ರೈಲ್ವೆ ಟಿಕೆಟ್ ಪಡೆಯುವಾಗ ಬುಕಿಂಗ್ ಕ್ಲರ್ಕ್ ನಿಂದ ವಂಚನೆ ; ವೈರಲ್ ವಿಡಿಯೋ
Team Udayavani, Nov 25, 2022, 4:02 PM IST
ನವ ದೆಹಲಿ : ಮುಂದಿನ ಬಾರಿ ನೀವು ರೈಲ್ವೆ ಟಿಕೆಟ್ ಪಡೆಯುವಾಗ ಜಾಗರೂಕರಾಗಿರಿ. ಹಜರತ್ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಲ್ಲಿ ನಡೆದ ನಗದು ಹಗರಣದ ನಿದರ್ಶನವನ್ನು ಸಾಮಾಜಿಕ ಜಾಲತಾಣಗಳು ಬೆಳಕಿಗೆ ತಂದಿವೆ.
ಟ್ವಿಟರ್‌ನಲ್ಲಿ ರೈಲ್ ವಿಷ್ಪರ್ಸ್ ಹಂಚಿಕೊಂಡ ವೈರಲ್ ವಿಡಿಯೋ ಕ್ಲಿಪ್, ನಗದು ಆಧಾರಿತ ವಹಿವಾಟಿನ ಸಮಯದಲ್ಲಿ ರೈಲ್ವೆ ಉದ್ಯೋಗಿಯೊಬ್ಬ ಗ್ರಾಹಕರನ್ನು ಬುದ್ಧಿವಂತಿಕೆಯಿಂದ ವಂಚಿಸುವದನ್ನು ತೋರಿಸುತ್ತದೆ. ಬುಕಿಂಗ್ ಕ್ಲರ್ಕ್ ರೂ. 500 ಸ್ವೀಕರಿಸುತ್ತಾನೆ ಆದರೆ ಪ್ರಯಾಣಿಕರನ್ನು ವಂಚಿಸಲು ಪ್ರಯತ್ನಿಸುವ ಮೋಸದ ತಂತ್ರಗಳನ್ನು ಬಳಸುತ್ತಾನೆ.
ಗ್ರಾಹಕರು ಸೂಪರ್‌ಫಾಸ್ಟ್ ಗ್ವಾಲಿಯರ್ ರೈಲಿನಲ್ಲಿ ಆಸನಕ್ಕಾಗಿ ಪಾವತಿಸಲು 500 ರೂ. ನೋಟು ನೀಡುತ್ತಾರೆ ಅದನ್ನು ವಂಚನೆಯಿಂದ ಬುಕಿಂಗ್ ಕ್ಲರ್ಕ್ ಜೇಬಿನಿಂದ 20 ನೋಟು ತೆಗೆದು 125 ರೂಪಾಯಿ ಟಿಕೆಟ್ ನೀಡಲು ಮತ್ತೊಮ್ಮೆ ಹಣ ಕೇಳುತ್ತಾನೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ನೋಡಿದ ನಂತರ ಇಲಾಖೆಗೆ ಈ ವಿಷಯ ತಿಳಿದಿದ್ದು. “ನೌಕರನನ್ನು ವಜಾ ಮಾಡಲಾಗಿದೆ ಮತ್ತು ಅವನ ವಿರುದ್ಧ ಶಿಸ್ತಿನ ಕ್ರಮಗಳನ್ನು ಪ್ರಾರಂಭಿಸಲಾಗಿದೆ” ಎಂದು ಡಿ ಆರ್ ಎಂ ದೆಹಲಿ ಟ್ವೀಟ್ ಮಾಡಿದೆ.
#Nizamuddin station booking office
Date 22.11.22
Rs 500 converted into Rs 20 by the booking clerk.@GM_NRly @RailwayNorthern @drm_dli @RailMinIndia @AshwiniVaishnaw @IR_CRB @RailSamachar @VijaiShanker5 @PRYJ_Bureau @kkgauba @tnmishra111 @AmitJaitly5 pic.twitter.com/SH1xFOacxf— RAILWHISPERS (@Railwhispers) November 24, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಿರೀಕ್ಷಣಾ ಜಾಮೀನು: ಮಾಡಾಳ್ ವಿರೂಪಾಕ್ಷಪ್ಪಗೆ ಸುಪ್ರೀಂ ನೋಟಿಸ್ ಜಾರಿ
ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ
ರಾಘವ್ ಛಡ್ಡಾ-ಪರಿಣಿತಿ ಛೋಪ್ರಾ ಶೀಘ್ರವೇ ಎಂಗೇಜ್
MUST WATCH
ಹೊಸ ಸೇರ್ಪಡೆ
ಆಕಾಂಕ್ಷಾ ದುಬೆ ಪ್ರಕರಣ: ಮಗಳ ಸಾವಿಗೆ ಇವರಿಬ್ಬರೇ ಕಾರಣವೆಂದ ತಾಯಿ
ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಬ್ಬಿ ಶ್ರೀನಿವಾಸ್
Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…
ಮಂಗಳೂರಿನಲ್ಲಿ ಗಾಂಜಾ ಜಾಲ; ಪೆಡ್ಲರ್ ಸಹಿತ ನಾಲ್ವರ ಬಂಧನ
ಧಮಕಿ ಹಾಕುವುದು- ಹೊಡೆಯುವುದು ಡಿಕೆಶಿ- ಸಿದ್ದರಾಮಯ್ಯ ಸಂಸ್ಕೃತಿ: ಪ್ರಹ್ಲಾದ ಜೋಶಿ