Chhattisgarh;ನಕ್ಸಲ್‌ ಉಪಟಳದ ಮಧ್ಯೆ ಶೇ.71 ಮತದಾನ

Team Udayavani, Nov 8, 2023, 12:34 AM IST

1-saas

ಹೊಸದಿಲ್ಲಿ: ಹಿಂಸಾಚಾರ, ಸ್ಫೋಟ, ಬಹಿಷ್ಕಾರದ ಕರೆ, ಎನ್‌ಕೌಂಟರ್‌ ನಡುವೆಯೇ ಛತ್ತೀಸ್‌ಗಢದ 20 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಮಂಗಳವಾರ ಮುಕ್ತಾಯಗೊಂಡಿದೆ. ನಕ್ಸಲ್‌ಪೀಡಿತ ಕ್ಷೇತ್ರಗಳೂ ಸೇರಿದಂತೆ 20 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.71ರಷ್ಟು ಮತದಾನ ದಾಖಲಾಗಿದೆ.

ಸುಮಾರು ಒಂದು ಲಕ್ಷಕ್ಕೂ ಅಧಿಕ ಭದ್ರತಾ ಸಿಬಂದಿಯ ಹದ್ದಿನ ಕಣ್ಣಿನ ನಡುವೆಯೂ ಹಲವು ಕಡೆ ನಕ್ಸಲೀಯರು ಹಕ್ಕು ಚಲಾವಣೆಗೆ ಅಡ್ಡಿಯುಂಟುಮಾಡಿದ್ದಾರೆ. ಸುಕ್ಮಾ, ನಾರಾಯಣಪುರ, ಬಿಜಾಪುರ ಮತ್ತು ಕಂಕೇರ್‌ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದೆ. ಸುದ ಚಿಂತಾಗುಫಾದಲ್ಲಿ ಭದ್ರತಾ ಸಿಬಂದಿ ಮತ್ತು ನಕ್ಸಲರ ನಡುವೆ ಕೆಲವು ಕಾಲ ಗುಂಡಿನ ಚಕಮಕಿ ನಡೆದು ನಾಲ್ವರು ಭದ್ರತಾ ಸಿಬಂದಿ ಗಾಯಗೊಂಡರೆ, ಇದೇ ಜಿಲ್ಲೆಯ ತೊಂಡಮಾರ್ಕ ಕ್ಯಾಂಪ್‌ನಲ್ಲಿ ಐಇಡಿ ಸ್ಫೋಟಗೊಂಡು ಸಿಆರ್‌ಪಿಎಫ್ ಕಮಾಂಡೋ ಒಬ್ಬರು ಗಾಯಗೊಂಡಿದ್ದಾರೆ. ನಾರಾಯಣಪುರ, ಬಿಜಾಪುರ, ಕಂಕೇರ್‌ನಲ್ಲೂ ಎನ್‌ಕೌಂಟರ್‌ ನಡೆದಿದೆ. ಇದೇ ವೇಳೆ, ಬಸ್ತಾರ್‌ ವಲಯದ 126 ಗ್ರಾಮಗಳ ಜನರು ಸಂಭ್ರಮದಿಂದ ಪ್ರಜಾ ಸತ್ತೆಯ ಹಬ್ಬದಲ್ಲಿ ಪಾಲ್ಗೊಂ ಡಿದ್ದು ಕಂಡುಬಂತು. ಸ್ವಾತಂತ್ರಾéಅನಂತರ ಮೊದಲ ಬಾರಿಗೆ ಈ ಗ್ರಾಮಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ಮಂಗಳವಾರ ಚುನಾವಣೆ ನಡೆದ 20 ಕ್ಷೇತ್ರಗಳ ಪೈಕಿ 2018ರಲ್ಲಿ 17 ಕ್ಷೇತ್ರಗಳು ಕಾಂಗ್ರೆಸ್‌ ಪಾಲಾಗಿದ್ದವು. ಎರಡರಲ್ಲಿ ಬಿಜೆಪಿ ಜಯ ಗಳಿಸಿತ್ತು. ರಾಜ್ಯದ ಒಟ್ಟು 90 ಕ್ಷೇತ್ರಗಳ ಪೈಕಿ 68ರಲ್ಲಿ ಕಾಂಗ್ರೆಸ್‌, 15ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದವು. ಹಿಂದಿನ ಚುನಾವಣೆಯಲ್ಲಿ ಶೇ.76.47ರಷ್ಟು ಮತದಾನ ದಾಖಲಾಗಿತ್ತು.
ಇದೇ ವೇಳೆ, ಮಿಜೋರಾಂನಲ್ಲಿ ಶಾಂತಿ ಯುತವಾಗಿ ಮತದಾನ ಪೂರ್ಣಗೊಂಡಿದ್ದು, ಸಂಜೆ 6ರ ವೇಳೆಗೆ ಶೇ.77ರಷ್ಟು ಮತದಾನ ದಾಖಲಾಗಿದೆ. 2018ರ ಚುನಾವಣೆಯಲ್ಲಿ ಇದು ಶೇ.81.61 ಆಗಿತ್ತು. ಡಿ.3ರಂದು ಮತ ಎಣಿಕೆ ನಡೆಯಲಿದೆ.

ಕಾಂಗ್ರೆಸ್‌ ಇದ್ದಲ್ಲಿ ನಕ್ಸಲರು, ಉಗ್ರರಿಗೆ ಶಕ್ತಿ ಜಾಸ್ತಿ: ಮೋದಿ
ಮಂಗಳವಾರ ಒಂದೇ ದಿನ ಪ್ರಧಾನಿ ಮೋದಿಯವರು ಚುನಾವಣೆಯ ಹೊಸ್ತಿಲಲ್ಲಿರುವ ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ತೆಲಂಗಾಣ ದಲ್ಲಿ ರ್ಯಾಲಿ ನಡೆಸಿದ್ದಾರೆ. “ಛತ್ತೀಸ್‌ಗಢದಲ್ಲಿ ನಕ್ಸಲ್‌ವಾದವನ್ನು ತಡೆಗಟ್ಟುವಲ್ಲಿ ಕಾಂಗ್ರೆಸ್‌ ಸಂಪೂರ್ಣ ವಿಫ‌ಲವಾಗಿದೆ. ಯಾವಾಗೆಲ್ಲ ಕೇಂದ್ರ ದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಿದೆಯೋ, ಆಗೆಲ್ಲ ನಕ್ಸಲರು ಮತ್ತು ಭಯೋತ್ಪಾದಕರ ಶಕ್ತಿ ಹೆಚ್ಚಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಧ್ಯಪ್ರದೇಶದ ಸಿಧಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಬುಡಕಟ್ಟು ಸಮುದಾಯದ ಅಭಿವೃದ್ಧಿ ಬೇಕಿಲ್ಲ, ಅವರ ಮತ ಗಳು ಮಾತ್ರ ಬೇಕು. ಇದೇ ಕಾರಣಕ್ಕಾಗಿ, ದೇಶದ ಮೊದಲ ಬುಡಕಟ್ಟು ಮಹಿಳೆಯನ್ನು ನಾವು ರಾಷ್ಟ್ರಪತಿ ಮಾಡಲು ಹೊರಟಾಗ ಅವರು ವಿರೋಧಿಸಿದರು. ಮೊದಲ ದಲಿತ ಸಿಐಸಿ(ಮುಖ್ಯ ಮಾಹಿತಿ ಆಯುಕ್ತ) ಆಯ್ಕೆ ವೇಳೆಯೂ ಕಾಂಗ್ರೆಸ್‌ ಸದಸ್ಯರು ಗೈರಾಗಿದ್ದರು ಎಂದು ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ಮಾತನಾಡಿ, ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌ ಪಕ್ಷಗಳು ಹಿಂದುಳಿದ ವರ್ಗಗಳ ವಿರೋಧಿಗಳು ಎಂದಿದ್ದಾರೆ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.