ಬಿಹಾರದಲ್ಲಿ ಭೀಕರ ಅಪಘಾತ ; ಮಕ್ಕಳು ಸೇರಿ 15 ಮಂದಿ ದಾರುಣ ಅಂತ್ಯ
Team Udayavani, Nov 20, 2022, 10:42 PM IST

ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಿಯಂತ್ರಣ ತಪ್ಪಿದ ಟ್ರಕ್ ಅನೇಕ ಜನರನ್ನು ನುಜ್ಜುಗುಜ್ಜುಗೊಳಿಸಿದ್ದು, ಸಿಕ್ಕಿರುವ ಮಾಹಿತಿ ಪ್ರಕಾರ ಭೀಕರ ಅಪಘಾತದಲ್ಲಿ ಹಲವು ಮಕ್ಕಳು ಸೇರಿದಂತೆ ಸುಮಾರು 15 ಮಂದಿ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಅಪಘಾತದ ನಂತರ ಸ್ಥಳದಲ್ಲಿ ಭಯಭೀತರಾಗಿರುವ ದೃಶ್ಯಗಳು ಕಂಡುಬಂದಿವೆ.
ಮಹಾನರ್-ಹಾಜಿಪುರ ಮುಖ್ಯ ರಸ್ತೆಯಲ್ಲಿರುವ ದೇಸರಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ತಾನ್‌ಪುರ ಟೋಲಾ 28 ರಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನೆಯ ನಂತರ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳದಲ್ಲಿ ಪರಿಹಾರ-ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
ಮಹನಾರ್ ಮೊಹದ್ದಿಪುರ ರಾಜ್ಯ ಹೆದ್ದಾರಿ ಬಳಿಯ ಬ್ರಹ್ಮಸ್ಥಾನದ ಬಳಿಯಿರುವ ಭೂಯಾನ್ ಬಾಬಾ ಬಳಿ ಕೆಲವರು ಪೂಜೆ ಮಾಡುತ್ತಿದ್ದಾಗ ನಿಯಂತ್ರಣಕ್ಕೆ ಸಿಗದ ಟ್ರಕ್ ಅವರ ಮೇಲೆ ಹರಿದಿದೆ ಎಂದು ಹೇಳಲಾಗುತ್ತಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯ ಆರಂಭಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಅಪಘಾತದಲ್ಲಿ ಹಲವು ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ

ಕುನೋ ಉದ್ಯಾನವನದಿಂದ ಸಮೀಪದ ಗ್ರಾಮ ಪ್ರವೇಶಿಸಿದ ಚೀತಾ!; ವಿಡಿಯೋ

‘ನಸ್ರುಲ್ಲಗಂಜ್’ ಪಟ್ಟಣದ ಹೆಸರನ್ನು ‘ಭೈರುಂಡಾ’ ಎಂದು ಬದಲಾಯಿಸಿದ ಮಧ್ಯಪ್ರದೇಶ ಸರ್ಕಾರ

ಯಾವುದೇ ಕಾರಣಕ್ಕೂ ನಿತೀಶ್ ಕುಮಾರ್ ಪ್ರಧಾನಿಯಾಗುವುದಿಲ್ಲ: ಬಿಹಾರದಲ್ಲಿ ಗುಡುಗಿದ ಶಾ

ವಿಪಕ್ಷ ಮೈತ್ರಿಕೂಟದ ಸಂಚಾಲಕರಾಗಲು ಸಣ್ಣ ಪಕ್ಷವನ್ನು ಪ್ರೋತ್ಸಾಹಿಸುತ್ತೇನೆ: ತರೂರ್
MUST WATCH
ಹೊಸ ಸೇರ್ಪಡೆ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ

ಇಹಲೋಕ ತ್ಯಜಿಸಿದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ

ಕುನೋ ಉದ್ಯಾನವನದಿಂದ ಸಮೀಪದ ಗ್ರಾಮ ಪ್ರವೇಶಿಸಿದ ಚೀತಾ!; ವಿಡಿಯೋ

‘ನಸ್ರುಲ್ಲಗಂಜ್’ ಪಟ್ಟಣದ ಹೆಸರನ್ನು ‘ಭೈರುಂಡಾ’ ಎಂದು ಬದಲಾಯಿಸಿದ ಮಧ್ಯಪ್ರದೇಶ ಸರ್ಕಾರ

ಯಾವುದೇ ಕಾರಣಕ್ಕೂ ನಿತೀಶ್ ಕುಮಾರ್ ಪ್ರಧಾನಿಯಾಗುವುದಿಲ್ಲ: ಬಿಹಾರದಲ್ಲಿ ಗುಡುಗಿದ ಶಾ