ತ್ರಿಪುರದಲ್ಲಿ ಬಿಜೆಪಿ ಸುನಾಮಿ, ಇನ್ನೆರಡರಲ್ಲಿ ಅಧಿಕಾರದ ಮೇಲೆ ಕಣ್ಣು


Team Udayavani, Mar 3, 2018, 4:15 PM IST

Modi-Sunami-700.jpg

ಚುನಾವಣಾ ಫ‌ಲಿತಾಂಶಗಳು:

ತ್ರಿಪುರ 59/59 :  ಬಿಜೆಪಿ+ 43, ಕಾಂಗ್ರೆಸ್‌ 0, ಸಿಪಿಎಂ 16, ಸಿಪಿಐ 0, ಇತರರು 0.

ಮೇಘಾಲಯ : 59/59 : ಬಿಜೆಪಿ 2, ಕಾಂಗ್ರೆಸ್‌ 21, ಯುಡಿಪಿ 6, ಎನ್‌ಪಿಪಿ 19, ಇತರರು 11.

ನಾಗಾಲ್ಯಾಂಡ್‌ 60/60 : ಬಿಜೆಪಿ + 29, ಕಾಂಗ್ರೆಸ್‌ 0, ಎನ್‌ಪಿಎಫ್ 25, ಎನ್‌ಸಿಪಿ 0, ಇತರರು 6

ಹೊಸದಿಲ್ಲಿ : ಬಿಜೆಪಿ ಅಲೆ ಭಾರತದ ಮೂರು ಈ ಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ನಲ್ಲಿ ಪ್ರಬಲವಾಗಿ ಬೀಸುತ್ತಿದ್ದು ತ್ರಿಪುರದಲ್ಲಿ ಕಳೆದ ಎರಡು ದಶಕಗಳಿಂದ ಅಧಿಕಾರದಲ್ಲಿರುವ ಸಿಪಿಎಂ-ನೇತೃತ್ವದ ಸರಕಾರ ಧೂಳಿಪಟವಾಗಿದೆ. ತ್ರಿಪುರದಲ್ಲಿ ಸರಕಾರ ರಚಿಸಲಿರುವ ಬಿಜೆಪಿ, ನಾಗಾಲ್ಯಾಂಡ್‌ ಮತ್ತು ಮೇಘಾಲಯದಲ್ಲೂ ಸರಕಾರ ರಚಿಸುವ ಸಾಧ್ಯತೆಗಳಿವೆ. 

ತ್ರಿಪುರದಲ್ಲಿ ಚುನಾವಣೆಗೆ ಒಳಪಟ್ಟ 59 ಸ್ಥಾನಗಳ ಪೈಕಿ ಬಿಜೆಪಿ 43 ಸ್ಥಾನಗಳಲ್ಲಿ ಮುಂದಿದ್ದು ಅದು ಸರಕಾರ ರಚಿಸುವುದು ಖಚಿತವೇ ಇದೆ. 

ಹಿಂದಿನ ತ್ರಿಪುರ ಸರಕಾರದಲ್ಲಿ 50 ಸ್ಥಾನಗಳನ್ನು ಹೊಂದಿದ್ದ ಎಡ ಪಕ್ಷ ಈ ಬಾರಿ ಕೇವಲ 16 ಸ್ಥಾನಗಳಲ್ಲಿ ಮುಂದಿದೆ. ಚಾರ್ಲಿಯಾಮ್‌ ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿ ಮೃತಪಟ್ಟ ಕಾರಣ ಅಲ್ಲಿನ ಚುನಾವಣೆಯನ್ನು ಮುಂದೂಡಲಾಗಿತ್ತು. ಅದನ್ನು ಇನ್ನು ಇದೇ ಮಾರ್ಚ್‌ 12ರಂದು ನಡೆಸಲಾಗುವು. 

ತ್ರಿಪುರದಲ್ಲಿ ಐದನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಮಾಣಿಕ್‌ ಸರ್ಕಾರ ಅವರ ಕನಸು ಭಗ್ನವಾಗಿದೆ; ಎಡ ಪಕ್ಷಕ್ಕೆ ಆ ಮೂಲಕ ಭಾರೀ ದೊಡ್ಡ ಹೊಡೆತ ನೀಡಲಾಗಿದೆ. ಈ ವರೆಗೆ ದೇಶದಲ್ಲಿ ತ್ರಿಪುರ ಮತ್ತು ಕೇರಳದಲ್ಲಿ ಮಾತ್ರವೇ ಎಡ ಪಕ್ಷದ ಆಳ್ವಿಕೆ ಇತ್ತು. ಬಿಜೆಪಿಯ ರಾಮ ಮಾಧವ್‌ ಹೇಳಿರುವ ಪ್ರಕಾರ, ತ್ರಿಪುರ ಸುಂದರಿ ಮಾತೆಯ ಆಶೀರ್ವಾದದಿಂದಾಗಿ ಬಿಜೆಪಿ ತ್ರಿಪುರದಲ್ಲಿ ಕ್ರಾಂತಿಕಾರಿ ಫ‌ಲಿತಾಂಶ ಸಾಧಿಸಿದೆ.

ಮೇಘಾಲಯದಲ್ಲಿ :

ಮೇಘಾಲಯದಲ್ಲಿ ಈಗ ಲಭ್ಯವಿರುವ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್‌ 20 ಸ್ಥಾನಗಳಲ್ಲಿ ಮುಂದಿದೆ; ಆದರೆ ಸರಕಾರ ರಚಿಸಲು ಅಗತ್ಯವಿರುವ 31ರ ಮ್ಯಾಜಿಕ್‌ ನಂಬರ್‌ ಸಾಧಿಸಲು ವಿಫ‌ಲವಾಗಿದೆ. 

ಇಲ್ಲಿಯೂ ಕೂಡ 59 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ವಿಲಯಂನಗರ ಕ್ಷೇತ್ರದ ಅಭ್ಯರ್ಥಿಯ ಹತ್ಯೆಯಾದ ಕಾರಣ ಚುನಾವಣೆಯನ್ನು ರದ್ದುಪಡಿಸಲಾಗಿತ್ತು.

ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ ನೇತೃತ್ವದ ಕಾಂಗ್ರೆಸ್‌ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಹೊರತಾಗಿಯೂ ಅದು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾದ ಅನಿವಾರ್ಯತೆ ಒದಗಿದೆ. 

ಇಲ್ಲಿನ ಅಂತಿಮ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್‌ 21 ಸ್ಥಾನಗಳಲ್ಲಿ ಮುಂದಿದೆ; ಕೇಂದ್ರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ, ಮಾಜಿ ಲೋಕಸಭಾ ಸ್ಪೀಕರ್‌ ಪಿ ಎ ಸಂಗ್ಮಾ ಸಂಸ್ಥಾಪಿತ ಎನ್‌ಪಿಪಿ 19 ಸ್ಥಾನಗಳಲ್ಲಿ ಮುಂದಿದೆ; ಬಿಜೆಪಿ 2ರಲ್ಲಿ ಮುಂದಿದೆ. 

ಎನ್‌ಡಿಎ ಪಾಲುದಾರನಾಗಿರುವ ಹಾಗೂ ಪ್ರತ್ಯೇಕವಾಗಿ ಚುನಾವಣಾ ಕಣಕ್ಕೆ ಇಳಿದಿರುವ ಯುಡಿಪಿ, ಆರು ಸ್ಥಾನಗಳಲ್ಲಿ ಮುಂದಿದೆ;  ನಿರ್ಣಾಯಕರಾಗಬಲ್ಲ ಪಕ್ಷೇತ್ರರು 11 ಸ್ಥಾನಗಳಲ್ಲಿ ಮುಂದಿದ್ದಾರೆ !

ಕಾಂಗ್ರೆಸ್‌ ಪಕ್ಷವನ್ನು ಹೊರಗಿಡುವ ಸಲುವಾಗಿ ಇಲ್ಲಿ ಎನ್‌ಡಿಎ ಪಾಲುದಾರ ಪಕ್ಷಗಳು ಚುನಾವಣೋತ್ತರ ಹೊಂದಾಣಿಕೆ ನಡೆಸುವ ಸಂಭವವಿದೆ. ಇದನ್ನು ಬಿಜೆಪಿಯ ಮೇಘಾಲಯ ಪ್ರಭಾರ ನಳಿನ್‌ ಕೊಹ್ಲಿ ವ್ಯಕ್ತಪಡಿಸಿದ್ದಾರೆ : ಮೇಘಾಲಯದಲ್ಲಿ  ಜನರು ಕಾಂಗ್ರೆಸ್‌ ವಿರುದ್ಧ ಮತ ಹಾಕಿದ್ದಾರೆ; ಅಂತೆಯೇ ಕಾಂಗ್ರೆಸ್‌ ಹೊರಗಿಡಲು ಬಿಜೆಪಿ ಮತ್ತು ಇತರ ಪಕ್ಷಗಳು ಸೇರಿಕೊಂಡು ಚುನಾವಣೋತ್ತರ ಮೈತ್ರಿ ನಡೆಸಲಿದ್ದಾರೆ.

ನಾಗಾಲ್ಯಾಂಡ್‌ನ‌ಲ್ಲಿ :

ನಾಗಾಲ್ಯಾಂಡ್‌ನ‌ಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾಗಿರುವ ಹೊಸದಾಗಿ ಸಂಸ್ಥಾಪಿಸಲ್ಪಟ್ಟ  ಎನ್‌ಡಿಪಿಪಿ ಮುಂದಿವೆ. ಎನ್‌ಡಿಪಿಪಿ 26 ಸ್ಥಾನಗಳಲ್ಲಿ ಮುಂದಿದೆ. ಎನ್‌ಡಿಪಿಪಿ ಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ನೀಫಿಯೂ ರಿಯೋ ಅವರೇ ನಾಗಾಲ್ಯಾಂಡ್‌ನ‌ ಮುಂದಿನ ಮುಖ್ಯಮಂತ್ರಿಯಾಗುವ ನಿರೀಕ್ಷೆ ಇದೆ. 

ಮುಖ್ಯಮಂತ್ರಿ ಟಿಆರ್‌ ಝೆಲಿಯಾಂಗ್‌ ಅವರ ಎನ್‌ಪಿಎಫ್ 28 ಸ್ಥಾನಗಳಲ್ಲಿ ಮುಂದಿದೆ. ಹಿಂದೆ ಎನ್‌ಪಿಎಫ್ ಬಿಜೆಪಿ ಜತೆ ಮೈತ್ರಿ ಹೊಂದಿತ್ತು. ಆದರೆ ಚುನಾವಣೆಗೆ ಮುನ್ನ ಬಿಜೆಪಿ ಆ ಮೈತ್ರಿಯನ್ನು ಮುರಿದು, ಎನ್‌ಡಿಪಿಪಿ ಜತೆಗೆ ಮೈತ್ರಿ ಬೆಳೆಸಿಕೊಂಡಿತು. 

ಟಾಪ್ ನ್ಯೂಸ್

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.