ಹಾಲಿ ಬಿಜೆಪಿ ಸಂಸದ ಉದಿತ್‌ ರಾಜ್‌ ಕಾಂಗ್ರೆಸ್‌ ಸೇರ್ಪಡೆ

Team Udayavani, Apr 24, 2019, 12:55 PM IST

ಹೊಸದಿಲ್ಲಿ : ವಾಯುವ್ಯ ದೆಹಲಿ ಕ್ಷೇತ್ರದಿಂದ ಟಿಕೆಟ್‌ ಸಿಗದ ಹಿನ್ನಲೆಯಲ್ಲಿ ಆಕ್ರೋಶಗೊಂಡಿದ್ದ ಹಾಲಿ ಬಿಜೆಪಿ ಸಂಸದ ಉದಿತ್‌ ರಾಜ್‌ ಬುಧವಾರ ಬೆಳಗ್ಗೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ಉದಿತ್‌ ರಾಜ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಉದಿತ್‌ ರಾಜ್‌ಗೆ ಟಿಕೆಟ್‌ ನೀಡದೆ ಪ್ರಖ್ಯಾತ ಗಾಯಕ ಹಂಸ್‌ ರಾಜ್‌ ಹಂಸ್‌ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಿದೆ. ಉದಿತ್‌ ರಾಜ್‌ ಅವರು ಬಂಡಾಯ ಸಾರಿದ್ದು ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು, ಆದರೆ ಮಹತ್ವದ ವಿದ್ಯಮಾನದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ