ಪರಿಶಿಷ್ಟರ ಸೆಳೆಯಲು ಬಿಜೆಪಿ ಹೊಸ ಗುರಿ: ನಡ್ಡಾ ನೇತೃತ್ವದಲ್ಲಿ ವಿಶೇಷ ಸಭೆ
ಬಿಜೆಪಿ ದಲಿತ ಸಂಸದರು, ಮೋರ್ಚಾಗಳ ಪದಾಧಿಕಾರಿಗಳು ಭಾಗಿ
Team Udayavani, May 17, 2022, 9:36 PM IST
ನವದೆಹಲಿ: ದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯಗಳನ್ನು ಮುಟ್ಟುವಲ್ಲಿ ಬಿಜೆಪಿ ಅಳವಡಿಸಿಕೊಳ್ಳಬಹುದಾದ ಕಾರ್ಯತಂತ್ರಗಳ ಕುರಿತಂತೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು, ವಿವಿಧ ರಾಜ್ಯಗಳ ಬಿಜೆಪಿಯ ದಲಿತ ಸಂಸದರು ಹಾಗೂ ಬಿಜೆಪಿ ದಲಿತ ಮೋರ್ಚಾಗಳ ಪದಾಧಿಕಾರಿಗಳ ಜತೆಗೆ ವಿಶೇಷ ಸಭೆ ನಡೆಸಿದ್ದಾರೆ.
ಸಭೆಯಲ್ಲಿ, ಬಿಜೆಪಿಯ ಯಾವುದಾದರೊಂದು ಅಭಿವೃದ್ಧಿ ಯೋಜನೆಯನ್ನು ಆಯ್ದುಕೊಂಡು ತಮ್ಮ ಪ್ರಾಂತ್ಯಗಳಲ್ಲಿರುವ ಪರಿಶಿಷ್ಟ ಸಮುದಾಯಕ್ಕೆ ಅದನ್ನು ಯಶಸ್ವಿಯಾಗಿ ಮುಟ್ಟಿಸಬೇಕೆಂಬ ಗುರಿಯನ್ನು ನೀಡಲಾಯಿತು. ಅಲ್ಲದೆ, ಕೇಂದ್ರದಿಂದ ಪರಿಶಿಷ್ಟ ಸಮುದಾಯಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕೆಂದು ಹೇಳಲಾಯಿತು.
ಇದನ್ನೂ ಓದಿ :ಸುಪ್ರೀಂಗೆ ಅರ್ಜಿ ಹಾಕಿದ ವಕೀಲರಿಗೆ 8 ಲಕ್ಷ ರೂ. ದಂಡ
ಇದರ ಜೊತೆಯಲ್ಲೇ, ಬಿಜೆಪಿ ಸರ್ಕಾರವು ಪರಿಶಿಷ್ಟರಿಗಾಗಿ ಮೀಸಲಾಗಿಟ್ಟಿರುವ ಯೋಜನೆಗಳ ಬಗ್ಗೆ ಕಾಂಗ್ರೆಸ್ ಯಾವ ರೀತಿ ಅಪಪ್ರಚಾರ ಮಾಡುತ್ತಿದೆ ಎಂಬುದನ್ನೂ ಪರಿಶಿಷ್ಟ ಸಮುದಾಯಗಳಿಗೆ ತಲುಪಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ದಲಿತ ಸಮುದಾಯದ ಸಂಸದರು, ಪ್ರತಿನಿಧಿಗಳಿಗೆ ಸೂಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೋಗುವವರು ಹೋಗಿ.. ನಾನು ಹೊಸ ಶಿವಸೇನೆ ರಚಿಸುತ್ತೇನೆ: ಉದ್ಧವ್ ಠಾಕ್ರೆ
ಚಂಡೀಗಢದಲ್ಲಿ ಶಿವಲಿಂಗಕ್ಕೆ ಬಿಯರ್ ಅಭಿಷೇಕ ಮಾಡಿದ ಯುವಕರು!
ವಾರಕ್ಕೆ ನಾಲ್ಕು ದಿನ ಕೆಲಸ: ಜು. 1ರಿಂದ ಜಾರಿ! ದಿನದ ಸೇವಾವಧಿ 12 ಗಂಟೆಗೆ ವಿಸ್ತರಣೆ
ಹೊಸ ಕಾರುಗಳಿಗೆ ಇನ್ನು ದೇಶದಲ್ಲೇ ಕ್ರ್ಯಾಶ್ ಟೆಸ್ಟ್: ಏನಿದು ಕಾರ್ ಕ್ರ್ಯಾಶ್ ಟೆಸ್ಟ್?
ವಾಹನ ನಿಲುಗಡೆಗೆ ಜಾಗವಿಲ್ಲವಾ? ಡಾಬಾಗಳು ಬಂದ್!