
ಕಾರನ್ನೇ ಎರಡು ಕಿ.ಮೀ ದೂರ ಎಳೆದೊಯ್ದ ಟ್ರಕ್ : ವಿಡಿಯೋ ನೋಡುವಾಗಲೇ ಮೈ ಜುಂ ಅನ್ನುತ್ತೆ
ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಪ್ರಯಾಣಿಕರು
Team Udayavani, Sep 12, 2022, 9:16 AM IST

ಪುಣೆ : ಟ್ರಕ್ ವೊಂದು ಕಾರಿಗೆ ಢಿಕ್ಕಿ ಹೊಡೆದು ಕಾರನ್ನು ಬರೋಬ್ಬರಿ ಎರಡು ಕಿಲೋ ಮೀಟರ್ ದೂರ ಎಳೆದೊಯ್ದ ಘಟನೆ ಪುಣೆ-ಅಹ್ಮದ್‌ನಗರ ಹೆದ್ದಾರಿಯಲ್ಲಿ ಸಂಭವಿಸಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ, ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡುವಾಗಲೇ ಮೈ ಜುಂ ಅನ್ನುತ್ತೆ.
ಘಟನೆ ಕಳೆದ ಶುಕ್ರವಾರ ನಡೆದಿದ್ದು ಕಾರಿನಲ್ಲಿ ನಾಲ್ವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು, ಈ ವೇಳೆ ಕಾರಿನ ಹಿಂಭಾಗಕ್ಕೆ ಟ್ರಕ್ ಢಿಕ್ಕಿ ಹೊಡೆದು ಸುಮಾರು ಎರಡು ಕಿಲೋಮೀಟರ್ ದೂರ ರಸ್ತೆಯಲ್ಲೇ ಎಳೆದೊಯ್ದಿದೆ, ಈ ದೃಶ್ಯವನ್ನು ಹೆದ್ದಾರಿ ಬದಿಯಲ್ಲಿ ನಿಂತಿದ್ದ ಜನರು ಕಂಡಿದ್ದು ಭಯಭೀತರಾಗಿದ್ದಾರೆ.
ಟ್ರಕ್ ಕಾರನ್ನು ಎಳೆದೊಯ್ಯುವ ವೇಳೆ ಕಾರಿನ ಚಕ್ರಗಳು ಸವೆದು ಬೆಂಕಿಯ ಕಿಡಿಗಳು ಹಾರುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ : ಬಿಜೆಪಿ ಶಾಸಕ ದಡೇಸಗೂರು ವಿಡಿಯೋ ಬಿಡುಗಡೆಗೆ ಕಾಂಗ್ರೆಸ್ ಸಿದ್ಧತೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
