ಶಾಲೆಗೆ ಖಡ್ಗವನ್ನು ತಂದು ಶಿಕ್ಷಕರಿಗೆ ಬೆದರಿಕೆಯೊಡ್ಡಿದ ತಂದೆ- ಏನಿದು ಘಟನೆ?
Team Udayavani, Jul 8, 2022, 10:45 PM IST
ಪಾಟ್ನಾ: ಮಗಳಿಗೆ ಶಾಲೆಯ ಸಮವಸ್ತ್ರ ಕೊಡಿಸಲು ಹಣ ಸಿಗಲಿಲ್ಲ ಎನ್ನುವ ಕಾರಣಕ್ಕೆ ತಂದೆಯು ಶಾಲೆಗೆ ಖಡ್ಗವನ್ನೇ ತಂದು ಶಿಕ್ಷಕರಿಗೆ ಬೆದರಿಸಿರುವ ಘಟನೆ ಬಿಹಾರದ ಅರಾರಿಯಾದಲ್ಲಿ ನಡೆದಿದೆ.
ಅಕ್ಬರ್ ಹೆಸರಿನ ಪೋಷಕ, ಖಡ್ಗ ಹಿಡಿದು ಶಾಲೆಗೆ ಬಂದಿದ್ದು, “ಇನ್ನು 24 ಗಂಟೆಗಳೊಳಗಾಗಿ ಸಮವಸ್ತ್ರದ ಹಣ ನನ್ನ ಬಳಿ ಬರಬೇಕು. ಇಲ್ಲವಾದರೆ ನಾನು ಮತ್ತೆ ಬರುತ್ತೇನೆ’ ಎಂದು ಹೆದರಿಸಿದ್ದಾನೆ.
ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದ ಸಮಯದಲ್ಲೇ ಈ ಘಟನೆ ನಡೆದಿದ್ದು, ಈ ಬಗ್ಗೆ ಮುಖ್ಯಶಿಕ್ಷಕರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಈ ವಿಚಾರದಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.