ಗೋವಾ: 10 ಬ್ಲ್ಯಾಕ್ ಫಂಗಸ್ ಸೋಂಕಿತರಲ್ಲಿ ಒಬ್ಬ ಬಲಿ
Team Udayavani, May 25, 2021, 2:07 PM IST
ಪಣಜಿ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‍ನ 10 ಜನ ಸೋಂಕಿತರಿದ್ದು, ಇವರಿಗೆ ಗೋವಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ ಬ್ಲ್ಯಾಕ್ ಫಂಗಸ್‍ಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ ಎಂದು ಗೋವಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಶಿವಾನಂದ ಬಾಂದೇಕರ್ ಮಾಹಿತಿ ನೀಡಿದ್ದಾರೆ.
ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಗೋವಾ ವೈದ್ಯಕೀಯ ಮಹಾವಿದ್ಯಾಲಯದ 102 ಬ್ಲಾಕ್‍ನಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಮಧುಮೇಹ ರೋಗಿಗಳಾಗಿದ್ದಾರೆ ಎಂಬ ಮಾಹಿತಿ ನೀಡಿದರು.
ಇದನ್ನೂ ಓದಿ : ರಾಜಕೀಯ ಇರುವವರೆಗೂ ಮಕ್ಕಳ್ ನೀಧಿ ಮೈಯಮ್ ಪಕ್ಷ ಇರುತ್ತದೆ : ಕಮಲ್ ಹಾಸನ್
ಕೋವಿಡ್ ಮೂರನೇಯ ಅಲೆಯನ್ನು ಎದುರಿಸಲು ವಿಶೇಷವಾಗಿ ಮಕ್ಕಳಿಗೆ ಚಿಕಿತ್ಸೆ ನೀಡಲು ವಿಶೇಷ ಸಮೀತಿಯೊಂದನ್ನು ಸ್ಥಾಪನೆ ಮಾಡಲಾಗಿದೆ. 18 ವರ್ಷದ ಒಳಗಿನ ಮಕ್ಕಳಿಗೆ ಕರೋನಾ ಮೂರನೇಯ ಅಲೆಯಿಂದ ಯಾವುದೇ ತೊಂದರೆಯುಂಟಾಗಬಾರದು ಎಂಬ ನಿಟ್ಟಿನಲ್ಲಿ ಗೋವಾ ವೈದ್ಯಕೀಯ ಮಹಾವಿದ್ಯಾಲಯದ ಸೂಪರ್ ಸ್ಪೆಶಾಲಿಟಿ ವಿಭಾಗದಲ್ಲಿ ವಿಶೇಷ ಪ್ರತ್ಯೇಗ ವಿಭಾಗವನ್ನು ಸ್ಥಾಪನೆ ಮಾಡಲಾಗಿದೆ. ರಾಜ್ಯದ 18 ವರ್ಷದೊಳಗಿನ ಮಕ್ಕಳಿಗೆ ಕರೋನಾದಿಂದ ಯಾವುದೇ ತೊಂದರೆಯಾಗಬಾರತದು ಎಂಬ ಉದ್ದೇಶದಿಂದ ಬಾಲರೋಗ ತಜ್ಞರೊಂದಿಗೂ ಬೈಠಕ್ ನಡೆಸಲಾಗಿದೆ ಎಂದು ಡಾ. ಬಾಂದೇಕರ್ ಮಾಹಿತಿ ನೀಡಿದರು.