
ದೇವೇಂದ್ರ ಫಡ್ನವೀಸ್‌ಗೆ ಮಹಾ ಗೃಹ, ಆರ್ಥಿಕ ಹೊಣೆ
Team Udayavani, Aug 15, 2022, 7:15 AM IST

ಮುಂಬಯಿ: ಸಚಿವ ಸಂಪುಟ ವಿಸ್ತರಣೆ ಮಾಡಿ ಐದು ದಿನಗಳ ಅನಂತರ, ರವಿವಾರ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರು ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರಿಗೆ ಮಹತ್ವದ ಇಲಾಖೆಗಳಾದ ಗೃಹ ಇಲಾಖೆ, ಆರ್ಥಿಕ ಇಲಾಖೆ ಜತೆಗೆ ಯೋಜನಾ ಸಚಿವಾಲಯದ ಜವಾಬ್ದಾರಿ ಕೊಡಲಾಗಿದೆ.
ಬಿಜೆಪಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್‌ಗೆ ಕಂದಾಯ ಇಲಾಖೆಯನ್ನು ಕೊಡಲಾಗಿದೆ. ಉಳಿದಂತೆ ಬಿಜೆಪಿಯ ಸುಧೀರ್ ಮುಂಗಂಟಿವಾರ್‌ಗೆ ಅರಣ್ಯ ಇಲಾಖೆ, ಚಂದ್ರಕಾಂತ್ ಪಾಟೀಲ್‌ಗೆ ಉನ್ನತ-ತಾಂತ್ರಿಕ ಶಿಕ್ಷಣ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಏಕನಾಥ ಶಿಂಧೆ ಬಣದ ದೀಪಕ್ ಕೇಸರ್ಕರ್ ಅವರಿಗೆ ಶಿಕ್ಷಣ ಇಲಾಖೆ, ಅಬ್ದುಲ್ ಸತ್ತಾರ್ ಅವರಿಗೆ ಕೃಷಿ ಇಲಾಖೆ ನೀಡಲಾಗಿದೆ. ನಗರಾಭಿವೃದ್ಧಿ ಮತ್ತು 11 ಇಲಾಖೆಗಳನ್ನು ಸಿಎಂ ಶಿಂಧೆ ಅವರು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.
ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಅನಂತರ ಶಿಂಧೆ ಅವರು 41 ದಿನಗಳ ಕಾಲ ಡಿಸಿಎಂ ಫಡ್ನವೀಸ್ ಅವರೊಂದಿಗೆ ದ್ವಿಸದಸ್ಯ ಸರಕಾರ ನಡೆಸಿದ್ದು, ಆ.9ರಂದು 18 ಸಚಿವರನ್ನು ಸೇರಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ

BJP ಸಖ್ಯ ತೊರೆಯಲು ಕಾರಣ ಹೇಳಿದ AIADMK ಅಧ್ಯಕ್ಷ ಪಳನಿಸ್ವಾಮಿ

Rajouri;ಮೂರನೇ ದಿನಕ್ಕೆ ಕಾಲಿಟ್ಟ ಅಡಗಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ

Tragic Love Story: ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ; ಆಘಾತದಿಂದ ನೇಣಿಗೆ ಶರಣಾದ ಪ್ರಿಯತಮೆ

Server Issue: ವಿಮಾನ ವಿಳಂಬ… ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ
MUST WATCH
ಹೊಸ ಸೇರ್ಪಡೆ

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ

Gaming App Case:ಬಾಲಿವುಡ್ ನಟ ರಣಬೀರ್ ಕಪೂರ್ ಗೆ ಜಾರಿ ನಿರ್ದೇಶನಾಲಯದ ಸಮನ್ಸ್ ಜಾರಿ

BJP ಸಖ್ಯ ತೊರೆಯಲು ಕಾರಣ ಹೇಳಿದ AIADMK ಅಧ್ಯಕ್ಷ ಪಳನಿಸ್ವಾಮಿ

LPG Cylinders: ಪ್ರಧಾನಮಂತ್ರಿ ಉಜ್ವಲ ಸ್ಕೀಮ್ ಸಬ್ಸಿಡಿ ಏರಿಕೆ, 600 ರೂ.ಗೆ LPG ಸಿಲಿಂಡರ್

Sagara ಶೈಲೇಶಚಂದ್ರ ವರದಿಯ ಸಂಪೂರ್ಣ ಅನುಷ್ಠಾನಕ್ಕೆ ಗ್ರಾಮೀಣ ಅಂಚೆ ನೌಕರರ ಒತ್ತಾಯ