ಮಾರುಕಟ್ಟೆಗೆ ಲಗ್ಗೆ ಇಟ್ಟ ಕಾಂಪ್ಯಾಕ್ಟ್ ಟ್ರಕ್‌ ಟಾಟಾ ಇಂಟ್ರಾ


Team Udayavani, May 27, 2019, 6:00 AM IST

Ban27051906

ಚೆನ್ನೈ: ವಾಹನ ತಯಾರಿಕಾ ರಂಗದ ಅಗ್ರಗಣ್ಯ ಸಂಸ್ಥೆ ಟಾಟಾ ಮೋಟರ್, ಭಾರತೀಯ ಮಾರುಕಟ್ಟೆಗೆ ದೇಶದ ಮೊದಲ ಕಾಂಪ್ಯಾಕ್ಟ್ ಟ್ರಕ್‌ ‘ಟಾಟಾ ಇಂಟ್ರಾ’ ಪರಿಚಯಿಸಿದೆ. ಹಳೆಯ ಟಾಟಾ ‘ಏಸ್‌’ಗಿಂತಲೂ ಬಲಿಷ್ಠವಾಗಿರುವ ಇಂಟ್ರಾ ಕಾಂಪ್ಯಾಕ್ಟ್ ಟ್ರಕ್‌ಗಳನ್ನು ಆಧುನಿಕತೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ಅತ್ಯಂತ ಕಡಿಮೆ ದರದಲ್ಲಿ ಇಂಟ್ರಾ ಕಾಂಪ್ಯಾಕ್ಟ್ ಟ್ರಕ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ.

ಎರಡು ಮಾದರಿಯ ಇಂಟ್ರಾ ವಾಹನಗಳು ಬುಧವಾರದಿಂದಲೇ ಎಲ್ಲ ರಾಜ್ಯಗಳ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಿದ್ದು, ಸಂಸ್ಥೆಯ ಟಾಟಾ ಏಸ್‌ ವಾಹನಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ. ಮೇ 22ರಂದು ಚೆನ್ನೈನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಸ್ಥೆಯ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗುಂಟೆರ್‌ ಬಟೆಶೆಕ್‌ ಹಾಗೂ ಟಾಟಾ ಮೋಟರ್ ಲಿಮಿಟೆಡ್‌ನ‌ ಸಿವಿಬಿಯು ವಿಭಾಗದ ಅಧ್ಯಕ್ಷ ಗಿರೀಶ್‌ ವಾಘ್ ಅವರು ಹೊಸ ‘ಟಾಟಾ ಇಂಟ್ರಾ’ ಕಾಂಪ್ಯಾಕ್ಟ್ ಟ್ರಕ್‌ಗಳನ್ನು ಅನಾವರಣಗೊಳಿಸಿದರು.

ಭಾರತೀಯ ಮಾರುಕಟ್ಟೆಗೆ 2005ರಲ್ಲಿ ಟಾಟಾ ಮೋಟರ್ ಟಾಟಾ ಏಸ್‌ನ್ನು ಪರಿಚಯಿಸಿತ್ತು. ಅದರ ಉನ್ನತೀಕರಣಗೊಳಿಸಿದ ವಾಹನವಾಗಿ ಸಂಸ್ಥೆ ಇದೀಗ ಇಂಟ್ರಾ ಕಾಂಪ್ಯಾಕ್ಟ್ ಟ್ರಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಟಾಟಾ ಸಂಸ್ಥೆಯು ಇಂಟ್ರಾ ವಿ 10 ಹಾಗೂ ಇಂಟ್ರಾ ವಿ20 ಅವತರಣಿಕೆಯಲ್ಲಿ ಕಾಂಪ್ಯಾಕ್ಟ್ ಟ್ರಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇಂಟ್ರಾ ವಿ10 ಹಾಗೂ ವಿ20 ಟ್ರಕ್‌ಗಳು ಅತಿ ವೇಗವಾಗಿ ಚಲಿಸುವ ಹಾಗೂ ಗುಡ್ಡ ಪ್ರದೇಶಗಳಲ್ಲೂ ಸುಲಲಿತವಾಗಿ ಚಲಿಸುವಂತಹ ಸಾಮರ್ಥಯ ಹೊಂದಿವೆ. ಅದರಲ್ಲಿಯೂ ವಿಶೇಷವಾಗಿ ಇಂಟ್ರಾ ವಿ10 ಟ್ರಕ್‌ಗಳನ್ನು ನಗರದ ಭಾಗಗಳು ಹಾಗೂ ಕಡಿಮೆ ಅಂತರದ ಪ್ರದೇಶಗಳಲ್ಲಿ ಹೆಚ್ಚಿನ ಟ್ರಿಪ್‌ಗ್ಳಿಗೆ ಬಳಸಲು ವಿನ್ಯಾಸಗೊಳಿಸಿದ್ದು, ವಿ20 ಟ್ರಕ್‌ಗಳನ್ನು ದೂರ ಪ್ರಯಾಣಕ್ಕೆ ವಿನ್ಯಾಸಗೊಳಿಸಲಾಗಿದೆ.

ವಾಹನ ಬಿಡುಗಡೆಗೊಳಿಸಿ ಮಾತನಾಡಿದ ಟಾಟಾ ಮೋಟರ್ ಲಿಮಿಟೆಡ್‌ನ‌ ಸಿವಿಬಿಯು ವಿಭಾಗದ ಅಧ್ಯಕ್ಷ ಗಿರೀಶ್‌ ವಾಘ್, ದೇಶದಾದ್ಯಂತ ಟಾಟಾ ಏಸ್‌ಗೆ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಆ ಹಿನ್ನೆಲೆಯಲ್ಲಿ ಸಂಸ್ಥೆ ಏಸ್‌ನಲ್ಲಿರುವ ನ್ಯೂನ್ಯತೆಗಳು ಹಾಗೂ ಲೋಪಗಳ ಕುರಿತು ತಿಳಿಸಲು ಚಾಲಕ ಸಲಹೆಗಳನ್ನು ಸಂಗ್ರಹಿಸಿದ್ದು, ಅದರ ಆಧಾರದ ಮೇಲೆ ಟಾಟಾ ಇಂಟ್ರಾ ಟ್ರಕ್‌ಗಳನ್ನು ತಯಾರಿಸಲಾಗಿದೆ ಎಂದರು.ಟಾಟಾ ಇಂಟ್ರಾ ಕಾಂಪ್ಯಾಕ್ಟ್ ಟ್ರಕ್‌ಗಳು ಭಾರತ ಸ್ಟೇಜ್‌ (ಬಿಎಸ್‌-6) ಎಂಜಿನ್‌ ಹೊಂದಿದ್ದು, ಇಂಟ್ರಾ ವಿ20 1.4 ಲೀಟರ್‌ ಡೈರೆಕ್ಟ್ ಇಂಜೆಕ್ಷನ್‌ ಡೀಸೆಲ್ ಹಾಗೂ 1396 ಸಿಸಿ ಸಾಮರ್ಥಯದ ಇಂಜಿನ್‌ ಹೊಂದಿದೆ. ಜತೆಗೆ, ಜಿಬಿಎಸ್‌ 65 ಮೆಕ್ಯಾನಿಕಲ್ ಶಿಫ್ಟ್ ಗೇರ್‌ ಬಾಕ್ಸ್‌ ಇದ್ದು, 5 ಸ್ಪೀಡ್‌ ಮ್ಯಾನ್ಯುಯೇಲ್ ಗೇರ್‌ ಟ್ರಾನ್ಸ್‌ಮಿಶನ್‌ ಹೊಂದಿದೆ. ಇನ್ನು ವಿ10 ಟ್ರಕ್‌ 798 ಸಿಸಿ ಡಿಐ ಇಂಜಿನ್‌ ಹೊಂದಿದ್ದು, 1000 ಕೆ.ಜಿ.ಯನ್ನು ಹೊರುವ ಸಾಮರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಿದರು.

‘ಸಂಪೂರ್ಣ ಸೇವಾ’ ಲಭ್ಯ: ಸಂಸ್ಥೆಯಿಂದ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ‘ಸಂಪೂರ್ಣ ಸೇವಾ’ ಕಾರ್ಯಕ್ರಮದಡಿಯಲ್ಲಿ 24×7 ಸೇವೆ ಲಭ್ಯವಾಗುತ್ತದೆ. ಅದರಂತೆ ಯಾವುದೇ ಭಾಗದಲ್ಲಿ ವಾಹನ ಕೆಟ್ಟು ನಿಂತರೆ ಸಂಸ್ಥೆಯ ಪ್ರತಿನಿಧಿಗಳು ನೆರವಿಗೆ ಬರಲಿದ್ದು, ಎರಡು ವರ್ಷಗಳು ಅಥವಾ 72,000 ಕಿ.ಮೀ.ಸಂಚರಿಸುವವರೆಗೆ ವಾರೆಂಟಿ ನೀಡಲಾಗುತ್ತದೆ.

ವಾಹನದ ವಿಶೇಷತೆಗಳು

ಪವರ್‌ ಸ್ಟೈರಿಂಗ್‌ – ವಿಸ್ತಾರವಾದ ಕ್ಯಾಬಿನ್‌-ಎಮರ್ಜೆನ್ಸಿ ಲಾಕಿಂಗ್‌ ರಿಯಾಕ್ಟರ್‌ ಒಳಗೊಂಡ ಸೀಟ್ಬೆಲ್r-ಕಡಿಮೆ ಶಬ್ದ ಮಾಡುವ ಎಂಜಿನ್‌ -ಆರಾಮದಾಯಕ ಆಸನ ವ್ಯವಸ್ಥೆ-ಮೊಬೈಲ್ ಚಾರ್ಜಿಂಗ್‌ ಪಾಯಿಂಗ್‌-ಫ್ರೀ ಫಿಟ್ಟೆಡ್‌ ಮ್ಯೂಸಿಕ್‌ ಸಿಸ್ಟಂ-ಹವಾನಿಯಂತ್ರಿತ ವ್ಯವಸ್ಥೆ – ಎಲ್ಇಡಿ ಲ್ಯಾಂಪ್‌ಗ್ಳ ಅಳವಡಿಕೆ.

ಭಾರತದ ಸಣ್ಣ ವಾಣಿಜ್ಯ ವಾಹನ ಉತ್ಪಾದನಾ ಕ್ಷೇತ್ರಕ್ಕೆ ಟಾಟಾ ಸಂಸ್ಥೆ ಇಂಟ್ರಾ ಕಾಂಪ್ಯಾಕ್ಟ್ ಟ್ರಕ್‌ ಪರಿಚಯಿಸಿದ್ದು, ಹೆಚ್ಚಿನ ಗ್ರಾಹಕರಿಗೆ ಇದು ಅನುಕೂಲವಾಗಲಿದೆ. ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ವಾಹನವನ್ನು ವಿನ್ಯಾಸಗೊಳಿಸಲಾಗಿದ್ದು, ಇಂಟ್ರಾ ವಿ10 ಟ್ರಕ್‌ 5.35 ಲಕ್ಷ ರೂ. ಹಾಗೂ ಇಂಟ್ರಾ ವಿ20 ಟ್ರಕ್‌ 5.85 ಲಕ್ಷ ರೂ.ಗಳಿಂದ ಲಭ್ಯವಾಗಲಿದೆ. ವಿದೇಶಿ ಮಾರುಕಟ್ಟೆಯಲ್ಲಿ ಇದನ್ನು ಪರಿಚಯಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.
– ಗುಂಟೆರ್‌ ಬಟೆಶೆಕ್‌, ಸಿಇಒ ಟಾಟಾ ಮೋಟರ್.
-ವೆಂ.ಸುನೀಲ್ಕುಮಾರ್‌

ಟಾಪ್ ನ್ಯೂಸ್

Bangla: ಹಿಂಸಾಚಾರಕ್ಕೆ ನಲುಗಿದ ಬಾಂಗ್ಲಾ-ದೇಶಾದ್ಯಂತ ಕರ್ಫ್ಯೂ ಜಾರಿ: ಭಾರತೀಯರು ವಾಪಸ್

Bangla: ಹಿಂಸಾಚಾರಕ್ಕೆ ನಲುಗಿದ ಬಾಂಗ್ಲಾ-ದೇಶಾದ್ಯಂತ ಕರ್ಫ್ಯೂ ಜಾರಿ: ಭಾರತೀಯರು ವಾಪಸ್

2-shirva

Shirva: ನಾಯಿಯ ಶವ ದ್ವಿಚಕ್ರ ವಾಹನಕ್ಕೆ‌ ಕಟ್ಟಿ ಎಳೆದುಕೊಂಡು ಹೋದ ವ್ಯಕ್ತಿ: ವಿಡಿಯೋ ವೈರಲ್

by-raghavendra

Shimoga; ಕೇಂದ್ರ ಬಜೆಟ್ ನಲ್ಲಿ ಶಿವಮೊಗ್ಗಕ್ಕೆ ಪ್ರಮುಖ ಘೋಷಣೆ ನಿರೀಕ್ಷೆ: ಬಿ.ವೈ.ರಾಘವೇಂದ್ರ

Onion Manchurian ಅಬ್ಬಬ್ಬಾ ಎಂಥಾ ರುಚಿ ತಪ್ಪದೇ ಈ ರೆಸಿಪಿ ಟ್ರೈ ಮಾಡಿ…

Onion Manchurian ಅಬ್ಬಬ್ಬಾ ಎಂಥಾ ರುಚಿ ತಪ್ಪದೇ ಈ ರೆಸಿಪಿ ಟ್ರೈ ಮಾಡಿ…

ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ನಿರಂತರ ಮಳೆ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ನಿರಂತರ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

1-24-saturday

Daily Horoscope: ಅನಿರೀಕ್ಷಿತ ಧನಾಗಮ ಸಂಭವ, ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು

COuncil

Legislative Council: ಮತ್ತೆ ಕಲಾಪ ನುಂಗಿದ ವಾಲ್ಮೀಕಿ ನಿಗಮ ಹಗರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqwewqe

Microsoft ತಾಂತ್ರಿಕ ಸಮಸ್ಯೆ: ಸಾಫ್ಟ್ ವೇರ್‌ ಅಪ್‌ಡೇಟ್‌ ಮಾಡಲು ಕೇಂದ್ರ ಸಲಹೆ

1-reccc

Chenab; ಆ.15ಕ್ಕೆ ಅತೀ ಎತ್ತರದ ರೈಲು ಸೇತುವೆ ಲೋಕಾರ್ಪಣೆ: ವಿಶೇಷತೆಗಳೇನು?

1-reasas

ISRO ಅಧ್ಯಕ್ಷರಿಗೆ ನಿವೃತ್ತಿ ಅಂಚಿನಲ್ಲಿ ಪಿಎಚ್‌.ಡಿ.; ಈಡೇರಿದ ಕನಸು

Kedarnath

Uttarakhand; ಚಾರ್‌ಧಾಮ್‌ಗಳ ಹೆಸರು ದುರ್ಬಳಕೆ ತಡೆಗೆ ಕಾಯ್ದೆ

vinay-khwatra

America; ಭಾರತದ ರಾಯಭಾರಿ ಸ್ಥಾನಕ್ಕೆ ವಿನಯ್‌ ಕ್ವಾತ್ರಾ ನೇಮಕ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Hejjaru Movie Review

Hejjaru Movie Review; ಹೆಜ್ಜಾರು ಎಂಬ ಹೊಸ ಕೌತುಕ

Bangla: ಹಿಂಸಾಚಾರಕ್ಕೆ ನಲುಗಿದ ಬಾಂಗ್ಲಾ-ದೇಶಾದ್ಯಂತ ಕರ್ಫ್ಯೂ ಜಾರಿ: ಭಾರತೀಯರು ವಾಪಸ್

Bangla: ಹಿಂಸಾಚಾರಕ್ಕೆ ನಲುಗಿದ ಬಾಂಗ್ಲಾ-ದೇಶಾದ್ಯಂತ ಕರ್ಫ್ಯೂ ಜಾರಿ: ಭಾರತೀಯರು ವಾಪಸ್

Hiranya

Hiranya Review; ಆ್ಯಕ್ಷನ್‌-ಥ್ರಿಲ್ಲರ್‌ನಲ್ಲಿ ನಿರ್ದಯಿ ಪಯಣ

2-shirva

Shirva: ನಾಯಿಯ ಶವ ದ್ವಿಚಕ್ರ ವಾಹನಕ್ಕೆ‌ ಕಟ್ಟಿ ಎಳೆದುಕೊಂಡು ಹೋದ ವ್ಯಕ್ತಿ: ವಿಡಿಯೋ ವೈರಲ್

by-raghavendra

Shimoga; ಕೇಂದ್ರ ಬಜೆಟ್ ನಲ್ಲಿ ಶಿವಮೊಗ್ಗಕ್ಕೆ ಪ್ರಮುಖ ಘೋಷಣೆ ನಿರೀಕ್ಷೆ: ಬಿ.ವೈ.ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.