Hit & Run: ಕಾರು ಢಿಕ್ಕಿಯ ರಭಸಕ್ಕೆ ಪೀಸ್ ಪೀಸ್ ಆದ ಸ್ಕೂಟರ್; ಮಹಿಳೆ ಗಂಭೀರ
Team Udayavani, Sep 10, 2023, 11:58 AM IST
ಚಂಡೀಗಢ: ರಭಸವಾಗಿ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಪೀಸ್ ಪೀಸ್ ಆಗಿ ತುಂಡಾಗಿರುವ ಭೀಕರ ಘಟನೆ ಹರಿಯಾಣದ ಫತೇಹಾಬಾದ್ ನಡೆದಿದೆ.
ಮಹಿಳೆಯೊಬ್ಬರು ಸ್ಕೂಟರ್ ಚಲಾಯಿಸಿಕೊಂಡು ರಸ್ತೆ ದಾಟಲು ಹೋಗಿದ್ದಾರೆ. ನಿಧಾನಕ್ಕೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿರುವ ವೇಳೆ ಅತ್ತ ಕಡೆಯಿಂದ ವೇಗವಾಗಿ ಬಂದ ಕಾರು ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ತುಂಡು ತುಂಡಾಗಿ ಬಿದ್ದಿದೆ.
ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭೀಕರ ಘಟನೆಯಲ್ಲಿ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಕೂಟರ್ ಗೆ ಢಿಕ್ಕಿ ಹೊಡೆದು ಕಾರು ಸಮೇತ ಚಾಲಕ ಪರಾರಿ ಆಗಿದ್ದಾನೆ. ಹಿಟ್ & ರನ್ ಕೇಸ್ ದಾಖಲಿಸಿಕೊಂಡು ಪೊಲೀಸರು ಆರೋಪಿಯ ಹುಡುಕಾಟ ನಡೆಸುತ್ತಿದ್ದಾರೆ.