ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ‘ಎಣ್ಣೆ’
Team Udayavani, Sep 3, 2021, 5:46 PM IST
ಚೆನ್ನೈ: ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಸರ್ಕಾರಿ ಮಳಿಗೆಯಲ್ಲಿ ಮದ್ಯ ಖರೀದಿಗೆ ಅನುಮತಿ ಎಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯಾ ಆದೇಶ ಹೊರಡಿಸಿದ್ದಾರೆ.
ಕೋವಿಡ್ ಲಸಿಕೆ ಕುರಿತು ಸರ್ಕಾರ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೂ ಕೆಲವೊಂದಿಷ್ಟು ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ನೀಲಗಿರಿ ಜಿಲ್ಲೆಯಲ್ಲಂತೂ ಜಿಲ್ಲಾಡಳಿತ ಎಷ್ಟೇ ಕಸರತ್ತು ನಡೆಸಿದರು ಕೂಡ ಒಂದಿಷ್ಟು ಜನರು ಲಸಿಕೆ ಪಡೆಯದಿರಲು ಕುಂಟು ನೆಪ ಹೇಳುತ್ತಿದ್ದಾರಂತೆ. ಅದರಲ್ಲೂ ಕುಡುಕರು ನಾನು ಮದ್ಯ ಪಾನ ಮಾಡಿದ್ದೇನೆ (ಮಾಡುತ್ತೇನೆ) ಸದ್ಯಕ್ಕೆ ನಂಗೆ ಲಸಿಕೆ ಬೇಡ ಎಂದು ಹೇಳುತ್ತಿದ್ದಾರಂತೆ. ಮದ್ಯ ಪ್ರಿಯರ ಈ ಮಾತು ಜಿಲ್ಲಾಧಿಕಾರಿಗಳ ಕಿವಿಗಳಿಗೂ ಬಿದ್ದಿದೆ. ಪರಿಣಾಮ ಅವರು ಜಿಲ್ಲಾದ್ಯಂತ ಹೊಸ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಮಳಿಗೆಗಲ್ಲಿ ಮದ್ಯ ಖರೀದಿಸಬೇಕಾದರೆ ಕೋವಿಡ್ ಎರಡೂ ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ತೋರಿಸುವುದು ಕಡ್ಡಾಯ. ಸರ್ಟಿಫಿಕೇಟ್ ತೋರಿಸಿದವರಿಗೆ ಮಾತ್ರ ಸರಾಯಿ ನೀಡುವಂತೆ ಜಿಲ್ಲಾಧಿಕಾರಿ ದಿವ್ಯಾ ಅವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಇನ್ನು ತಮ್ಮ ಆದೇಶದ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಈಗಾಗಲೇ ಹಲವು ಲಸಿಕಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಶೇಕಡಾ 97% ಜನರು ಲಸಿಕೆ ಪಡೆಯಲು ಮುಂದೆ ಬಂದಿದ್ದಾರೆ. ಕೆಲವೊಂದಿಷ್ಟು ಜನರು (ಮದ್ಯ ಪ್ರಿಯರು) ಕುಂಟು ನೆಪ ಹೇಳಿಕೊಂಡು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ನಾವು ಈ ಆದೇಶ ಹೊರಡಿಸಿದ್ದೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋವಿಡ್ ಪರಿಸ್ಥಿತಿ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ
ಪರಾರಿಯಾಗುವ ವೇಳೆ ಗುರುದ್ವಾರಕ್ಕೆ ನುಸುಳಿ ಅಟ್ಟಹಾಸ ತೋರಿದ್ದ ಅಮೃತಪಾಲ್ ಸಿಂಗ್
ಕಾಂಚೀಪುರಂ ಪಟಾಕಿ ಘಟಕದಲ್ಲಿ ಅಗ್ನಿ ಅವಘಡ ; ಕನಿಷ್ಠ 8 ಜನ ಮೃತ್ಯು
ದೆಹಲಿಯಲ್ಲಿ ಪ್ರಧಾನಿ ವಿರುದ್ಧ ಪೋಸ್ಟರ್ ಅಭಿಯಾನ:100 ಎಫ್‌ಐಆರ್,6 ಜನ ಅರೆಸ್ಟ್
ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್ ನಾಯ್ಕ ಗಡಿಪಾರು?