ಬೆಲೆ ಏರಿಕೆ ಬಿಸಿ; ಖಾಲಿ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ಕಲಾಪದಲ್ಲಿ ವಿಪಕ್ಷಗಳ ಪ್ರತಿಭಟನೆ
ಸಮಾಜವಾದಿ ಪಕ್ಷದ ಶಾಸಕರು ಸದನದ ಮಧ್ಯಭಾಗಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.
Team Udayavani, Feb 13, 2020, 4:29 PM IST
ಲಕ್ನೋ: ಉತ್ತರಪ್ರದೇಶ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದ ಮೊದಲ ದಿನವಾದ ಗುರುವಾರ ವಿರೋಧ ಪಕ್ಷದ ಶಾಸಕರು ರಾಜ್ಯಪಾಲರ ಭಾಷಣಕ್ಕೆ ತೀವ್ರ ಅಡ್ಡಿಪಡಿಸಿದ ಘಟನೆ ನಡೆಯಿತು. ಪೌರತ್ವ ತಿದ್ದುಪಡಿ ಕಾಯ್ದೆ, ಕಾನೂನು ಸುವ್ಯವಸ್ಥೆ, ಉದ್ಯೋಗ ಹಾಗೂ ಎಲ್ ಪಿಜಿ ಬೆಲೆ ಏರಿಕೆ ವಿರುದ್ಧ ಘೋಷಣೆ ಕೂಗಿರುವುದಾಗಿ ವರದಿ ತಿಳಿಸಿದೆ.
ಗವರ್ನರ್ ಆನಂದಿಬೆನ್ ಪಾಟೀಲ್ ಅವರು ಸದನವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ಶಾಸಕರು ಸದನದ ಮಧ್ಯಭಾಗಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು. ಕೆಲವರು ನೆಲದ ಮೇಲೆ ಕುಳಿತು ಘೋಷಣೆ ಕೂಗಿರುವುದಾಗಿ ವರದಿ ವಿವರಿಸಿದೆ.
ಕೆಲವು ಶಾಸಕರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಿತ್ತಿಚಿತ್ರ ಪ್ರದರ್ಶಿಸಿದ್ದು, ಇನ್ನುಳಿದ ಪ್ರತಿಪಕ್ಷದ ಶಾಸಕರು ಬೆನ್ನಿಗೆ ಖಾಲಿ ಎಲ್ ಪಿಜಿ ಸಿಲಿಂಡರ್ ಕಟ್ಟಿಕೊಂಡು ಘೋಷಣೆ ಕೂಗಿರುವುದಾಗಿ ವರದಿ ತಿಳಿಸಿದೆ. ವಿಪಕ್ಷಗಳ ಗದ್ದಲ, ಕೋಲಾಹಲವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೀಕ್ಷಿಸುತ್ತಿದ್ದ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಕಲಾಪ ಬಹಿಷ್ಕರಿಸಿ ಹೊರಬಂದ ಸಮಾಜವಾದಿ ಮತ್ತು ಕಾಂಗ್ರೆಸ್ ಶಾಸಕರು ವಿಧಾನಸಭೆಯ ಹೊರಗೆ ಪ್ರತಿಭಟನೆ ಮುಂದುವರಿಸಿದ್ದರು. ಕಾಂಗ್ರೆಸ್ ಶಾಸಕರು ಕೈಗಾಡಿ ತಳ್ಳುವವರಿಗೆ ಟೊಮ್ಯಾಟೊ ಹಂಚಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬೈ-ಪುಣೆ ಎಕ್ಸ್ಪ್ರೆಸ್ವೇ: ಬಸ್ಗೆ ಕಾರು ಢಿಕ್ಕಿ; ಎನ್ಸಿಪಿ ಶಾಸಕ ಸಂಗ್ರಾಮ್ ಪಾರು
ಅಮರನಾಥ ಯಾತ್ರೆ ಭದ್ರತಾ ವ್ಯವಸ್ಥೆ: 2 ಮಹತ್ವದ ಸಭೆ ನಡೆಸಿದ ಅಮಿತ್ ಶಾ
2ಜಿ ಯುಗ ಭ್ರಷ್ಟಾಚಾರದ ಸಂಕೇತವಾಗಿತ್ತು, ಈಗ ಪಾರದರ್ಶಕತೆ ಇದೆ: ಪ್ರಧಾನಿ
ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ; ಅದು ಫೌಂಟನ್: ಮಸೀದಿಯ ಆಡಳಿತ ಮಂಡಳಿ ವಾದ
ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್