ವಕೀಲ ಗೌತಮ್ ಖೇತಾನ್ ಇಡಿ ಕಸ್ಟಡಿ ಮತ್ತೆ 6 ದಿನ ವಿಸ್ತರಣೆ
Team Udayavani, Feb 2, 2019, 11:45 AM IST
ಹೊಸದಿಲ್ಲಿ : ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಓರ್ವ ಆರೋಪಿಯಾಗಿರುವ ವಕೀಲ ಗೌತಮ್ ಖೇತಾನ್ ಅವರ ಜಾರಿ ನಿರ್ದೇಶನಾಲಯದ (ED) ಕಸ್ಟಡಿಯನ್ನು ದಿಲ್ಲಿ ನ್ಯಾಯಾಲಯ ಆರು ದಿನಗಳ ಮಟ್ಟಿಗೆ ವಿಸ್ತರಿಸಿದೆ.
ಗೌತಮ್ ಖೇತಾನ್ ಅವರು ಕಪ್ಪು ಹಣ ಹೊಂದಿದ್ದಾರೆ ಮತ್ತು ಹಣ ಅಕ್ರಮ ನಡೆಸಿದ್ದಾರೆ ಎಂಬ ಹೊಸ ಆರೋಪದಿಂದಾಗಿ ಅವರ ಇಡಿ ಕಸ್ಟಡಿಯನ್ನು ಕೋರ್ಟ್ ವಿಸ್ತರಿಸಿರುವುದಾಗಿ ತಿಳಿದು ಬಂದಿದೆ.
ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ವಕೀಲ ಗೌತಮ್ ಖೇತಾನ್ ಅವರನ್ನು ಹಣ ಅಕ್ರಮ ತಡೆ ಕಾಯಿದೆ (ಪಿಎಂಎಲ್ಎ) ಪ್ರಕಾರ ಕಳೆದ ಜನವರಿ 25ರಂದು ಬಂಧಿಸಲಾಗಿತ್ತು. ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರು ಖೇತಾನ್ ರ ಇಡಿ ಕಸ್ಟಡಿಯನ್ನು ಇನ್ನೂ ಆರು ದಿನಗಳಿಗೆ ವಿಸ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್ನ ಮಂತ್ರ: ಮೋದಿ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ