
ಭಾರತದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 2000ಕ್ಕೆ ಏರಿಕೆ ; ಮಹಾಮಾರಿಗೆ 53 ಬಲಿ
Team Udayavani, Apr 2, 2020, 9:21 PM IST

ನವದೆಹಲಿ: ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಸ್ಥಿತಿ 9ನೇ ದಿನಕ್ಕೆ ಕಾಲಿರಿಸಿರುವಂತೆಯೇ ದೇಶದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಎರಡು ಸಾವಿರದ ಗಡಿಯನ್ನು ಮುಟ್ಟಿದೆ. ಮತ್ತು ಈ ಮಹಾಮಾರಿ ಸೋಂಕಿಗೆ ಇದುವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 53 ಜನರು ಬಲಿಯಾಗಿದ್ದಾರೆ. ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯ ಈ ಮಾಹಿತಿಯನ್ನು ನೀಡಿದೆ.
ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಸಂವಾದವನ್ನು ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿಯವರು ಕೋವಿಡ್ 19 ವೈರಸ್ ನಿಯಂತ್ರಿಸುವಲ್ಲಿ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಕುರಿತಾದ ಮಾಹಿತಿಯನ್ನು ಪಡೆದರು.
ಮುಂಬರುವ ದಿನಗಳಲ್ಲಿ ಕೋವಿಡ್ 19 ವೈರಸ್ ಪರೀಕ್ಷೆ, ಪತ್ತೆ, ಐಸೊಲೇಷನ್ ಮತ್ತು ಕ್ವಾರೆಂಟೈನ್ ಕಡೆಗೆ ರಾಜ್ಯಗಳು ಹೆಚ್ಚಿನ ಗಮನವನ್ನು ನೀಡಬೇಕು ಎಂದು ಪ್ರಧಾನಿಯವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಇದೇ ವೇಳೆ ವಿಶ್ವಾದ್ಯಂತ ಕೋವಿಡ್ 19 ವೈರಸ್ ಸೋಂಕುಪೀಡಿತರ ಸಂಖ್ಯೆ 10 ಲಕ್ಷಕ್ಕೆ ತಲುಪುವ ಹಂತದಲ್ಲಿದೆ (982,207) ಮತ್ತು 50 ಸಾವಿರ ಜನರು ಈಗಾಗಲೇ ತಮ್ಮ ಪ್ರಾಣವನ್ನು ತೆತ್ತಿದ್ದಾರೆ. 2ಲಕ್ಷದಷ್ಟು ಜನ ಈ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅಮೆರಿಕಾದಲ್ಲಿ 227,061 ಜನ ಈ ಸೋಂಕಿನಿಂದ ಬಾಧಿತರಾಗಿದ್ದಾರೆ ಮತ್ತು ಇಲ್ಲಿ ಈಗಾಗಲೇ 5,345 ಸಾವುಗಳು ಸಂಭವಿಸಿದೆ. ಇಟಲಿಯಲ್ಲಿ 13,915 ಜನ ಈ ಮಾರಕ ಸೋಂಕಿಗೆ ಬಲಿಯಾಗಿದ್ದರೆ, ಸ್ಪೈನ್ ನಲ್ಲಿ 10 ಸಾವಿರ ಜನ ಸಾವನ್ನಪ್ಪಿದ್ದರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajasthan Election; ಬಿಜೆಪಿ ಸಂಸದ ರಮೇಶ್ ಬಿಧುರಿಗೆ ಚುನಾವಣಾ ಜವಾಬ್ದಾರಿ

Kashmir; ಈ ವರ್ಷ ಜಂಟಿ ಕಾರ್ಯಾಚರಣೆಯಲ್ಲಿ 31 ಭಯೋತ್ಪಾದಕರ ಅಂತ್ಯ

Thane ನಕಲಿ ಕರೆನ್ಸಿ ಪ್ರಕರಣ; ಉಗ್ರ’ಅಂಕಲ್’ಸೇರಿ ನಾಲ್ವರ ವಿರುದ್ಧ ಎನ್ಐಎ ಚಾರ್ಜ್ ಶೀಟ್

Miracle: ಈ ರೋಗಿಯ ಹೊಟ್ಟೆಯಲ್ಲಿತ್ತು ನಟ್, ಬೋಲ್ಟ್ ಸೇರಿ 15 ಕ್ಕೂ ಹೆಚ್ಚು ವಸ್ತುಗಳು…

Hyderabad: 1.25 ಕೋಟಿ ರೂ. ಗೆ ಹರಾಜಾಯಿತು ಗಣಪತಿಯ ಲಡ್ಡು ಪ್ರಸಾದ