ಕೇರಳದ ಈ ಪೊಲೀಸ್ ಠಾಣೆಯ ಸುತ್ತ ಚೀನಾ ಹಾವುಗಳು ! ಕೋತಿಗಳ ಹಾವಳಿ ತಡೆಗೆ ಮಾಡಿದ ಹೊಸ ಪ್ಲಾನ್
Team Udayavani, Sep 15, 2022, 2:42 PM IST
ಕೇರಳ : ಸಾಮಾನ್ಯವಾಗಿ ಸಮಾಜದಲ್ಲಿ ಕಾನೂನು ಪಾಲಕರೆಂದರೆ ಅದು ‘ಪೊಲೀಸರು’ ಸುತ್ತ ಮುತ್ತ ಏನೇ ಸಮಸ್ಯೆ ಎದುರಾದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಪೊಲೀಸರ ಪಾತ್ರ ಬಹಳ ಪ್ರಮುಖ, ಆದರೆ ಕೇರಳದ ಇಡುಕ್ಕಿಯ ಅರಣ್ಯದ ಅಂಚಿನಲ್ಲಿರುವ ಪೊಲೀಸ್ ಠಾಣೆಗೆ ಮಾತ್ರ ‘ಹಾವುಗಳೇ’ ರಕ್ಷಕರು ಎಂಬಂತಾಗಿದೆ.
ಹೌದು.. ದಿನಬೆಳಗಾದರೆ ಕೋತಿಗಳ ಹಾವಳಿಯಿಂದ ಹೈರಾಣಾಗಿದ್ದ ಕೇರಳ-ತಮಿಳುನಾಡು ಗಡಿಯಲ್ಲಿರುವ ಕುಂಬುಮೆಟ್ಟು ಪೊಲೀಸ್ ಠಾಣೆಯ ಸಿಬ್ಬಂದಿಗಳು ಕೋತಿಗಳ ಹಾವಳಿ ತಡೆಗೆ ಹೊಸ ಮಾರ್ಗವೊಂದನ್ನು ಕಂಡುಹಿಡಿದಿದ್ದಾರೆ ಅದು ಚೀನಾದ ಹಾವುಗಳು. ಅದರಂತೆ ಪೊಲೀಸ್ ಠಾಣೆಯ ಸುತ್ತ ಚೀನಾ ಹಾವುಗಳನ್ನು ಬಿಟ್ಟಿದ್ದಾರೆ. ಅರೆ.. ಇದೇನಿದು ಕೋತಿಗಳಿಗಿಂತ ಹಾವುಗಳೇ ಹೆಚ್ಚು ಅಪಾಯಕಾರಿ ಅಂತದರಲ್ಲಿ ಠಾಣೆಯ ಸುತ್ತ ಹಾವುಗಳನ್ನು ಬಿಟ್ಟು ಜೇವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರಾ ಎಂದು ಅಂದುಕೊಳ್ಳಬೇಡಿ, ಇದು ನಿಜ ಹಾವಲ್ಲ ಬದಲಾಗಿ ಚೀನಾ ಹಾವನ್ನೇ ಹೋಲುವ ಪ್ಲಾಸ್ಟಿಕ್ ಹಾವುಗಳು.
ನೈಜ ಸರೀಸೃಪಗಳನ್ನು ಹೋಲುವ ಚೀನಾ ನಿರ್ಮಿತ ಹಾವುಗಳು ಪೊಲೀಸ್ ಠಾಣೆ ಕಟ್ಟಡದ ಗ್ರಿಲ್, ಸಮೀಪದ ಮರಗಳ ಕೊಂಬೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜೋಡಿಸಲಾಗಿದೆ.
ಈ ಹಾವುಗಳನ್ನು ಠಾಣೆಯ ಸುತ್ತ ಇಟ್ಟ ಬಳಿಕ ಕೋತಿಗಳು ಠಾಣೆಯ ಹತ್ತಿರ ಬರುತ್ತಿಲ್ಲವಂತೆ ಇದರಿಂದ ಠಾಣೆಯ ಸಿಬ್ಬಂದಿಗಳಿಗೆ ನೆಮ್ಮದಿ ಸಿಕ್ಕಿದೆಯಂತೆ.
ಕೇರಳದಲ್ಲಿ ಪ್ಲಾಸ್ಟಿಕ್ ಹಾವುಗಳ ವ್ಯಾಪಾರ ಜೋರು :
ಕೋತಿಗಳ ತೊಂದರೆ ಇದ್ದ ಪ್ರದೇಶದಲ್ಲಿ ಈಗ ಪ್ಲಾಸ್ಟಿಕ್ ಹಾವುಗಳ ಕಾರುಬಾರು ಜೋರಾಗಿದೆ ಹಾಗಾಗಿ ಅಲ್ಲಿನ ಕೆಲವು ಜನರು ಪ್ಲಾಸ್ಟಿಕ್ ಹಾವುಗಳ ಮಾರಾಟ ಮಾಡುವ ವ್ಯಾಪಾರವನ್ನೇ ಮಾಡಿಕೊಂಡಿದ್ದಾರಂತೆ.
ಇದನ್ನೂ ಓದಿ : ಜೈಶ್ ಉಗ್ರ ಸಂಘಟನೆ ನಾಯಕ ಮಸೂದ್ ಅಫ್ಘಾನ್ ನಲ್ಲಿ ಇಲ್ಲ, ಪಾಕ್ ನಲ್ಲಿದ್ದಾನೆ; ತಾಲಿಬಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ