
ಲವರ್ ಜೊತೆ ಸಿಕ್ಕಿಹಾಕಿಕೊಂಡ ಪತ್ನಿ ಗಂಡನ ಶಿಶ್ನವನ್ನೇ ತುಂಡರಿಸಿದ್ದಳು
Team Udayavani, Aug 3, 2018, 6:32 PM IST

ವೆಲ್ಲೂರ್: ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದ ವೇಳೆ ಗಂಡನ ಕೈಯಲ್ಲಿ ಪತ್ನಿ ರೆಡ್ ಆಗಿ ಸಿಕ್ಕಿಹಾಕಿಕೊಂಡಿದ್ದಳು. ಈ ವೇಳೆ ಮೂವರ ನಡುವೆ ಜಟಾಪಟಿ ನಡೆಯುತ್ತಿದ್ದಾಗಲೇ ಪತ್ನಿ ಗಂಡನ ಶಿಶ್ನವನ್ನೇ ಕಚ್ಚಿ ತುಂಡು ಮಾಡಿದ ಘಟನೆ ವೆಲ್ಲೂರು ಜಿಲ್ಲೆಯ ಗುಡಿಯಾಟಂನ ಥುರೈಮೂಲೈ ಗ್ರಾಮದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಪತ್ನಿ ಜಯಂತಿ ಮೇಲೆ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ರೈತ ಸೀತಾರಾಮಯ್ಯ(55 ವರ್ಷ) ಹಾಗೂ ಜಯಂತಿ ಭಾನುವಾರ ಗ್ರಾಮದ ಆಷಾಢ ಮಾಸದ ವಿಶೇಷ ಹಬ್ಬಕ್ಕಾಗಿ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದ ಪೂಜೆಯ ಬಳಿಕ ಗಂಡ, ಹೆಂಡತಿ ದೇವಸ್ಥಾನದ ಹೊರ ಆವರಣದಲ್ಲಿ ನಡೆಯುತ್ತಿದ್ದ ಸ್ಥಳೀಯರ ಆಟೋಟ ನೋಡುತ್ತಿದ್ದರು. ಏತನ್ಮಧ್ಯೆ ಜನಜಂಗುಳಿಯಲ್ಲಿ ಪತ್ನಿ ತಪ್ಪಿಸಿಕೊಂಡು ಬಿಟ್ಟಿದ್ದಳು!
ಸುಮಾರು ಒಂದು ಗಂಟೆಯಾದರೂ ಪತ್ನಿ ವಾಪಸ್ ಬಾರದಿರುವುದನ್ನು ಗಮನಿಸಿದ ಪತಿ ಸೀತಾರಾಮಯ್ಯ ಹುಡುಕುತ್ತಾ ಹೊರಟಿದ್ದ. ಕೆಲ ಹೊತ್ತಿನ ನಂತರ ಪತ್ನಿ ಬೇರೊಬ್ಬನ ಜೊತೆ ಚಕ್ಕಂದವಾಡುತ್ತಿರುವುದು ಗಮನಕ್ಕೆ ಬಂದಿತ್ತು. ಕೋಪಗೊಂಡ ಪತಿ ರೆಡ್ ಹ್ಯಾಂಡ್ ಆಗಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಹಿಡಿದು ಬಿಟ್ಟಿದ್ದ!
ನಿಮ್ಮಿಬ್ಬರ ಅಕ್ರಮ ಸಂಬಂಧ ಜಗಜ್ಜಾಹೀರು ಮಾಡುತ್ತೇನೆ ಎಂದು ಗಂಡ ಧಮ್ಕಿ ಹಾಕಿದ್ದ. ಈ ವೇಳೆ ಕಾಪಾಡಿ, ಕಾಪಾಡಿ ಎಂದು ಪ್ರಿಯಕರ ಕೂಗಿಕೊಳ್ಳತೊಡಗಿದ್ದ. ಪ್ರಿಯಕರ, ಪತ್ನಿ ಹಾಗೂ ಪತಿಯ ನಡುವೆ ಹೊಯ್ದಾಟ ನಡೆಯುತ್ತಿದ್ದಾಗ ಸೀತಾರಾಮಯ್ಯನ(ಗಂಡ) ಪಂಚೆ ಬಿಚ್ಚಿ ಹೋಗಿತ್ತು!
ಜಯಂತಿ ಹಾಗೂ ಆಕೆಯ ಪ್ರಿಯಕರನಿಗೆ ಊರ ಜನ ಬಂದು ಸೇರುವ ಮೊದಲು ಪರಾರಿಯಾಗಬೇಕೆಂದು ಆಲೋಚಿಸುತ್ತಿದ್ದರು. ಪಂಚೆ ಬಿಚ್ಚಿಹೋದ ಅವಕಾಶವನ್ನೇ ಬಳಸಿಕೊಂಡ ಪತ್ನಿ ಗಂಡನ ಶಿಶ್ನವನ್ನು ಕಚ್ಚಿ ತುಂಡು ಮಾಡಿ ಪ್ರಿಯಕರನ ಜೊತೆ ಓಡಿಹೋಗಿದ್ದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬೊಬ್ಬೆ ಹೊಡೆಯುತ್ತಾ ಬಿದ್ದಿದ್ದ ಸೀತಾರಾಮಯ್ಯ ಹಾಗೂ ಆತನ ತುಂಡಾದ ಶಿಶ್ನವನ್ನು ತೆಗೆದುಕೊಂಡ ಸ್ಥಳೀಯರು ವೆಲ್ಲೂರು ಮೆಡಿಕಲ್ ಕಾಲೇಜಿಗೆ ದಾಖಲಿಸಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾಖಲಿಸುವಂತೆ ಕಳುಹಿಸಿಕೊಟ್ಟಿದ್ದು, ಶಸ್ತ್ರಚಿಕಿತ್ಸೆ ಮೂಲಕ ಶಿಶ್ನವನ್ನು ಜೋಡಿಸಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WFI chief ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ವರದಿಗಳು ಸುಳ್ಳು

US ನಲ್ಲಿ ರಾಹುಲ್ ಗಾಂಧಿ ವಿರುದ್ಧ ಖಾಲಿಸ್ತಾನ್ ಬೆಂಬಲಿಗರ ಆಕ್ರೋಶ; ಭಾಷಣಕ್ಕೆ ಅಡ್ಡಿ

Goaಕ್ಕೆ ಪ್ರವಾಸಕ್ಕೆಂದು ತೆರಳಿದ್ದ ತುಮಕೂರಿನ ಯುವಕ ಆತ್ಮಹತ್ಯೆ

Owaisi; ತಾಕತ್ತಿದ್ರೆ ಚೀನಾದ ಮೇಲೆ ಸರ್ಜಿಕಲ್ ದಾಳಿ ನಡೆಸಿ; ಬಿಜೆಪಿಗೆ ಒವೈಸಿ ಸವಾಲು

Tragic: ಮರಕ್ಕೆ ಢಿಕ್ಕಿ ಹೊಡೆದು ಕಾರಿಗೆ ಬೆಂಕಿ; ನವ ವಿವಾಹಿತರು ಸೇರಿ ನಾಲ್ವರು ಸಜೀವ ದಹನ