
ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ತಮಿಳುನಾಡಿನ 45ಕ್ಕೂ ಹೆಚ್ಚಿನ ಕಡೆ ಎನ್‌ಐಎ ದಾಳಿ
Team Udayavani, Nov 10, 2022, 9:16 AM IST

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ತನಿಖಾ ದಳ ದೊಡ್ಡ ಕ್ರಮ ಕೈಗೊಂಡಿದೆ. ಅದರಂತೆ ಗುರುವಾರ ಮುಂಜಾನೆ ಎನ್‌ಐಎ ತಂಡ ಕೊಯಮತ್ತೂರಿನ 21 ಸ್ಥಳಗಳು ಸೇರಿದಂತೆ ತಮಿಳುನಾಡಿನ 45 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಅಕ್ಬೋಬರ್ 23 ರ ಭಾನುವಾರ ಕೊಯಮತ್ತೂರಿನ ಈಶ್ವರನ್ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಎಲ್ ಪಿಜಿ ಸಿಲಿಂಡರ್ ಅಳವಡಿಸಿದ್ದ ಕಾರೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಜಮೀಶಾ ಮುಬಿನ್ ಎಂಬ ವ್ಯಕ್ತಿ ಮೃತಪಟ್ಟಿದ್ದ. ಪ್ರಕರಣದ ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಜಮೀಶಾ ಮುಬಿನ್ ಮನೆಯಿಂದ ದೇಶಿ ನಿರ್ಮಿತ ಮದ್ದುಗುಂಡುಗಳು ಮತ್ತು ಕೆಲವು ಐಸಿಸ್ ಬೆಂಬಲಿತ ಬರಹಗಳನ್ನು ವಶಪಡಿಸಿಕೊಂಡಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ತನಿಖಾ ತಂಡ ಗುರುವಾರ ಮುಂಜಾನೆ ಕೊಯಮತ್ತೂರು ಸೇರಿ ತಮಿಳುನಾಡಿನ ಕೆಲವೊಂದು ಸ್ಥಳಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿದ್ದು ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ : ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ: ಬಗೆಹರಿಯದ ಗೊಂದಲ, ಮತ್ತೆ ಮರಳು ಅಭಾವ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯುಪಿ :ಸುರೇಶ್ ರೈನಾ ಸಂಬಂಧಿಕರ ಮೇಲೆ ದಾಳಿ ನಡೆಸಿದ ಆರೋಪಿ ಎನ್ಕೌಂಟರ್

24 ರಾಜ್ಯಗಳ, 66.9 ಕೋಟಿ ಜನರ ಡೇಟಾ ಕದ್ದಿದ್ದ ಚಾಲಾಕಿ ಪೊಲೀಸ್ ಬಲೆಗೆ !!

ವನ್ಯಜೀವಿಗಳನ್ನು ರಕ್ಷಿಸಲು ಹುಲಿ ಸಂರಕ್ಷಿತ ಪ್ರದೇಶದಿಂದ ರೈಲು ಹಳಿಗಳ ಸ್ಥಳಾಂತರ

ಛತ್ತೀಸ್ಗಢದಲ್ಲಿ ಬಸ್ ಸುಟ್ಟು ಹಾಕಿದ ನಕ್ಸಲರು; ಕನಿಷ್ಠ 15 ಜನ ಬಲಿ

ಕೈಯಲ್ಲಿ ಪಿಸ್ತೂಲ್ ಹಿಡಿದು ಕೇಕ್ ಕತ್ತರಿಸಿದ ಯುವಕ: ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಂಧನ