ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು ದಾಖಲು
Team Udayavani, Jun 24, 2022, 11:15 PM IST
ಹೈದರಾಬಾದ್: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರ ವಿರುದ್ಧ ಆಕ್ಷೇಪಾರ್ಹವಾಗಿ ಟ್ವೀಟ್ ಮಾಡಿದ್ದ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾರವರ ವಿರುದ್ಧ ಹೈದರಾಬಾದ್‌ನಲ್ಲಿ ಪ್ರಕರಣವೊಂದು ದಾಖಲಾಗಿದೆ.
ತೆಲಂಗಾಣ ಬಿಜೆಪಿಯ ಹಿರಿಯ ನಾಯಕ ಜಿ. ನಾರಾಯಣ್ ಅವರು, ವರ್ಮಾ ವಿರುದ್ಧ ಹೈದರಾಬಾದ್‌ನ ಅಬಿಬ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದರ ಬೆನ್ನಿಗೇ ಶುಕ್ರವಾರದಂದು ತಮ್ಮ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಿರುವ ವರ್ಮಾ, “”ನನಗೆ ಮಹಾಭಾರತದ ದ್ರೌಪದಿ ಪಾತ್ರ ಇಷ್ಟ. ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿಯವರ ಹೆಸರು ಕೇಳಿದ ಕೂಡಲೇ ಸುಮ್ಮನೇ ತಮಾಷೆಗೆ ಕೆಲವು ವಾಕ್ಯಗಳನ್ನು ಟ್ವೀಟ್ ಮಾಡಿದ್ದೆ. ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ” ಎಂದಿದ್ದಾರೆ.