ಸಗಣಿ ಚಿಪ್‌ನಿಂದ ತಗ್ಗುತ್ತದೆ ಮೊಬೈಲ್ ರೇಡಿಯೇಷನ್
Team Udayavani, Oct 14, 2020, 6:30 AM IST
ಹೊಸದಿಲ್ಲಿ: ಸಗಣಿಯಿಂದ ಸಿದ್ಧಪಡಿಸಿದ ಚಿಪ್ ಮೊಬೈಲ್ ರೇಡಿಯೇಷನ್ ತಡೆಯುತ್ತದೆ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ ಎಂದು ರಾಷ್ಟ್ರೀಯ ಗೋ ಆಯೋಗದ ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ಸಗಣಿಗೆ ರೇಡಿಯೇಷನ್ ಅನ್ನು ತಡೆಯಲು ಮತ್ತು ಪ್ರಭಾವ ತಗ್ಗಿಸುವ ಸಾಮರ್ಥ್ಯವಿದೆ ಎಂದರು. ಜತೆಗೆ ಸುದ್ದಿಗೊಷ್ಠಿಯಲ್ಲಿ ನೂತನವಾಗಿ ತಯಾರಿಸ ಲಾದ ಚಿಪ್ ಅನ್ನು ಪ್ರದರ್ಶಿಸಿದರು. ಮೊಬೈಲ್‌ಗಳಲ್ಲಿ ಈ ಚಿಪ್ ಅಳವಡಿಸಿದರೆ, ರೇಡಿಯೇಷನ್ ಪ್ರಮಾಣ ತಗ್ಗಿಸುತ್ತದೆ ಮತ್ತು ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ ಕುಮಾರ್ ಆರೋಗ್ಯ ಕಾರಣಕ್ಕೆ ಗೋ ಮೂತ್ರ ಸೇವಿಸುವುದಾಗಿ ಹೇಳಿದ್ದರು. ಅದರಿಂದ ಅವರಿಗೆ ಧನಾತ್ಮಕ ಪರಿಣಾಮಗಳು ಉಂಟಾದ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
33 ಕೋಟಿ ದೀಪಗಳು: ಗೋ ಮೂತ್ರದಿಂದ ಸ್ಯಾನಿಟೈಸರ್ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿರುವ ಆಯೋಗ ಸಗಣಿಯಿಂದ ಸಿದ್ಧಪಡಿಸುವ 33 ಕೋಟಿ ದೀಪಗಳ ಬಳಕೆಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಈ ಮೂಲಕ ದೀಪಾವಳಿ ಅವಧಿಯಲ್ಲಿ ಚೀನ ನಿರ್ಮಿತ ಹಣತೆ ಬಳಕೆ ತಗ್ಗಿಸಲು ಪ್ರಯತ್ನ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
4 ದಿನಗಳಲ್ಲಿ 12 ಉಗ್ರರ ಸಂಹಾರ; ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ
ಬಿಹಾರದಲ್ಲಿ ಅತಿದೊಡ್ಡ ಚಿನ್ನದ ನಿಕ್ಷೇಪ : ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲು ತಯಾರಿ
ತಿರುಪತಿಯಲ್ಲಿ ಭಕ್ತ ಜನ ಸಾಗರ : “ಕೆಲ ದಿನಗಳ ಕಾಲ ತಿರುಪತಿಗೆ ಬರಬೇಡಿ’
ಗೋವಾದಲ್ಲಿ ಕ್ರೈಸ್ತ ಪಾದ್ರಿ ಬಂಧನ : ಮತಾಂತರ ಸಹಿಸುವುದಿಲ್ಲ ಎಂದ ಸಿಎಂ ಸಾವಂತ್
ರಾಜ್ಯಗಳ ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ: ಉಪರಾಷ್ಟ್ರಪತಿ ನಾಯ್ಡು