
ಆಹಾರ ಭದ್ರತಾ ಯೋಜನೆಗೆ ಹೊಸ ಹೆಸರು; ಕೇಂದ್ರ ಸಂಪುಟದಿಂದ ಅನುಮೋದನೆ
Team Udayavani, Jan 12, 2023, 7:15 AM IST

ನವದೆಹಲಿ: ದೇಶದ 80 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯ ಒದಗಿಸುವ ಕೇಂದ್ರ ಸರ್ಕಾರದ ಸಮಗ್ರ ಆಹಾರ ಭದ್ರತಾ ಯೋಜನೆಗೆ “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ’ (ಪಿಎಂಜಿಕೆಎವೈ) ಎಂದು ನಾಮಕರಣ ಮಾಡಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪಿಎಂಜಿಕೆಎವೈ ಅಡಿ ಜ.1ರಿಂದ ಪ್ರತಿ ಬಡವನಿಗೆ ಪ್ರತಿ ತಿಂಗಳು ತಲಾ 5 ಕೆಜಿ ಆಹಾರ ಧಾನ್ಯ ವಿತರಿಸಲಾಗುತ್ತದೆ. ಅಂತ್ಯೋದಯ ಅನ್ನ ಯೋಜನೆ(ಎಎವೈ) ಅಡಿ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 35 ಕೆಜಿ ಆಹಾರ ಧಾನ್ಯ ವಿತರಿಸಲಾಗುತ್ತದೆ.
ಉಚಿತ ಆಹಾರ ಧಾನ್ಯ ವಿತರಣೆ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂದು ಪ್ರತಿಪಕ್ಷಗಳು ಟೀಕೆ ನಡೆಸಿದ ಬೆನ್ನಲ್ಲೇ ಈ ತೀರ್ಮಾನ ಪ್ರಕಟಿಸಲಾಗಿದೆ.
ಹೊಸ ಸಹಕಾರಿ ಸಂಘಗಳು:
ಸಾವಯವ ಉತ್ಪನ್ನಗಳು, ಬೀಜಗಳು ಮತ್ತು ರಫ್ತು ಉತ್ತೇಜಿಸಲು ಮೂರು ನೂತನ ಬಹು ರಾಜ್ಯ ಸಹಕಾರಿ ಸಂಘಗಳ ಸ್ಥಾಪನೆಗೆ ಕೂಡ ಅನುಮೋದನೆ ನೀಡಲಾಗಿದೆ. ಬಹು ರಾಜ್ಯ ಸಹಕಾರಿ ಸಂಘಗಳ ಕಾಯ್ದೆ, 2022ರ ಅಡಿಯಲ್ಲಿ ರಾಷ್ಟ್ರ ಮಟ್ಟದ ಸಹಕಾರಿ ಸಾವಯವ ಸಂಘ, ಸಹಕಾರಿ ಬೀಜ ಸಂಘ ಮತ್ತು ಸಹಕಾರಿ ರಫ್ತು ಸಂಘಗಳು ನೋಂದಣಿಯಾಗಲಿವೆ.
ಉತ್ತೇಜನ:
ರುಪೇ ಡೆಬಿಟ್ ಕಾರ್ಡ್ ಮತ್ತು ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು ಉತ್ತೇಜಿಸಲು 2,600 ಕೋಟಿ ರೂ.ಗಳ ಯೋಜನೆಗೆ ಸಮ್ಮತಿಸಲಾಗಿದೆ. ಪಾಯಿಂಟ್ ಆಫ್ ಸೇಲ್ಸ್ ಮಷಿನ್‌ಗಳ ಬಳಕೆಗೆ ಪ್ರಾಧಾನ್ಯತೆ ನೀಡಿ, ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ಉತ್ತೇಜನ ಇದರಿಂದ ಸಿಗಲಿದೆ. ಜತೆಗೆ ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕವೂ ರುಪೇ ಕಾರ್ಡ್, ಭೀಮ್-ಯುಪಿಐ ಮೂಲಕವೂ ಪಾವತಿಗೆ ಆದ್ಯತೆ ಸರ್ಕಾರದ ನಿರ್ಧಾರದಿಂದ ಸಿಗಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

Manish Sisodia ರಿಗೆ ಮಧ್ಯಂತರ ಪರಿಹಾರ; ಪತ್ನಿ ಭೇಟಿಗೆ ಕೋರ್ಟ್ ಅನುಮತಿ

UP; ಅಯೋಧ್ಯೆಯಲ್ಲಿ ಬ್ರಿಜ್ ಭೂಷಣ್ ‘ಮಹಾ ರ‍್ಯಾಲಿ’ಗೆ ಅನುಮತಿ ನಿರಾಕಾರ

ಕಾಲೇಜು ವಿದ್ಯಾರ್ಥಿನಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ! ಕೇರಳದಲ್ಲಿ ನಡೆದ ಘಟನೆ
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
