ಗರ್ಭಿಣಿಯರು ಸೇರಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳ ಮೃತದೇಹ ಬಾವಿಯಲ್ಲಿ ಪತ್ತೆ!
Team Udayavani, May 28, 2022, 3:48 PM IST
ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯ ದುಡು ಪಟ್ಟಣದ ಬಾವಿಯಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಹತ್ಯೆಗೀಡಾದ ಮಹಿಳೆಯರನ್ನು ಸಹೋದರಿಯರಾದ ಕಲುದೇವಿ, ಮಮತಾ ಮತ್ತು ಕಮಲೇಶ ಎಂದು ಗುರುತಿಸಲಾಗಿದೆ.
ಮೃತಪಟ್ಟ ಇಬ್ಬರು ಮಕ್ಕಳಲ್ಲಿ ಒಬ್ಬರು ನಾಲ್ಕು ವರ್ಷ ವಯಸ್ಸಿನವರಾದರೆ, ಮತ್ತೊಂದು ಮಗು ಕೇವಲ 27 ದಿನ ಪ್ರಾಯದ್ದಾಗಿದೆ. ಇವರಿಬ್ಬರೂ ಕಲು ದೇವಿಯ ಮಕ್ಕಳು ಎಂದು ವರದಿ ತಿಳಿಸಿದೆ.
ಮಮತಾ ದೇವಿ ಮತ್ತು ಕಮಲೇಶ ಇಬ್ಬರೂ ತುಂಬು ಗರ್ಭಿಣಿಯಾಗಿರುವುದು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿದೆ.
ದೇಹಗಳು ಪತ್ತೆಯಾದ ಬಾವಿ ಅವರ ಮನೆಯಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ವರದಕ್ಷಿಣೆ ಬೇಡಿಕೆಯ ಮೇರೆಗೆ ಅತ್ತೆಯಂದಿರು ಅವರನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಫೈನಲ್ ಪ್ರವೇಶದ ಖುಷಿಯಲ್ಲಿ ಪುಟ್ಟ ಅಭಿಮಾನಿಗೆ ಜೆರ್ಸಿ ಗಿಫ್ಟ್ ನೀಡಿದ ಟ್ರೆಂಟ್ ಬೌಲ್ಟ್
ಬುಧವಾರದಂದು ಐವರು ನಾಪತ್ತೆಯಾಗಿದ್ದರು. ಶನಿವಾರದವರೆಗೂ ಅವರಿಗಾಗಿ ಹುಡುಕಾಟ ಆರಂಭಿಸಲೂ ಪೊಲೀಸರು ಹಿಂದೇಟು ಹಾಕಿದ್ದರು ಎಂದು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಅತ್ತಿಗೆಯ ಥಳಿತಕ್ಕೆ ಒಳಗಾಗಿದ್ದ ಕಲು ದೇವಿ 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು. ಆಕೆಯ ಕಣ್ಣಿಗೆ ಗಾಯಗಳಾಗಿತ್ತು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಷ್ಟ್ರಪತಿ ಚುನಾವಣೆ ಕುರಿತ ಅರ್ಜಿತಿರಸ್ಕರಿಸಿದ ಸುಪ್ರೀಂ ಕೋರ್ಟ್
ತೆಲಂಗಾಣದಲ್ಲೂ ಬಿಜೆಪಿ ಅಧಿಕಾರ ಖಚಿತ : ಸಚಿವ ಅನುರಾಗ್ ಠಾಕೂರ್
ಗೋವಾದಲ್ಲಿ ಶಿವಸೇನೆ ಬಂಡಾಯ ಶಾಸಕರು : ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ
ಕೊನೆ ಕ್ಷಣದ ಬದಲಾವಣೆ : ಔರಂಗಾಬಾದ್- ಸಂಭಾಜಿ ನಗರ, ಒಸ್ಮಾನಾಬಾದ್- ಧಾರಶಿವ್
ನೂತನ ಉಪರಾಷ್ಟ್ರಪತಿ ಆಯ್ಕೆಗೆ ಮುಹೂರ್ತ ಫಿಕ್ಸ್ : ಆಗಸ್ಟ್ 6 ರಂದು ಚುನಾವಣೆ
MUST WATCH
ಹೊಸ ಸೇರ್ಪಡೆ
ಕಲಬುರಗಿ; ಇಬ್ಬರು ಮಕ್ಕಳನ್ನು ಕೊಂದು ಮಕ್ಕಳ ಶವದೊಂದಿಗೆ ರಿಕ್ಷಾದಲ್ಲಿ ತಿರುಗಾಡಿದ ಪಾಪಿ ತಂದೆ
ರಾಷ್ಟ್ರಪತಿ ಚುನಾವಣೆ ಕುರಿತ ಅರ್ಜಿತಿರಸ್ಕರಿಸಿದ ಸುಪ್ರೀಂ ಕೋರ್ಟ್
ಆಸ್ಕರ್ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್ ನಟಿ ಕಾಜೋಲ್
ಕುಂಬಳೆ : ಅಪರಿಚಿತರಿಂದ ವಿದ್ಯಾರ್ಥಿನಿಯ ಅಪಹರಣ: ವ್ಯಾನ್ನಿಂದ ಜಿಗಿದು ತಪ್ಪಿಸಿಕೊಂಡ ಬಾಲಕಿ
ಕುಣಿಗಲ್: ಕೆಂಪೇಗೌಡ ಜಯಂತೋತ್ಸವ ಮೆರವಣಿಗೆ ವೇಳೆ ಲೋಪ: ತಹಶೀಲ್ದಾರ್ ಮಹಬಲೇಶ್ವರ್ ಕ್ಷಮೆ