ಮಾ (24) ಇತ್ತೀಚೆಗೆ ಪಾರ್ಶ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ನಟಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ನ. 1 ರಂದು ಬ್ರೈನ್ ಸ್ಟ್ರೋಕ್‌ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಆ್ಯಂಡ್ರಿಲಾ ಶರ್ಮಾ  ಅವರ ಪರಿಸ್ಥಿತಿ ದಿನ ಕಳೆದಂತೆ ಹದಗೆಟ್ಟಿತ್ತು. ಅವರನ್ನು ವೆಂಟಿಲೇಟರ್‌ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನ.14 ರಂದು ಆ್ಯಂಡ್ರಿಲಾ ಶರ್ಮಾರಿಗೆ ಅನೇಕಾ ಬಾರಿ ಹೃದಯ ಸ್ತಂಭನ‌ (ಕಾರ್ಡಿಯಾಕ್ ಅರೆಸ್ಟ್) ಉಂಟಾಗಿತ್ತು. ನ.20 ( ಭಾನುವಾರ) ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.

ಆ್ಯಂಡ್ರಿಲಾ ಶರ್ಮಾ ಬೆಂಗಾಲಿ ಸಿನಿಮಾರಂಗದಲ್ಲಿ ಜನಪ್ರಿಯ ಹೆಸರು. ʼ ಜುಮೂರ್ʼ , ʼ ಭೋಲೋ ಬಾಬಾ ಪರ್ ಕರೇಗಾʼ ಸಿನಿಮಾಗಳು ಬೆಂಗಾಲಿ ಬಣ್ಣದ ಲೋಕದಲ್ಲಿ ಆ್ಯಂಡ್ರಿಲಾ ಅವರಿಗೆ ಹೆಸರು ತಂದು ಕೊಟ್ಟಿತು. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ನಟಿಗೆ ಕ್ಯಾನ್ಸರ್‌ ರೋಗ ವಕ್ಕರಿಸುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದ ಪರಿಣಾಮ ಕ್ಯಾನ್ಸರ್‌ ನಿಂದ ಆ್ಯಂಡ್ರಿಲಾ ಹೊರ ಬಂದಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ಮೇಲೆ ಅವರಿಗೆ ಮತ್ತೊಮ್ಮೆ ಕ್ಯಾನ್ಸರ್‌ ಕಾಡುತ್ತದೆ. ಈ ಬಾರಿಯೂ ದಿಟ್ಟೆಯಾಗಿ ಹೋರಾಡಿ, ಆಪರೇಷನ್‌ ಮೂಲಕ ಕ್ಯಾನ್ಸರ್‌ ಗೆಡ್ಡೆ ತೆಗೆದು, ಕೀಮೋಥೆರಪಿಗೆ ಒಳಗಾಗಿ ಕ್ಯಾನ್ಸರ್‌ ಗೆದ್ದು, ಇತರರಿಗೆ ಸ್ಪೂರ್ತಿಯಾಗಿದ್ದರು.

 

ಟಾಪ್ ನ್ಯೂಸ್

police siren

ನ್ಯಾಯವಾದಿ,ಅವರ ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ

ಪಿಲ್ಯ: ಅಡಿಕೆ ತೋಟದಲ್ಲಿ ಅಕ್ರಮ ಮದ್ಯ ದಾಸ್ತಾನು; ಅಬಕಾರಿ ಇಲಾಖೆಯಿಂದ ದಾಳಿ, ಸೊತ್ತುಗಳು ವಶ

death

ಯಡಮೊಗೆ: ಅಡಿಕೆ ಮರದಿಂದ ಬಿದ್ದು ಸಾವು

police siren

ದಾಖಲೆಗಳಿಲ್ಲದೆ ಅಕ್ಕಿ ಸಾಗಾಟ :13 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶ

accuident

ಹಾಲಾಡಿ: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

missing

ಔಷಧ ಅಂಗಡಿಗೆಂದು ಹೋದ ವಿವಾಹಿತೆ ನಾಪತ್ತೆ

death

ಶಂಭೂರು: ತಾಳೆ ಮರದಿಂದ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಮೃತ್ಯು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

ಯುಪಿ :ಸುರೇಶ್ ರೈನಾ ಸಂಬಂಧಿಕರ ಮೇಲೆ ದಾಳಿ ನಡೆಸಿದ ಆರೋಪಿ ಎನ್‌ಕೌಂಟರ್‌

arrested

24 ರಾಜ್ಯಗಳ, 66.9 ಕೋಟಿ ಜನರ ಡೇಟಾ ಕದ್ದಿದ್ದ ಚಾಲಾಕಿ ಪೊಲೀಸ್ ಬಲೆಗೆ !!

Tiger

ವನ್ಯಜೀವಿಗಳನ್ನು ರಕ್ಷಿಸಲು ಹುಲಿ ಸಂರಕ್ಷಿತ ಪ್ರದೇಶದಿಂದ ರೈಲು ಹಳಿಗಳ ಸ್ಥಳಾಂತರ

1-sadadasds

ಛತ್ತೀಸ್‌ಗಢದಲ್ಲಿ ಬಸ್ ಸುಟ್ಟು ಹಾಕಿದ ನಕ್ಸಲರು; ಕನಿಷ್ಠ 15 ಜನ ಬಲಿ

ಕೈಯಲ್ಲಿ ಪಿಸ್ತೂಲ್ ಹಿಡಿದು ಕೇಕ್ ಕತ್ತರಿಸಿದ ಯುವಕ: ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಂಧನ

ಕೈಯಲ್ಲಿ ಪಿಸ್ತೂಲ್ ಹಿಡಿದು ಕೇಕ್ ಕತ್ತರಿಸಿದ ಯುವಕ: ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಂಧನ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

police siren

ನ್ಯಾಯವಾದಿ,ಅವರ ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ

ಪಿಲ್ಯ: ಅಡಿಕೆ ತೋಟದಲ್ಲಿ ಅಕ್ರಮ ಮದ್ಯ ದಾಸ್ತಾನು; ಅಬಕಾರಿ ಇಲಾಖೆಯಿಂದ ದಾಳಿ, ಸೊತ್ತುಗಳು ವಶ

death

ಯಡಮೊಗೆ: ಅಡಿಕೆ ಮರದಿಂದ ಬಿದ್ದು ಸಾವು

police siren

ದಾಖಲೆಗಳಿಲ್ಲದೆ ಅಕ್ಕಿ ಸಾಗಾಟ :13 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶ

accuident

ಹಾಲಾಡಿ: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ