
ಯಾಸ್ ಚಂಡಮಾರುತ : ಪ್ರಧಾನಿ ನೇತೃತ್ವದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ
Team Udayavani, May 23, 2021, 1:32 PM IST

ನವ ದೆಹಲಿ : ಬಂಗಾಳಕೊಲ್ಲಿಯಲ್ಲಿ ಸಂಭವಿಸಲಿಕ್ಕಿರುವ ಯಾಸ್ ಚಂಡಮಾರುತದ ಪೂರ್ವ ಸಿದ್ಧತೆಯ ಕುರಿತಾಗಿ ಇಂದು(ಆದಿತ್ಯವಾರ, ಮೇ, 23) ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳ ಸಭೆ ಕರೆದು ಪರಿಶೀಲಿಸಿದ್ದಾರೆ.
ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿರಿಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ ಡಿಎಂಎ) ಪ್ರತಿನಿಧಿಗಳು, ಟೆಲಿಕಾಂ, ವಿದ್ಯುತ್, ನಾಗರಿಕ ವಿಮಾನಯಾನ, ಭೂ ವಿಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು ಭಾಗವಹಿಸಿ ಯಾಸ್ ಚಂಡಮಾರುತದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಇದನ್ನೂ ಓದಿ : ಕೋವಿಡ್ ಓಡಿಸಲು ಗ್ರಾಮದ ನಾಲ್ಕು ದಿಕ್ಕಿಗೆ ಮಂತ್ರಿಸಿದ ತೆಂಗಿನಕಾಯಿ ಕಟ್ಟಿದ ಗ್ರಾಮಸ್ಥರು.!
ಏತನ್ಮಧ್ಯೆ, ಯಾಸ್ ಅತ್ಯಂತ ತೀವ್ರವಾದ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಮತ್ತು ಮೇ 26 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕಡಲ ತೀರಗಳನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶನಿವಾರ (ಮೇ 22, 2021) ಹೇಳಿದೆ.
ಇನ್ನು, ಯಾಸ್ ಚಂಡಮಾರುತಕ್ಕೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರತೀಯ ಸೇನೆಯು ಶನಿವಾರ (ಮೇ 22) ಎಲ್ಲಾ ರಕ್ಷಣಾ ಸಿದ‍್ದತೆಗಳನ್ನು ವ್ಯವಸ್ಥೆಗೊಳಿಸಿದೆ ಎಂದು ತಿಳಿಸಿದೆ ಮತ್ತು ಎಂಜಿನಿಯರ್ ಕಾರ್ಯಪಡೆಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಸನ್ನದ್ಧವಾಗಿದೆ ಎಂದು ಮಾಹತಿ ನೀಡಿದೆ.
ಸೈನ್ಯದ ಹೊರತಾಗಿ, ಭಾರತೀಯ ನೌಕಾಪಡೆ ತನ್ನ ಸಿದ್ಧತೆಗಳನ್ನು ತಿಳಿಸಿತು ಮತ್ತು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ನೊಂದಿಗೆ ತುರ್ತು ಕಾರ್ಯಾಚರಣೆಗಾಗಿ ನಾಲ್ಕು ವಿಶೇಷ ನೌಕೆಗಳನ್ನು ಕೂಡು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಅಲ್ಲದೆ, ಮೇ 24 ಮತ್ತು ಮೇ 26 ರ ನಡುವೆ ಬಂಗಾಳ-ಒಡಿಶಾ ಕರಾವಳಿಯಲ್ಲಿ ಯಾಸ್ ಚಂಡ ಮಾರುತದ ಕಾಋಣದಿಂದಾಗಿ ಕೆಲವೆಡೆ ಭೂಕುಸಿತ ಸಂಭವಿಸುವ ಸಾದ‍್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು, ಈಶಾನ್ಯ ರೈಲ್ವೆ, ರಾಷ್ಟ್ರ ರಾಜಧಾನಿಯಿಂದ ಒಡಿಶಾದ ಭುವನೇಶ್ವರ ಮತ್ತು ಪುರಿಗೆ ಹೋಗುವ ಬಹುತೇಕ ಎಲ್ಲಾ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಆದೇಶ ಹೊರಡಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಭದ್ರತಾ ಪಡೆಯ ಭರ್ಜರಿ ಬೇಟೆ: ಅಸ್ಸಾಂನಲ್ಲಿ ಆರು ಮಂದಿ ಉಗ್ರರು ಎನ್ ಕೌಂಟರ್ ನಲ್ಲಿ ಹತ್ಯೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi; ಹುಡುಕಾಟದ ನಂತರ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಇಡಿ

Mumbaiಮೂರು ಪಕ್ಷಗಳ ಸರಕಾರವಿದ್ದರೂ ಬಿಜೆಪಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಫಡ್ನವೀಸ್

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ

BJP ಸಖ್ಯ ತೊರೆಯಲು ಕಾರಣ ಹೇಳಿದ AIADMK ಅಧ್ಯಕ್ಷ ಪಳನಿಸ್ವಾಮಿ

Rajouri;ಮೂರನೇ ದಿನಕ್ಕೆ ಕಾಲಿಟ್ಟ ಅಡಗಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ

Delhi; ಹುಡುಕಾಟದ ನಂತರ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಇಡಿ

Mumbaiಮೂರು ಪಕ್ಷಗಳ ಸರಕಾರವಿದ್ದರೂ ಬಿಜೆಪಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಫಡ್ನವೀಸ್

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ

BMTC ಯಲ್ಲಿ ಭಾರಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಬಂಧನ

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ