

Team Udayavani, May 6, 2019, 6:05 AM IST
ಹೊಸದಿಲ್ಲಿ: 2018-19ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಇ-ಫೈಲಿಂಗ್ ಮಾಡುವವರ ಸಂಖ್ಯೆ ಇಳಿಕೆಯಾಗಿರುವುದು ಆದಾಯ ತೆರಿಗೆ ಇಲಾಖೆಯ ಅಚ್ಚರಿಗೆ ಕಾರಣ ವಾಗಿದೆ.
2016-17ರಲ್ಲಿ 5.28 ಕೋಟಿ ಯಷ್ಟು ಇ-ಫೈಲಿಂಗ್ ಆಗಿತ್ತು. 2017- 18ರಲ್ಲಿ ಇದು 6.74 ಕೋಟಿಗೆ ಏರಿಕೆಯಾಗಿ ತ್ತಾದರೂ, 2018-19ರಲ್ಲಿ 6.68 ಕೋಟಿಗೆ ಇಳಿದಿದೆ ಎಂದು ಇಲಾಖೆಯ ವೆಬ್‌ಸೈಟ್‌ನಲ್ಲೂ ಹೇಳಲಾಗಿದೆ. ಇದೇ ವಿಚಾರ ವಾಗಿ, ಕಳೆದ ತಿಂಗಳ 30ರಂದು ಕೋಟಕ್ ಎಕನಾಮಿಕ್ ರಿಸರ್ಚ್ ಎಂಬ ಸಂಸ್ಥೆಯು ವರದಿ ತಯಾರಿಸಿದ್ದು, ಅದರಲ್ಲಿ ಇ-ಫೈಲಿಂಗ್ ಇಳಿಮುಖ ವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿ ಸಿದೆ. ನೋಟು ಅಮಾನ್ಯದ ಅನಂತರ ವರ್ಷದಿಂದ ವರ್ಷಕ್ಕೆ ಇ-ಫೈಲಿಂಗ್ ಸಂಖ್ಯೆ ವೃದ್ಧಿಯಾಗುತ್ತದೆಂದು ಇಲಾಖೆ ನಿರೀಕ್ಷಿಸಿತ್ತು. ಇದು ಹುಸಿಯಾಗಿರುವುದು ಅಚ್ಚರಿ ತಂದಿದೆ ಎನ್ನಲಾಗಿದೆ
Ad
You seem to have an Ad Blocker on.
To continue reading, please turn it off or whitelist Udayavani.